ಬಂಟ್ವಾಳ ಜೆ.ಡಿ.ಬಾಯ್ಸ್ ತಂಡದಿಂದ ಆರ್ಥಿಕ ನೆರವು

ಬಂಟ್ವಾಳ, ಮೇ ೩೧- ರಸ್ತೆ ಅಪಘಾತದಲ್ಲಿ ಗಾಯಗೊಂಡು ಮನೆಯಲ್ಲಿರುವ ಯುವಕನೋರ್ವನ ಕುಟುಂಬಕ್ಕೆ ಬಂಟ್ವಾಳ ಜೆ.ಡಿ.ಬಾಯ್ಸ್ ತಂಡದಿಂದ ಆರ್ಥಿಕ ನೆರವು ನೀಡಲಾಯಿತು. ಮೇ ೧೬ ರಂದು ಉಪ್ಪಿನಂಗಡಿಯಲ್ಲಿ ಅಪಘಾತಗೊಳಗಾಗಿ ತನ್ನ ಬಲ ಕಣ್ಣಿನ ದೃಷ್ಟಿಯನ್ನು ಕಳೆದುಕೊಂಡ ವಾಮದಪದವು ಸಮೀಪದ ಅಜ್ಜಿಬೆಟ್ಟು ಗ್ರಾಮದ ಪಚ್ಚೆರಿಪಲ್ಲೆ ಕೊರಗಟ್ಟೆಯ ತಿಲೇಶ್ ಪೂಜಾರಿ ಅವರ ಕುಟುಂಬಕ್ಕೆ ತಿಂಗಳ ದಿನಸಿ ಹಾಗೂ ರೂ.೧೦೦೦೦/- ಧನಸಹಾಯವನ್ನು ಮೇ ೩೦ ರಂದು ಆದಿತ್ಯವಾರ ಜೆ. ಡಿ ಬಾಯ್ಸ್ ಬಂಟ್ವಾಳ ತಂಡದ ಸದಸ್ಯರು ವಿತರಿಸಿದರು.