ಬಂಜಾರ ಸಮಾಜದ ಸಂಪ್ರದಾಯದಂತೆ ಹೋಳಿ ಹಬ್ಬ ಆಚರಣೆ

ಔರಾದ :ಮಾ.30: ತಾಲೂಕಿನ ಬೊಂತಿ ತಾಂಡಾದಲ್ಲಿ ಮಾನ್ಯ ಪಶು ಸಂಗೋಪನಾ ಸಚಿವರು ಹಾಗೂ ಬೀದರ ಜಿಲ್ಲೆಯ ಉಸ್ತುವಾರಿ ಸಚಿವರಾದ ಪ್ರಭು ಚವ್ಹಾಣ ಅವರು ಬಂಜಾರ ಸಮಾಜದ ಸಂಪ್ರದಾಯದಂತೆ ಹೋಳಿ ಹಬ್ಬ ಆಚರಣೆ ಮಾಡಿದರು.

ಪ್ರತಿ ವರ್ಷದಂತೆ ಹೋಳಿ ಹಬ್ಬವನ್ನು ತನ್ನ ಊರಿನಲ್ಲಿ ಆಚರಿಸುವ ಸಚಿವರು ತನ್ನ ಊರಿನ ಜಗದಂಬಾ ಮಾತೇ ಹಾಗೂ ಸಂತ ಸೇವಾಲಾಲ್ ಮಹಾರಾಜರ ಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ತನ್ನ ಊರಿನ ಸದಸ್ಯರೊಂದಿಗೆ ಬಂಜಾರ ಸಮಾಜದ ಸಂಪ್ರದಾಯದಂತೆ ಹೋಳಿ ಹಬ್ಬ ಆಚರಿಸಿದ್ದಾರೆ, ಲೆಂಗಿ ಹಾಡುಗಳ ಸಂಗೀತಕ್ಕೆ ಹೆಜ್ಜೆ ಹಾಕುತ್ತಾ ಗ್ರಾಮಸ್ಥರೊಂದಿಗೆ ಕುಣಿದು ಬಣ್ಣ ಆಡಿ ಸಂಭ್ರಮಿಸಿದರು.

ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಮಹಿಳೆಯರು, ಯುವಕ ಯುವತಿಯರು, ಜಿಲ್ಲಾ ಪಂಚಾಯತ್ ಸದಸ್ಯ ಮಾಣಿಕ್ ಚವ್ಹಾಣ, ಸಚಿನ್ ರಾಠೋಡ, ಬಳಿರಾಮ ಪವಾರ, ವಿನಾಯಕ ರಾಠೋಡ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.