ಬಂಜೆತನ ಮುಕ್ತ ಕರ್ನಾಟಕಕ್ಕಾಗಿ ಐ.ವಿ.ಎಫ್ ಅಭಿಯಾನ

ಕೋಲಾರ, ಸೆ, ೧೩- ಬೆಂಗಳೂರಿನ ಗರ್ಭಗುಡಿ ಐ.ವಿ.ಎಫ್ ಕೇಂದ್ರದ ಸಹಕಾರದೊಂದಿಗೆ ಗರ್ಭಜ್ಞಾನ್ ಫೌಂಡೇಷನ್ ಹಾಗೂ ಸುವರ್ಣ ದೀಪ ವಿಷ್ಯೋಯೆಲಿ ಇಂಪೇರ್‍ಡ್ ಅಂಡ್ ಫೀಜಿಕಲಿ ಛಾಲೇಂಜ್ ಡೆವೆಲಪ್‌ಮೆಂಟ್ ಟ್ರಸ್ಟ್ ಸೇರಿದಂತೆ ಈ ಮೂರು ಸಂಸ್ಥೆಗಳ ಸಹಯೋಗದಲ್ಲಿ ಬಂಜೆತನ ಮುಕ್ತ ಕರ್ನಾಟಕಕ್ಕಾಗಿ ಕೈ ಜೋಡಿಸುವ ಅಭಿಯಾನವನ್ನು ರಾಜ್ಯಾದಾದ್ಯಂತ ಅಯೋಜಿಸಿದ್ದು ೩೦ ಜಿಲ್ಲೆಗಳಲ್ಲಿ ಯಶಸ್ವಿಯಾಗಿ ಪೂರೈಸಿದ್ದು ಕೋಲಾರಕ್ಕೆ ಅಗಮಿಸಿದೆ ಎಂದು ಟ್ರಸ್ಟ್‌ನ ವ್ಯವಸ್ಥಾಪಕ ನಿರ್ದೇಶಕ ಹಾಗೂ ನ್ಯಾಯವಾದಿ ದೀಪಕ್ ಆರ್. ಸಾಗರ್ ತಿಳಿಸಿದರು,
ನಗರದ ಪತ್ರಕರ್ತರ ಭವನದಲ್ಲಿನ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ ನಮ್ಮ ಟ್ಟಸ್ಟ್ ಪ್ರಾರಂಭದಲ್ಲಿ ಕುಡಿತದಿಂದ ಉಂಟಾಗುವ ಕೆಡಕು, ವಿದ್ಯುತ್ ಸುರಕ್ಷತೆ, ಮತದಾನದ ಹಕ್ಕು ಅಭಿಯಾನದ ಜಾಗೃತಿ ಕಾರ್ಯಕ್ರಮಗಳು ಯಶಸ್ವಿಗೊಳಿಸಿದ್ದು ಇದು ೪ನೇಯ ಅಭಿಯಾನವಾಗಿದೆ. ನಗರ ಪ್ರದೇಶಗಳ ಜೂತೆಗೆ ಗ್ರಾಮಾಂತರ ಪ್ರದೇಶಗಳಲ್ಲಿನ ಹಲವು ಸಮಸ್ಯೆಗಳನ್ನು ಬಗೆಹರಿಸುವಂತ ಅರಿವು ಮೂಡಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದರು.
ಸರ್ಕಾರವು ಈ ಹಿಂದೆ ಜನಸಂಖ್ಯಾ ಸ್ಪೋಟ ನಿಯಂತ್ರಣಕ್ಕೆ ಹಲವು ಯೋಜನೆಗಳು ಸರ್ಕಾರವು ರೂಪಿಸಿದರೂ ಯಶಸ್ವಿಯಾಗುವುದರಲ್ಲಿ ವಿಫಲತೆ ಉಂಟಾಗಿತ್ತು ನಿಜ ಅದರೆ ಇಂದು ಮಕ್ಕಳಾಗದೆ ಬಂಜೆತನದ ಪ್ರಕರಣಗಳು ವ್ಯಾಪಕವಾಗಿ ಗೋಚರಿಸುತ್ತಿದೆ.ರಾಜ್ಯದಲ್ಲಿ ನಾವು ನಡೆಸಿದ ಅಧ್ಯಾಯನದಲ್ಲಿ ನಂಜನಗೊಡಿನಲ್ಲಿ ಹೆಚ್ಚಾಗಿ ಮಕ್ಕಳಾಗದೆ ಇರುವಂತ ದಂಪಂತಿಗಳ ಸಂಖ್ಯೆ ಹೆಚ್ಚಾಗಿ ಕಂಡು ಬಂದಿದೆ ಎಂದರು,
ಬಂಜೆತನ ಎಂಬುವುದು ಶಾಪಗ್ರಸ್ತವಾಗಿದೆ. ಇದರಿಂದ ಅನೇಕ ಕುಟುಂಬಗಳಲ್ಲಿ ಶಾಂತಿ, ನೆಮ್ಮದಿ ಇಲ್ಲವಾಗಿದೆ. ದಂಪತಿಗಳು ವಿಚ್ಚೇಧನ ಪಡೆಯುವಂತಾಗಿದೆ. ಅನೇಕ ಪುರುಷರು ೩-೪ ಮದುವೆಗಳಾಗಿರುವ ಪ್ರಕರಣಗಳು ಕಾಣಬಹುದಾಗಿದೆ. ಇದಕ್ಕೆಲ್ಲಾ ಮುಕ್ತಿ ಕಲ್ಪಿಸುವ ದೆಸೆಯಲ್ಲಿ ಐ,ವಿ.ಎಫ್. ಟ್ಟಸ್ಟ್ ಚಿಕಿತ್ಸೆಯ ಕೇಂದ್ರವನ್ನು ಬೆಂಗಳೂರಿನಲ್ಲಿ ಸ್ಥಾಪಿಸಿದೆ. ಸುಮಾರು ೧೦ ಸಾವಿರ ಮಕ್ಕಳ ಮೂಲಕ ಮುಕ್ತಿ ಕಲ್ಪಿಸಿದೆ ಎಂದು ವಿವರಿಸಿದರು,
ಬಂಜೆತನ ಎಂಬುವುದು ಮಹಿಳೆಯರಲ್ಲಿ ಮಾತ್ರವಲ್ಲ ಪುರುಷರಿಂದಲೂ ಬಂಜೆತನ ಕಾಣಬಹುದಾಗಿದೆ. ಇದು ಶಾಪಗ್ರಸ್ತವಲ್ಲ ಇದಕ್ಕೆ ಪರಿಹಾರವು ಇದೆ ಎಂಬುವುದರ ಅರಿವು ಸಾರ್ವಜನಿಕರಲ್ಲಿ ಉಂಟು ಮಾಡಲು ಕಲಾವಿದರ ತಂಡದೊಂದಿಗೆ ಬೀದಿ ನಾಟಕಗಳ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ. ಬಂಜೆತನ ಎಂಬುವುದು ಸಾಮಾನ್ಯವಾಗಿ ಉಷ್ಟವಲಯದಲ್ಲಿ ಕಾರ್ಯನಿರ್ವಹಿಸುವಂತವರಿಗೆ, ಹಗಲು ನಿದ್ರೆ, ಮಾನಸಿಕ ಮತ್ತು ದೈಹಿಕ ಒತ್ತಡಗಳಿಂದಾಗಿ ವೀರ್‍ಯಾಣುಗಳ ಉತ್ಪಾದನೆಯಲ್ಲಿ ದೋಷವುಂಟಾಗಿ ಬಂಜೆತನ ಕಾಡುವ ಸಾಧ್ಯತೆಗಳಿದೆ. ರಕ್ತ ಸಂಬಂಧಿಗಳಲ್ಲಿ ವಿವಾಹ ಮಾಡಿ ಕೊಳ್ಳುವುದರಿಂದ ಅಂಗವಿಕಲತೆಯ ಮಕ್ಕಳ ಜನನ ಸಾಧ್ಯತೆ ಇದೆ ಎಂದರು,
ಬಂಜೆತನ ಸಮಸ್ಯೆಗಳಿಗೆ ಸಮರ್ಪಕವಾದ ಚಿಕಿತ್ಸೆಯನ್ನು ಪಡೆಯಲು ದಂಪತಿಗಳು ಮುಜುಗರ ತೋರುವ ಹಿನ್ನಲೆಯಲ್ಲಿ ಅನೇಕ ಕುಟುಂಬಗಳು ತಮ್ಮ ಬಾಳನ್ನು ನರಕ ಮಾಡಿ ಕೊಳ್ಳುತ್ತಿದ್ದಾರೆ. ಇಂದು ಗ್ರಾಮೀಣ ಭಾಗದಲ್ಲೂ ೫೦೦ ಕುಟುಂಬಗಳಲ್ಲಿ ಕನಿಷ್ಟ ೧೦ ಕುಟುಂಬಗಳಲ್ಲಿ ಬಂಜೆತನ ಕಾಡುತ್ತಿರುತ್ತದೆ. ಮನೆಯಲ್ಲಿ ಒಂದು ಮಗು ಇದ್ದರೆ ಅಂಥ ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿಗಳಿಂದ ತುಂಬಿ ತುಳುಕುತ್ತಿರುತ್ತದೆ ಎಂದು ಹೇಳಿದರು,