ಬಂಟರ ಸಂಘದ ವಾರ್ಷಿಕ ಮಹಾಸಭೆ


ದಾವಣಗೆರೆ.ನ.೧೧; ದಾವಣಗೆರೆ- ಚಿತ್ರದುರ್ಗ ಜಿಲ್ಲಾ ಬಂಟರ ಸಂಘದ ವಾರ್ಷಿಕ ಮಹಾಸಭೆಯು ಕುಂದುವಾಡ ರಸ್ತೆಯಲ್ಲಿರುವ ಸಂಘದ ಸ್ವಂತ ಕಟ್ಟಡ “ ಡಾ . ಶ್ಯಾಮಸುಂದರ ಶೆಟ್ಟಿ ಬಂಟರ ಭವನ ” ದಲ್ಲಿ ಸಂಘದ ಅಧ್ಯಕ್ಷರಾದ ಡಾ . ಎಂ . ಪ್ರಭಾಕರ ಶೆಟ್ಟಿಯವರ  ಅಧ್ಯಕ್ಷತೆಯಲ್ಲಿ ನೆರವೆರೀತು , ಸಂಘದ ಕಾರ್ಯದರ್ಶಿಯವರಾದ  ಸಿಎ . ಉಮೇಶ ಶೆಟ್ಟಿಯವರು ಸರ್ವರನ್ನು ಸ್ವಾಗತಿಸಿ , ಹಿಂದಿನ ಸಭೆಯ ನಡವಳಿಕೆಗಳನ್ನು ಓದಿ ಹೇಳಿದರು  2021-24ರ ಅವರಿಗೆ ಹಾಲಿ ಕಾರ್ಯಕಾರಿ ಸಮಿತಿಯನ್ನು ಮುಂದುವರಿಸಲು ತೀರ್ಮಾನಿಸಲಾಯಿತು . ನಿರ್ದೇಶಕರಾದ ಕೆ . ಮೋಹನಾದಾಸ ಶೆಟ್ಟಿಯವರು ಧನ್ಯವಾದ ಸಮರ್ಪಿಸಿದರು . ನಂತರ ನಡೆದ ವಾರ್ಷಿಕೋತ್ಸವ ಸಮಾರಂಭದ ಮುಖ್ಯ ಅತಿಥಿಗಳಾಗಿ ಆಗಮಿಸಿದ ರಾಜೀವ್‌ಗಾಂದಿ ಆರೋಗ್ಯ ವಿಶ್ವವಿದ್ಯಾನಿಲಯದ ನಿವೃತ್ತ ಕುಲಪತಿಗಳೂ ಹಾಗೂ ಆದಿಚುಂಚನಗಿರಿ ವಿಶ್ವವಿದ್ಯಾನಿಲಯದ ಹಾಲಿ ಕುಲಪತಿಗಳೂ ಆದ ಪ್ರೊ . ಡಾ . ಎಸ್ . ಚಂದ್ರಶೇಖರ ಶೆಟ್ಟಿಯವರು ಮಾತನಾಡಿ ಜೀವನದಲ್ಲಿ ಸಾಧನೆ ಮಾಡಬೇಕಾದರೆ , ಗುರಿಯನ್ನು ಸಾಧಿಸುವ ಛಲವಿರಬೇಕು ಎಂದು ತಿಳಿಸಿ ಯುವಕ ಯುವತಿಯರಿಗೆ ಸ್ಫೂರ್ತಿ ತುಂಬಿದರು ಹಾಗೆಯೇ ದಾವಣಗೆರೆ ಚಿತ್ರದುರ್ಗ ಜಿಲ್ಲಾ ಬಂಟರ ಸಂಘ ಕಡಿಮೆ ಸದಸ್ಯರನ್ನು ಹೊಂದಿದ್ದರೂ ಉತ್ತಮ ಸಾಧನೆ ಮಾಡಿದೆ ಎಂದು ಅಭಿನಂದಿಸಿದರು . ಇನ್ನೊಬ್ಬ ಮುಖ್ಯ ಅತಿಥಿಗಳಾದ  ರಾಜೇಂದ್ರ .ವಿ . ಶೆಟ್ಟಿ ಮಾಲೀಕರು ಪಂಜುರ್ಲಿ ಗ್ರೂಪ್ ಆಫ್ ಹೊಟೇಲ್ಸ್ ಹುಬ್ಬಳ್ಳಿ ಅವರು ಮಾತನಾಡಿ ಬಂಟ ಸಮಾಜದವರು ಸಾಹಸಿ ಮನೋಬಾವದವರು , ಇಂದು ಪ್ರಪಂಚದಾದ್ಯಂತ ಎಲ್ಲಾ ರಂಗಗಳಲ್ಲಿ ಸಾಧನೆ ಮಾಡಿ ಮಂಚೂಣಿಯಲ್ಲಿರುವುದು ನಮಗೆಲ್ಲರಿಗೂ ಹೆಮ್ಮೆ ತಂದಿದೆ . ಅದೇ ರೀತಿ ದಾವಣಗೆರೆ ನಗರದಲ್ಲಿ ನೂರು ಕುಟುಂಬಗಳನ್ನು ಹೊಂದಿರುವ ಸಂಘ ಇಂತಹ ಸುಂದರ ಕಲ್ಯಾಣ ಮಂಟಪ ಕಟ್ಟಿರುವುದು ನಿಜಕ್ಕೂ ಸಾಧನೆ ಎಂದು ಎಲ್ಲರನ್ನು ಅಭಿನಂಧಿಸಿದರು . ಮೊದಲಿಗೆ ನಮ್ಮನ್ನೆಲ್ಲ ಅಗಲಿದ ಕಟ್ಟಡ ಸಮಿತಿಯ ಅಧ್ಯಕ್ಷರಾದ ದಿ. ಡಾ . ಶಾರದಾ .ಎಸ್ . ಶೆಟ್ಟಿ ಯವರ ಆತ್ಮಕ್ಕೆ ಚಿರಶಾಂತಿ ಕೋರಲಾಯಿತು . ದಾವಣಗೆರೆ ನಗರ ಸಭೆಯ ಮಾಜಿ ಅಧ್ಯಕ್ಷರು , ಸಂಘದ ನಿರ್ದೆಶಕರಾದ  ದಿನೇಶ .ಕೆ . ಶೆಟ್ಟಿ ಯವರು ಸರ್ವರನ್ನು ಸ್ವಾಗತಿಸಿದರು ಹಾಗೂ ಸಂಘದ ಕಾರ್ಯದರ್ಶಿಯಾದ ಸಿಎ . ಉಮೇಶ ಶೆಟ್ಟಿಯವರು ಧನ್ಯವಾದ ಸಮರ್ಪಿಸಿದರು .