ಬಂಜಾರ ಕಲೆಯಿಂದ ಜಾನಪದ ಸಂಸ್ಕøತಿ ಶ್ರೀಮಂತ

ಕಲಬುರಗಿ:ನ.16: ಆಧುನಿಕತೆ ಭರಾಟೆಯಲ್ಲಿ ನಮ್ಮ ಮೂಲತನ ಮರೆತು, ವಿದೇಶಿ ಪ್ರಭಾವಕ್ಕೆ ಒಳಗಾಗಿರುವ ಸಂದರ್ಭ ಇದಾಗಿದೆ. ಇದರಲ್ಲಿ ಬಂಜಾರ ಸಮುದಾಯವು ತನ್ನ ಮೂಲಕ ಸಂಸ್ಕøತಿ, ಪರಂಪರೆ, ವೇಷ-ಭೂಷಣ ಸೇರಿದಂತೆ ಎಲ್ಲಾ ಆಚರಣೆಗಳನ್ನು ಇಂದಿಗೂ ಕಾಪಾಡಿಕೊಂಡು ಬರುವ ಮೂಲಕ ನಮ್ಮ ದೇಶ ಮೂಲಕ ಸಂಸ್ಕøತಿಯಾದ ಜಾನಪದ ಸಂಸ್ಕøತಿಯ ವಾರಸುದಾರರಾಗಿ ಕಂಡುಬರುತ್ತಿದ್ದು, ಬಂಜಾರ ಕಲೆಯಿಂದ ಜಾನಪದ ಸಂಸ್ಕøತಿ ಶ್ರೀಮಂತವಾಗಿದೆಯೆಂದು ಕಜಾಪ ಜಿಲ್ಲಾ ಕಾರ್ಯದರ್ಶಿ ಎಚ್.ಬಿ.ಪಾಟೀಲ ಅಭಿಪ್ರಾಯಪಟ್ಟರು.
ಅವರು ನಗರದ ಆಳಂದ ಚೆಕ್ ಪೋಸ್ಟ್ ಸಮೀಪದ ಪಿಲ್ಟರ್ ಬೆಡ್ ಪ್ರದೇಶದ ಆಶ್ರಯ ಕಾಲನಿಯ ರಾಮರಾವ ನಗರ ತಾಂಡಾದಲ್ಲಿ ಸೋಮವಾರ ಕಜಾಪ ಜಿಲ್ಲಾ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ‘ಬಂಜಾರಾ ದೀಪಾವಳಿ ಜಾನಪದ ಸಂಭ್ರಮ’ದ ಪ್ರಯುಕ್ತ ಬಂಜಾರ ನೃತ್ಯ, ಗಾಯನ, ಕಳಸ ಮೆರವಣಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
ಕಜಾಪ ಅಧ್ಯಕ್ಷ ಎಂ.ಬಿ.ನಿಂಗಪ್ಪ ಮಾತನಾಡಿ, ಬಂಜಾರಾ ಸಮಾಜ ಶೂರರು, ಧೀರರು, ಸಂಸ್ಕøತಿಯನ್ನು ಉಳಿಸಿಕೊಂಡು ಬಂದವರಾಗಿದ್ದಾರೆ. ಅವರಲ್ಲಿರುವ ಜಾನಪದ ಸಂಸ್ಕøತಿ ಸಮಾಜಕ್ಕೆ ಮಾದರಿಯಾಗಿದೆ. ಜಾನಪದ ಕಲಾವಿದರನ್ನು ಗುರ್ತಿಸಿ ಪ್ರೋತ್ಸಾಹಿಸಿ, ಬೆಳೆಸಬೇಕಾಗಿದೆಯೆಂದರು.
ಜಾನಪದ ಕಲಾ ಯುವತಿಯರಾದ ದಿವ್ಯಾಭಾರತಿ, ಸಲೋನಿ, ಪ್ರೀಯಾಂಕಾ, ಶ್ರೀದೇವಿ, ವೈಷ್ಣವಿ ಅವರಿಂದ ಜರುಗಿದ ಬಂಜಾರ ಗೀತಗಾಯನ, ನೃತ್ಯ, ಕಳಸದ ಮೆರವಣಿಗೆ ಮನಸೂರೆಗೊಳಿಸಿತು.
ಕಾರ್ಯಕ್ರಮದಲ್ಲಿ ಬಡಾವಣೆಯ ಜ್ಯೋತಿ, ಆರತಿ, ಲಕ್ಷ್ಮೀ, ಸುಸ್ಮೀತಾ, ನಿಕಿತಾ, ಸೋನಾಲಿ, ಗುರು, ಪವನ, ರೋಹಿತ, ವಿಶಾಲ, ಸುನೀಲ, ಅವಿನಾಶ, ಪ್ರವೀಣ ಸೇರಿದಂತೆ ಹಲವರಿದ್ದರು.