ಬಂಜಾರ ಸಮಾಜಕ್ಕೆ ಅನ್ಯಾಯ: ಆಕ್ರೋಶ

ಲಕ್ಷ್ಮೇಶ್ವರ,ಮೇ30: ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಚಿವ ಸಂಪುಟದಲ್ಲಿ ಬಂಜಾರ ಸಮುದಾಯದ ನಾಯಕರಿಗೆ ಸಚಿವ ಸ್ಥಾನ ನೀಡದೆ ಕಾಂಗ್ರೆಸ್ ಪಕ್ಷ ಸಮಾಜದ ಜನರಿಗೆ ಸುಳ್ಳು ಹೇಳಿ ಮೊಸ ಮಾಡಿದೆ. ಆದರಿಂದ ರುದ್ರಪ್ಪ ಲಮಾಣಿಯವರಿಗೆ ಸಚಿವ ಸ್ಥಾನ ಕೊಡಬೇಕು ಎಂದು ಬಂಜಾರ ಸಮುದಾಯದ ಮುಖಂಡರಾದ ಗುರುಪ್ಪ ಲಮಾಣಿ ಹಾಗೂ ಮಹೇಶ ಲಮಾಣಿ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಾತನಾಡಿ ಅವರು, ರಾಜ್ಯದಲ್ಲಿ ಅಧಿಕ ಸಂಖ್ಯೆಯಲ್ಲಿ ಬಂಜಾರ ಸಮುದಾಯ ಇದ್ದು ಸುಮಾರು 3500ಕ್ಕೂ ಹೆಚ್ಚು ತಾಂಡಾಗಳು ಇವೆ. ಸುಮಾರು 40 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆಯನ್ನು ಹೊಂದಿದ್ದರು ಕೂಡಾ ಇವತ್ತು ಸಿದ್ಧರಾಮಯ್ಯ ಸಚಿವ ಸಂಪುಟದಲ್ಲಿ ಯಾವೊಬ್ಬ
ಬಂಜಾರ ನಾಯಕರಿಗೆ ಸಚಿವ ಸ್ಥಾನ ನೀಡದಿರುವುದು ಖೇದಕರ ವಿಷಯವಾಗಿದೆ.
ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆ ಯಲ್ಲಿರುವ ಬಂಜಾರ ಜನಾಂಗಕ್ಕೆ ಕಾಂಗ್ರೆಸ್ ಪಕ್ಷದಿಂದ ಕೇವಲ 5 ಟಿಕೇಟ್ ನೀಡಿ ಅಲ್ಲಿಯೂ ಕೂಡಾ ಜನಾಂಗಕ್ಕೆ ಘೋರ ಅನ್ಯಾಯವನ್ನು ಕಾಂಗ್ರೇಸ್ ಪಕ್ಷ ಮಾಡುತ್ತಾ ಬಂದಿದ್ದು ಇತಿಹಾಸ, ಬರೀ ಬಾಯಿ ಮಾತಲ್ಲಿ ಸಾಮಾಜಿಕ ನ್ಯಾಯ ಅಂತ ಮಾತನಾಡಿದರೆ ಸಾಲದು ಅದನ್ನು ಕಾರ್ಯ ರೂಪಕ್ಕೆ ತರದಿದ್ದರೆ ಏನು ಪ್ರಯೋಜನ..? ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿ ಸುಮಾರು 70 ರಿಂದ 80 ಶಾಸಕರ ಭವಿಷ್ಯವನ್ನು ನಿರ್ಧರಿಸುವ ತಾಕತ್ತು ನಮ್ಮ ಬಂಜಾರ ಜನಾಂಗಕ್ಕಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾನಪ್ಪ ಲಮಾಣಿ ನಾಗೇಶ ಲಮಾಣಿ ಲಾಲಪ್ಪ ಲಮಾಣಿ ನಾನಪ್ಪ ಲಮಾಣಿ ಶೇಖಪ್ಪ ಲಮಾಣಿ ಸೇರಿದಂತೆ ಅನೇಕರು ಹಾಜರಿದ್ದರು.