ಬಂಜಾರ ಸಮುದಾಯ ಭವನ ನಿರ್ಮಾಣಕ್ಕೆ 2 ಕೋಟಿ ಮಂಜೂರು : ದರ್ಶನಾಪುರ

ಶಹಾಪುರ:ನ.21:ಬಂಜಾರ ಸಮುದಾಯಕ್ಕೆ ಸಾಮಾಜಿಕ, ಸಂಸ್ಕøತಿಕ ಚಟುವಟಿಕೆಗಳಿಗಾಗಿ ಬಂಜಾರ ಭವನ ನಿರ್ಮಾಣಕ್ಕೆ 2 ಕೊಟಿ ಮಂಜೂರಿ ಮಾಡಲಾಗಿದೆ ಶಹಾಪುರ ನಗರದ ಸರ್ವೆ ನಂ. 299ರಲ್ಲಿ ಕನ್ಯಾಕೊಳೂರ ಬೆನಕನಳ್ಳಿ ರಸ್ತೆಯಲ್ಲಿ ಈ ಭವನ ನಿರ್ಮಿಸಲಾಗುತ್ತದೆ ಎಂದು ಶಾಸಕ ಶರಣಬಸಪ್ಪಗೌಡ ದರ್ಶನಾಪುರ ತಿಳಿಸಿದರು.

ತಾಲೂಕಿನ ಗಂಗನಾಯ್ಕ ತಾಂಡಾದಲ್ಲಿ ಬಂಜಾರ ಅಭಿವೃದ್ದಿ ನಿಗಮದಡಿಯಲ್ಲಿ 10 ಲಕ್ಷ.ರೂ ವೆಚ್ಚದಲ್ಲಿ ನಿರ್ಮಿಸಲಾದ ಸಂತ ಸೇವಾಲಾಲರ ದೇವಸ್ಥಾನವನ್ನು ಉಧ್ಘಾಟಿಸಿ ಮಾತನಾಡಿದ ಅವರು, ಮನುಷ್ಯ ಜೀವನದಲ್ಲಿ ಶರಣ ಸಂತರ ತತ್ವ ಸಿದ್ದಾಂತಗಳನ್ನು ಮೈಗೂಡಿಸಿಕೊಳ್ಳಲು ಪ್ರತಿಯೊಬ್ಬರು ಧಾರ್ಮಿಕ ಚಿಂತನೆಗಳನ್ನು ಅರ್ಥಹಿಸಿಕೊಂಡು ಮಾನಸಿಕ ನೆಮ್ಮದಿ ಪಡೆಯಬೇಕು.

ಮುಂದಿನ ದಿನಗಳಲ್ಲಿ ಟೆಂಡರ್ ಪ್ರಕ್ರೀಯ ಪ್ರಾರಂಭಗೊಂಡು, ಕಟ್ಟಡ ಕಾಮಗಾರಿಗೆ ಚಾಲನೆ ನೀಡಲಾಗುತ್ತಿದೆ ಅಲ್ಲದೆ ತಾಂಡಾದಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಕಾರ್ಯ ಯೋಜನೆಗಳನ್ನು ರೂಪಿಸಿಕೊಂಡು ಅನುಷ್ಠಾನಗೊಳಿಸಲಾಗುತ್ತದೆ ಎಂದು ಹೇಳಿದರು.

ಈ ಸಂಧರ್ಭದಲ್ಲಿ ಬಂಜಾರ ಸಮಾಜದ ಮುಖಂಡರಾದ, ಮಾನಸಿಂಗ, ಕಾಂಗ್ರೆಸ್ ಮುಖಂಡರಾದ, ಶಿವಮಾಂತ ಚಂದಾಪುರ, ಬಂಜಾರ ಸಮಾಜದ ಮುಖಂಡರಾದ ಮಾನಸಿಂಗ ಚೌವಾಣ್, ಗ್ರಾ.ಪಂ. ಮಾಜಿ ಅಧ್ಯಕ್ಷರಾದ ಮಲ್ಲಪ್ಪ ಮಾವಿನಮರ್ದ ಸೇರಿದಂತೆ ಗಂಗಾನಾಯ್ಕ ತಾಂಡಾ ಯುವ ಮುಖಂಡರು ಇದ್ದರು.