ಬಂಜಾರ ಸಂಸ್ಕøತಿ ನಾಡಿನ ಹೆಮ್ಮೆ: ಡಾ.ಉಮೇಶ ಜಾಧವ

ಚಿಂಚೋಳಿ,ಜ.8- ತಾಲೂಕಿನ ಜವಹಾರನಗರ ತಾಂಡದ ತಾಯಿ ಮರಿಯಮ್ಮ ಹಾಗೂ ಪೂಜ್ಯ ಸೇವಾಲಲರ 14 ನೇ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡ ಲೋಕಸಭಾ ಸಂಸದರಾದ ಡಾ. ಉಮೇಶ ಜಾಧವ ಅವರು, ಬಂಜಾರ ಸಂಸ್ಕøತಿ ನಾಡಿನ ಹೆಮ್ಮೆಯಾಗಿದೆ ಎಂದರು.
ತಾಯಿ ಮರಿಯಮ್ಮ ಹಾಗೂ ಪೂಜ್ಯ ಸೇವಾಲಾಲ್ ಮಹಾರಾಜರ ಪೂಜೆ ಮತ್ತು ದರ್ಶನದ ನಂತರ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ನಮ್ಮ ಈ ದೇಶದಲ್ಲಿಯೇ ಬಂಜಾರ ಸಂಸ್ಕøತಿ ಅತ್ಯಂತ ಶ್ರೀಮಂತ ಮತ್ತು ಶ್ರೆಷ್ಟವಾದ ಸಂಸ್ಕøತಿ ಯಾಗಿದೆ ಎಂದರು.
ನಮ್ಮ ಊಡಿಗೆ ತೊಡಿಗೆ ಆಚಾರ ವಿಚಾರ ಅತ್ಯಂತ ಶ್ರೀಮಂತ ಸಂಕೇತಗಳಾಗಿದೆ, 1976 ರಲ್ಲಿ ಕ್ಕಿಂತ ಮುಂಚೆ ರಾಜಕೀಯ ಶಕ್ತಿಯ ನೆಲೆ ಇಲ್ಲದ ನಮ್ಮ ಸಮಾಜಕ್ಕೆ ನಮ್ಮ ತಂದೆ ದಿ.ಗೋಪಾಲದೇವಾ ಜಾಧವರವರು ಊರ ಊರಿಗೆ ಅಲೆದಾಡಿ ಶಿಕ್ಷಣದ ಬಿಜವನ್ನು ಭಿತ್ತಿ ಕಾಡು ಮೇಡುಗಳಲ್ಲಿ ಅಲೆಯುತ್ತಿದ ಸಮಾಜಕ್ಕೆ ಅವರ ನೀಡಿದ ಅಲ್ಪ ಸೇವೆಯಿಂದ ಇವತ್ತು ನಮ್ಮ ತಾಲೂಕಿನ ಬಂಜಾರಾರು ಸಾಮಾಜೀಕವಾಗಿ, ಶೈಕ್ಷಣಿಕವಾಗಿ ಆರ್ಧಿಕವಾಗಿ ಸದೃಡರಾಗಲೂ ಶಿಕ್ಷಣ ಸಂತ ಸೇವಲಾಲ್ ಮಹಾರಾಜರ ಹಾಗೂ ನಮ್ಮ ಸಮಾಜದ ಮರೆಯಾದ ಮಾಣಿಕ್ಯ ನಡೆದಾಡುವ ಅರಾಧ್ಯ ದೈವ್ಯರಾಗಿದ್ದ ಪರಮಪೂಜ್ಯರು ನಮ್ಮಿಂದ ಕಣ್ಮರೆಯಾದರೂ ಅವರ ಆರ್ಶೀವಾದ ನಮ್ಮ ಮೇಲೆ ಹಾಗೂ ನಮ್ಮ ಸಮಾಜದ ಮೇಲೆ ಸದಾ ಇರುವ ಕಾರಣ ನಮ್ಮ ಸಮಾಜಕ್ಕೆ ಯಾವುದೇ ದುಷ್ಟ-ಶಕ್ತಿಗಳು ನಮ್ಮ ಹತ್ತಿರ ಸುಳಿಯಲ್ಲಾ ಎಂದು ಅವರು ಹೇಳಿದÀರು.
ಒಂದು ಕಾಲಕ್ಕೆ ನಮ್ಮ ತಾಂಡಾಗಳಲ್ಲಿ ಕುಡಿತಕ್ಕೆ ಬಲಿಯಾಗಿ ಅನೇಕ ಕುಟಂಬಗಳು ಬೀದಿ ಪಾಲಾಗುತ್ತಿದ್ದವು
ಕಳೆದ 10 ವರ್ಷಗಳಲ್ಲಿ ಇಂತಹ ಘಟನೆಗಳು ಕಣ್ಮರೆಯಾವಾಗಿ ಇವತ್ತು ಎಲ್ಲಾ ರೀತಿಯಿಂದ ಶಿಕ್ಷಣ ಪಡೆದು ಆರ್ಥಿಕವಾಗಿ ಸದೃಡರಾಗುತ್ತಿದ್ದಾರೆ ಇನ್ನು ಹತ್ತು ವರ್ಷಗಳಲ್ಲಿ ಅಭಿವೃದ್ಧಿಯಿಂದ ಚಿಂಚೋಳಿ ಭಾರತ ದೇಶದ ಭೂಪಟದಲ್ಲಿ ರಾರಾಜಿಸುತ್ತಿದೆ ಎಂದು ಉಮೇಶ ಜಾಧವ, ಹೇಳಿದರು.
ಕಾರ್ಯಕ್ರಮದಲ್ಲಿ ಅಶೋಕ ಚವ್ಹಾಣ, ಕುಂಚಾವರಂ ಗ್ರಾ.ಪಂ.ಮಾಜಿ ಅಧ್ಯಕ್ಷ ಗೋಪಾಲ, ವಿಜಯಕುಮಾರ ರಾಠೋಡ, ಪುರಸಭೆ ಸದಸ್ಯರಾದ ರಾಜು ಪವಾರ, ಭೀಮರಾವ ರಾಠೋಡ, ಆಶೋಕ ಮೊಗದಂಪೂರ, ಉಮಾಪತಿ, ಅಶೋಕ ಶಿವರಾಂಪೂರ, ಗ್ರಾ.ಪಂ.ಸದಸ್ಯ ಸಂಜೀವಕುಮಾರ ಪವಾರ, ಶ್ರೀನಿವಾಸ ದರವೇಶ್, ರಾಜು ಚಿಂದಾನೂರ, ಶೇಖರ ಶಿವರಾಂಪೂರ,
ಗ್ರಾ.ಪಂ.ಸದಸ್ಯ ಸಂತೋಷ, ಮಾಜಿ.ಗ್ರಾ.ಪಂ.ಸದಸ್ಯ ಲಕ್ಷ್ಮಣ ಜಾಧವ, ದೇವಿದಾಸ ಪೆÇೀಲಕಪಳ್ಳಿ, ಅನೇಕ ತಾಂಡದ ನಿವಾಸಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.