ಬಂಜಾರ ಸಮಾಜ ಒಡೆಯುವವರಿಗೆ ತಕ್ಕ ಪಾಠ: ಸಂಸದ ಡಾ.ಜಾಧವ ಎಚ್ಚರಿಕೆ

ಚಿಂಚೋಳಿ,ಸೆ.8- ನಮ್ಮ ಸಮಾಜದ ಸವಾರ್ಂಗೀಣ ಅಭಿವೃದ್ಧಿಯೆ ತಮ್ಮ ಗುರಿಯಾಗಿದ್ದು, ಸಮಾಜ ಒಡೆಯಲು ಯಾರೇ ಪ್ರಯತ್ನ ಮಾಡಿದರೆ ಅದಕ್ಕೆ ತಕ್ಕ ಪಾಠ ಕಲಿಸಲಾಗುವುದು ಎಂದು ಸಂಸದ ಡಾ ಉಮೇಶ್ ಜಾಧವ್ ಹೇಳಿದರು.
ತಾಲೂಕಿನ ಗಡಿಭಾಗದ ಗೊಟ್ಟಂಗೊಟ್ಟಿ ಬಕ್ಕಪ್ರಭುಗಳ ದೇವಸ್ಥಾನದಲ್ಲಿ ಜರುಗಿದ ಮಾತಾ ರಮಾದೇವಿಯವರ, 41ನೇ ದಿನದ ಮೌನ ಅನುಷ್ಟಾನದ ಮುಕ್ತಾಯ ಸಮಾರಂಭದಲ್ಲಿ, ಮಾತನಾಡಿದ ಅವರು, ದೇಶದ ಪ್ರಭಾವಿ ಬಂಜಾರಾ ಸಮಾಜದ ಮುಖಂಡರನ್ನು ಒಂದಡೆ ಸೇರಿಸಲು ಹಾಗೂ ಬಂಜಾರ ಸಮಾಜದ ಸಾಂಸ್ಕøತಿ ಪರಂಪರೆಯನ್ನು, ದೇಶ್ಯಾದಾದ್ಯಂತ ಅಭಿವೃದ್ದಿ ಪಡಿಸಲು ಶ್ರಮಿಸಿದ್ದೇನೆ ಎಂದ ಅವರು, ಸಮಾಜ ಒಡೆಯಲು ಪ್ರಯತ್ನ ಮಾಡಿದವರನ್ನು ರಾಜಕೀಯವಾಗಿ ಮುಗಿಸುತ್ತೇನೆ, ಇದಕ್ಕೆಲ್ಲಾ ನನ್ನ ಧರ್ಮಗುರುಗಳ ಆಶೀರ್ವಾದ ಬೇಕೆಂದರು.
ಇಲ್ಲಿ ಸೇರಿದÀ ಸಾವಿರಾರು ಜನರ ಮದ್ಯೆ ಗುರುಗಳಿಗೆ ಮತ್ತು ಜನರಿಗೆ ಅವರು ಮನವಿ ಮಾಡಿದರು, ವಿನಾ ಕಾರಣ ನಮ್ಮ ವಿರುದ್ದ ಟೀಕೆ ಮಾಡಿದವರಿಗೆ, ತಕ್ಕ ಪಾಠ ಕಲಿಸುವ ಪ್ರಕ್ರಿಯೆ ಇಲ್ಲಿಂದ ಪ್ರಾರಂಭ, ಎಂದರು.
ಚಿಂಚೋಳಿ ಕ್ಷೇತ್ರದ ಸವಾರ್ಂಗೀಣ ಅಭಿವೃದ್ಧಿ ನನ್ನ ಮಗನಾದ ಡಾ ಅವಿನಾಶ್ ಜಾಧವ್, ಅವರು ತಾಲೂಕಾಭಿವೃದ್ಧಿ ಗುರಿ ಆಗಿದೆ ಮುಂಬರುವ ದಿನಗಳಲ್ಲಿ ಕೂಡ ಚಿಂಚೋಳಿ ಹೆಚ್ಚಿನ ರೀತಿ ಅಭಿವೃದ್ಧಿ ಮಾಡಲಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಈಶ್ವರ ನಾಯಕ ಬಾಬು ಚವ್ವಣ ಗೇಮೂ ಪ್ರೆಮಸಿಂಗ್ ಜಾಧವ್ ಚೆಂದ್ರಶೆಟ್ಟಿ ಜಾಧವ್ ನೀಲಕಂಠ ರಾಠೋಡ್ ವಿಜಯಕುಮಾರ್ ರಾಠೋಡ್ ಅಶೋಕ್ ಚವಾಣ್, ಸಂತೋಷ್ ಗಡಂತಿ ಹಣಮಂತ ಹೀರೆಮನಿ ವಿಠಲ ಕುಸಾಳೆ ಭೀಮಶೆಟ್ಟಿ ಮುರುಡ ಶ್ರೀಮಂತ ಬಿ ಕಟ್ಟಿಮನಿ, ಮತ್ತು ಅನೇಕ ಸಾವಿರಾರು ಜನಸಂಖ್ಯೆಯಲ್ಲಿ ಭಕ್ತರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.