ಬಂಜಾರ ಪರಂಪರೆಯಿಂದ ದೇಶದ ಸಂಸ್ಕøತಿ ಶ್ರೀಮಂತ

ಕಲಬುರಗಿ : ನ.6:ಬಂಜಾರ ಸಮುದಾಯದ ಜನರು ವೀರ, ಧೀರ, ಶೂರ, ಕಾಯಕ ಜೀವಿಗಳು, ಸಂಸ್ಕøತಿಯ ರಕ್ಷಕರು. ತಮ್ಮದೇ ಆದ ವೇಷ-ಭೂಷಣ, ಕಲೆ, ಭಾಷೆ, ಸಂಸ್ಕøತಿ, ಪರಂಪರೆಯನ್ನು ಇಂದಿಗೂ ಕೂಡಾ ಸಂರಕ್ಷಿಸಿಕೊಂಡು ಬಂದವರು. ಯಾವುದೇ ಹಬ್ಬ, ಉತ್ಸವ, ಆಚರಣೆಗಳನ್ನು ಅತ್ಯಂತ ಭಕ್ತಿ, ಶೃದ್ಧೆಯಿಂದ ಮಾಡುವ ಮೂಲಕ ದೇಶದ ಮೂಲ ಜಾನಪದ ಸಂಸ್ಕøತಿಯನ್ನು ಶ್ರೀಮಂತಗೊಳಿಸುವಲ್ಲಿ ಅಪಾರವಾದ ಕೊಡುಗೆಯನ್ನು ನೀಡುತ್ತಿದ್ದಾರೆ ಎಂದು ಕಜಾಪ ಜಿಲ್ಲಾ ಕಾರ್ಯದರ್ಶಿ, ಪ್ರಗತಿಪರ ಚಿಂತಕ, ಉಪನ್ಯಾಸಕ ಎಚ್.ಬಿ.ಪಾಟೀಲ ಅಭಿಪ್ರಾಯಪಟ್ಟರು.

   ನಗರದ ಸಮೀಪದ ಸೇಡಂ ರಸ್ತೆಯಲ್ಲಿರುವ ಸಣ್ಣೂರ ಬಳಿಯಿರುವ ಮಡಿಹಾಳ ತಾಂಡಾದಲ್ಲಿ ದೀಪವಾಳಿ ಹಬ್ಬದ ಪ್ರಯುಕ್ತ ಮಕ್ಕಳು, ಮಹಿಳೆಯರಿಂದ ಶುಕ್ರವಾರ ಜರುಗಿದ ಬಂಜಾರ ಗಾಯನ, ನೃತ್ಯ, ಪೂರ್ಣ ಕಳಸದ ಮೆರವಣಿಗೆ ಸೇರಿದಂತೆ ಮುಂತಾದ ಸಾಂಸ್ಕøತಿಕ ಕಾರ್ಯಕ್ರಮಗಳಲ್ಲಿ 'ಕನ್ನಡ ಜಾನಪದ ಪರಿಷತ್' ಮತ್ತು 'ಬಸವೇಶ್ವರ ಸಮಾಜ ಸೇವಾ ಬಳಗ' ಇವುಗಳ ವತಿಯಿಂದ ಬಂಜಾರ ಕಲಾವಿದರಿಗೆ ಸತ್ಕಾರದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.

   ಕಜಾಪ ಜಿಲ್ಲಾಧ್ಯಕ್ಷ ಎಂ.ಬಿ.ನಿಂಗಪ್ಪ ಮಾತನಾಡಿ, ಬಂಜಾರ ಕಲೆಗಳಂತಹ ಅಪರೂಪದ ಸಂಸ್ಕøತಿ ಇಂದು ಕಣ್ಮರೆಯಾಗುತ್ತಿದೆ. ಇದನ್ನು ಉಳಿಸಿ, ಬೆಳೆಸಬೇಕೆಂಬ ಉದ್ದೇಶದಿಂದ ನಮ್ಮ ಪರಿಷತ್ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಭಾರತ ದೇಶ ಹಳ್ಳಿಗಳಿಂದ ಕೂಡಿರುವುದರಿಂದ ಜಾನಪದ ಬದುಕಿನ ಅವಿಭಾಜ್ಯ ಅಂಗವಾಗಿದೆ. ಜಾನಪದ ಸಂಸ್ಕøತಿ, ಪರಂಪರೆಯ ಅಳವಡಿಕೆಯಿಂದ ನಮ್ಮತನ, ದೇಶದ ಮೂಲ ಸಂಸ್ಕøತಿ, ಪರಂಪರೆ ಉಳಿದು, ಬೆಳೆಯಲು ಸಾಧ್ಯವಿದೆ ಎಂದರು.

ಕಾರ್ಯಕ್ರಮದಲ್ಲಿ ಅಂಬಾ ಭವಾನಿ ದೇವಸ್ಥಾನ ಪೂಜ್ಯ ಕಲಾವತಿ ದೇವಿ, ಜಿಲ್ಲಾ ಬಂಜಾರ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಪ್ರಭು ಜಾಧವ, ಸಣ್ಣೂರ ಗ್ರಾ.ಪಂ ಸದಸ್ಯರಾದ ರಾಜು ಚವ್ಹಾಣ, ಶ್ಯಾಮ್ ಆಡೆ, ಮಾಜಿ ಸದಸ್ಯ ಮೋಹನ ಆಡೆ, ಕಜಾಪ ಸದಸ್ಯ ಹಿರಗಪ್ಪ ಬರಗಲಿ, ಪ್ರಮುಖರಾದ ಬಸಯ್ಯಸ್ವಾಮಿ ಹೊದಲೂರ, ದೇವೇಂದ್ರಪ್ಪ ಗಣಮುಖಿ, ಶರಣಬಸಪ್ಪ ಮಾಲಿ ಬಿರಾದಾರ ದೇಗಾಂವ, ಭೀಮು ನಾಯಕ, ದಶರಥ ಕಾರಬಾರಿ, ರೂಪಸಿಂಗ ಚವ್ಹಾಣ, ಬಳಿರಾಮ ಚವ್ಹಾಣ ಸೇರಿದಂತೆ ಮಡಿಹಾಳ ತಾಂಡಾ, ವಿಮಾನ ನಿಲ್ದಾಣ ತಾಂಡಾ, ಸಣ್ಣೂರ ತಾಂಡಾ ಸೇರಿದಂತೆ ಸುತ್ತ-ಮುತ್ತಲಿನ ಗ್ರಾಮಸ್ಥರು ಭಾಗವಹಿಸಿದ್ದರು.