ಬಂಜಾರ ನೌಕರರ ಸಂಘಟನೆಗಳಿಂದ ರಾಮರಾವ್ ಮಹಾರಾಜರಿಗೆ ಸಂತಾಪ.

ಕೂಡ್ಲಿಗಿ.ನ.4:- ಇತ್ತೀಚಿಗೆ ವಿಧಿವಶರಾದ ಬಂಜಾರ ಸಮುದಾಯದ ನಡೆದಾಡುವ ದೇವರಾಗಿದ್ದ ರಾಮರಾವ್ ಮಹಾರಾಜರು ವಿಧಿವಶರಾಗಿದ್ದು ಅವರಿಗೆ ಬಂಜಾರ ಸಂಘ ಹಾಗೂ ನೌಕರರ ಸಂಘದವರಿಂದ ಪಟ್ಟಣದ ಚಿದಂಬರೇಶ್ವರ ದೇವಸ್ಥಾನದ ಆವರಣದ ಶ್ರೀ ವರಸಿದ್ಧಿ ವಿನಾಯಕ ದೇವಸ್ಥಾನದ ಮುಂದೆ ರಾಮರಾವ್ ಮಹಾರಾಜರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಶ್ರದ್ದಾಂಜಲಿ ಸಲ್ಲಿಸಿದರು.
ಬಂಜಾರ ಸಮುದಾಯದ ಕೂಡ್ಲಿಗಿ ತಾಲೂಕು ಅಧ್ಯಕ್ಷರಾದ ಎಸ್. ಆರ್. ಶಾಮನಾಯ್ಕ್ ಮಾತನಾಡಿ ಬಂಜಾರ ಸಮಾಜದ ವಿಶ್ವ ಗುರು ನಡೆದಾಡುವ ದೇವರೆಂದೆ ಪ್ರಖ್ಯಾತರಾದ ಸಂತಬಾಲಬ್ರಹ್ಮಚಾರಿ ಬಂಜಾರರ ವಿಶ್ವ ಗುರು ಡಾ.ರಾಮರಾವ್ ಮಹಾರಾಜರ ನಡೆದು ಬಂದ ದಾರಿ ಅವರು ಸಮುದಾಯದ ಏಳ್ಗೆಗೆ ಶ್ರಮಿಸಿದ್ದರ ಕುರಿತು ಸವಿವರವಾಗಿ ತಿಳಿಸಿದರು ಎಂ ಪ್ರಕಾಶ ಮಾತನಾಡಿ ರಾಮರಾವ್ ಮಹಾರಾಜರು ಸಂತಸೇವಲಾಲ್ ವಂಶಸ್ಥರಾಗಿದ್ದು ಚಿಕ್ಕವಯಸ್ಸಿನಲ್ಲಿಯೇ ಅನೇಕ ಪವಾಡಗಳ ಮೂಲಕ ಪ್ರಸಿದ್ದಿ ಪಡೆದು ಬರೀ ಬಂಜಾರ ಸಮುದಾಯಕ್ಕಲ್ಲದೆ ಎಲ್ಲಾ ವರ್ಗದ ಜನರಿಗೆ ಪ್ರೀತಿಪಾತ್ರರಾಗಿಆಶೀರ್ವದಿಸಿದ್ದರು ಹಾಗೂ ಮಹಾರಾಜರ ವಿಧಿವಶದಿಂದ ಸಮುದಾಯಕ್ಕೆ ತುಂಬಲಾರದ ನಷ್ಟವಾಗಿದೆ ಎಂದರು.
ಈ ಸಂದರ್ಭದಲ್ಲಿ ಬಂಜಾರ ನೌಕರರ ಸಂಘದ ಉಮಾಮಹೇಶ, ಕೊಟ್ರೇಶ, ದೇವೇಂದ್ರ, ಮಂಜುನಾಥ, ಕೃಷ್ಣ ಸೇರಿದಂತೆ ಇತರರು ಶ್ರದ್ದಾಂಜಲಿ ಸಭೆಯಲ್ಲಿ ಉಪಸ್ಥಿತರಿದ್ದರು.