ಬಂಜೆತನ ನಿವಾರಣೆ ಸಮಾಲೋಚನಾ ಶಿಬಿರ

ಬ್ಯಾಡಗಿ,ಜೂ10 : ಬದಲಾದ ಆಧುನಿಕ ಮತ್ತು ತಾಂತ್ರಿಕ ಜೀವನ ಶೈಲಿಯಿಂದ ಇತ್ತೀಚಿನ ದಿನಗಳಲ್ಲಿ ಅನೇಕರಲ್ಲಿ ಬಂಜೆತನಕ್ಕೆ ಕಾರಣವಾಗಿದೆ ಎಂದು ತಜ್ಞವೈದ್ಯೆ ಡಾ.ವರದಾ ಕಿರಣ ಹೇಳಿದರು.
ಪಟ್ಟಣದ ಸ್ತ್ರೀಶಕ್ತಿ ಭವನದಲ್ಲಿ ರೋಟರಿ ಕ್ಲಬ್ ಬ್ಯಾಡಗಿ ಹಾಗೂ ಕಡ್ಲಿ ಐವಿಎಫ್ ಸೆಂಟರ್ ಮತ್ತು ಕಡ್ಲಿ ನಿಂಗಮ್ಮ ಮೆಮೋರಿಯಲ್ ಹಾಸ್ಪಿಟಲ್ ದಾವಣಗೆರೆ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಉಚಿತ ಬಂಜೆತನ ನಿವಾರಣೆ ಸಮಾಲೋಚನೆ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀಚಿನ ವರ್ಷಗಳಲ್ಲಿ ಈ ಬಂಜೆತನ ಸಮಸ್ಯೆಯೂ 10 ಮಹಿಳೆಯರ ಪೈಕಿ ಕನಿಷ್ಠ ಇಬ್ಬರು ಮಹಿಳೆಯರಿಗೆ ಕಾಡುತ್ತಿದೆ. ಇತ್ತೀಚಿನ ದಿನಗಳಲ್ಲಿ ಊಟ, ಉಪಚಾರ, ಜೀವನ ಶೈಲಿ, ಕೆಲಸದ ವಾತಾವರಣ, ವ್ಯಸನಗಳು ಹೀಗೆಯೇ ಅನೇಕ ಕಾರಣಗಳಿಂದ ಬಂಜೆತನ ತೊಂದರೆ ಕಾಡುವಂತಾಗಿದೆ. ಈ ಬಗ್ಗೆ ಮಹಿಳೆಯರಿಗೆ ತಿಳುವಳಿಕೆಯ ಕೊರತೆಯಿಂದ ಸಮಯ ವ್ಯರ್ಥ ಮಾಡುತ್ತಿದ್ದಾರೆ. ಇಂತಹ ತೊಂದರೆ ಇರುವ ಮಹಿಳೆಯರು ಆದಷ್ಟು ಬೇಗನೆ ತಜ್ಞರೊಂದಿಗೆ ಸಮಾಲೋಚನೆ ನಡೆಸಿ ಸೂಕ್ತ ಚಿಕಿತ್ಸೆ ಪಡೆಯಬೇಕು. ಈಗ ಆಧುನಿಕವಾಗಿ ಹಲವು ಚಿಕಿತ್ಸೆಗಳು ಲಭ್ಯವಿದ್ದು, ತಾವು ಕೇರಳ ಹಾಗೂ ಜರ್ಮನಿಯಲ್ಲಿ ವಿಶೇಷ ತರಬೇತಿ ಪಡೆದಿದ್ದೇನೆ ಆಸಕ್ತರು ನಮ್ಮ ದಾವಣಗೆರೆಯ ಕಡ್ಲಿ ಐವಿಎಫ್ ಸೆಂಟರಿಗೆ ಭೇಟಿ ನೀಡಿ ಹೆಚ್ಚಿನ ತಪಾಸಣೆಗೆ ಬರಬಹುದು ರೋಟರಿ ಸಂಸ್ಥೆಯ ಶಿಬಿರದಲ್ಲಿ ಬಂದಿದ್ದು ತಿಳಿಸಿದರೆ ಅತೀ ಕಡಿಮೆ ವೆಚ್ಚದಲ್ಲಿ ಭಾರಿ ರಿಯಾಯಿತಿ ದರದಲ್ಲಿ ಚಿಕಿತ್ಸೆ ನೀಡುವುದಾಗಿ ಎಂದು ಭರವಸೆ ನೀಡಿದರು.
ಶಿಬಿರದ ಅಧ್ಯಕ್ಷತೆ ವಹಿಸಿದ್ದ ರೋಟರಿ ಕ್ಲಬ್ ಅಧ್ಯಕ್ಷ ಮಂಜುನಾಥ ಉಪ್ಪಾರ ಮಾತನಾಡಿ, ಸಾರ್ವಜನಿಕರು ಹೆಸರಾಂತ ಆಸ್ಪತ್ರೆಗಳಿಗೆ ಬೇರೆ ಬೇರೆ ಊರಿಗೆ ತೆರಳಿ ಸಾವಿರಾರು ಹಣ ಖರ್ಚು ಮಾಡಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ನಮ್ಮ ರೋಟರಿ ಸಂಸ್ಥೆ ವತಿಯಿಂದ ಬಹಳಷ್ಟು ಆರೋಗ್ಯ ಸಂಬಂಧಿ ಹಾಗೂ ಶೈಕ್ಷಣಿಕ ಸಂಬಂಧಿ ಶಿಬಿರಗಳನ್ನು ನಡೆಸುತ್ತಿದ್ದು, ಇದರಿಂದ ಪಟ್ಟಣದ ಸಾರ್ವಜನಿಕರಿಗೆ ಸಮಯ ಮತ್ತು ಆರ್ಥಿಕವಾಗಿ ಬಹಳ ಉಳಿತಾಯವಾಗಿದೆ. ಆರ್ಥಿಕವಾಗಿ ಹಿಂದುಳಿದ ಬಡವರಿಗೆ ಇಂತಹ ಶಿಬಿರಗಳಲ್ಲಿ ದೊಡ್ಡ ಆಸ್ಪತ್ರೆಗಳ ವೈದ್ಯರ ಸಲಹೆ ಮತ್ತು ಸೌಲಭ್ಯಗಳು ಉಚಿತವಾಗಿ ಸ್ವಂತ ಸ್ಥಳದಲ್ಲಿಯೇ ಲಭಿಸಲು ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿದ್ದೇವೆ, ಮುಂದಿನ ದಿನಗಳಲ್ಲಿ ಇಂತಹ ಶಿಬಿರಗಳು ನಮ್ಮ ಸಂಸ್ಥೆಯಿಂದ ನಡೆಯಲಿದ್ದು, ಸಾರ್ವಜನಿಕರು ಹೆಚ್ಚು ಹೆಚ್ಚಾಗಿ ಬಂದು ಇಂತಹ ಶಿಬಿರಗಳ ಸದುಪಯೋಗ ಪಡೆಯಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ರೋಟರಿ ಸಂಸ್ಥೆಯ ಸದಸ್ಯರಾದ ಮಾಲತೇಶ ಅರಳಿಮಟ್ಟಿ, ಡಾ.ಎ.ಎಂ ಸೌದಾಗರ, ಸುರೇಶ ಗೌಡರ, ಸತೀಶ ಅಗಡಿ, ಪರಶುರಾಮ ಮೇಲಗಿರಿ, ಪವಾಡಪ್ಪ ಆಚನೂರ, ಅನಿಲಕುಮಾರ ಬೊಡ್ಡಪಾಟಿ, ಮಾಲತೇಶ ಉಪ್ಪಾರ, ವೀರೇಶ ಬಾಗೋ, ಮಹೇಶ ಹಿರೇಮಠ, ವಿಶ್ವನಾಥ ಅಂಕಲಕೋಟಿ, ಹಾಗೂ ಇನ್ನರ್ವಿಲ್ ಕ್ಲಬ್ ಸದಸ್ಯರಾದ ಲಕ್ಷ್ಮಿ ಉಪ್ಪಾರ, ವಿಜಯಲಕ್ಷ್ಮಿ ಗೌಡರ, ಜಯಾ ಪಟ್ಟಣಶೆಟ್ಟಿ, ಸಂಧ್ಯಾರಾಣಿ ದೇಶಪಾಂಡೆ, ಪ್ರತಿಭಾ ಮೇಲಗಿರಿ, ಗಾಯತ್ರಿ ಅರ್ಕಚಾರಿ ಸೇರಿದಂತೆ ಕಡ್ಲಿ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.