ಬಂಜಾರಾ ಭವನದಲ್ಲಿ ಬಾಬಾ ಲಕ್ಕಿಷಾ ಬಂಜಾರಾ ಹಾಗೂ ದಿ. ಡಿ ದೇವರಾಜ ಅರಸ ಜಯಂತ್ಯೋತ್ಸವ ಆಚರಣೆ

ಕಲಬುರಗಿ:ಆ.21: ಮಹಾಪುರುಷರರು ತಮ್ಮ ಅವದಿಯಲ್ಲಿ ಜನರಿಗಾಗಿ ಏನು ಜನ ಸೇವೆಯನ್ನು ಮಾಡಿದ್ದಾರೆ ಎಂಬುದನ್ನು ಹೊಸ ಪೀಳಿಗೆಗೆ ಗೊತ್ತಾಗಬೇಕೆಂದು ಜಯಂತ್ಯೋತ್ಸವ ಕಾರ್ಯಗಳು ಮಾಡುತ್ತವೆ ಎಂದು ಬಂಜಾರಾ ಸರಕಾರಿ ಮತ್ತು ಅರೆ ಸರಕಾರಿ ನಿವೃತ್ತಿ ನೌಕರರ ಸಂಘ ಸಂಸ್ಥಾಪಕ ಅಧ್ಯಕ್ಷರಾದ ಬಿ ಬಿ ನಾಯಕ ಅವರು ಹೇಳಿದರು.

ನಗರದ ಬಂಜಾರಾ ಭವನದಲ್ಲಿ ಶ್ರೀ ಬಾಬಾ ಲಕ್ಕಿಷಾ ಬಂಜಾರಾ ಅವರ 445ನೇ ಜಯಂತ್ಯೋತ್ಸವ ಹಾಗೂ ದಿವಂಗತ ಶ್ರೀ ಡಿ ದೇವರಾಜ ಅರಸ ಅವರ 108ನೇ ಜಯಂತ್ರೋತ್ಸವ ಕಾರ್ಯವನ್ನು ಬಂಜಾರಾ ಸರಕಾರಿ ಮತ್ತು ಅರೆ ಸರಕಾರಿ ನಿವೃತ್ತಿ ನೌಕರರ ಸಂಘದ ವತಿಯಿಂದ ಜಯಂತ್ಯೋತ್ಸವ ವಿಜೃಂಭಣೆಯಿಂದ ಆಚರಿಸಿ ಮಾತನಾಡಿದರು.

ಲಕಿಷಾ ಬಜಾರಾ ಅವರು ಸಮಾಜಕ್ಕಾಗಿ ಒಳ್ಳೆಯ ಕೆಲಸವನ್ನು ಮಾಡುತ್ತಾ ಬಂದಿದ್ದಾರೆ ಎಂದು ಹೇಳಿದರು.

ಅವರು ಮಹಾನ ವ್ಯಾಪಾರಿ ವ್ಯಾಪಾರ ಮಾಡುತ್ತಾ ಎಲ್ಲಿ ವ್ಯಾಸ ಮಾಡುತ್ತಿದ್ದರು ಅಲ್ಲೆ ನೀರಿಗಾಗಿ ಕೆರೆ ಮಾಡುತ್ತಿದ್ದರು ಮತ್ತು ಸಾರ್ವಜನಿಕರಿಗೆ ಯಾತ್ರೆ ನಿವಾಸ ಕಟ್ಟುತ್ತಿದ್ದರು ಎಂದು ತಿಳಿಸಿದರು.

ದೇವರಾಜ ಅರಸರು ರಾಜ್ಯದ ಮುಖ್ಯಮಂತ್ರಿಯಾಗಿ ಹಲವು ಸುಧಾರಣೆಗಳನ್ನು ಜಾರಿಗೆ ತಂದು ಜನಮನದಲ್ಲಿ ಅಚ್ಚಳಿಯದಂತೆ ಉಳಿದಿದ್ದಾರೆ. ಎರಡು ಬಾರಿ ಮುಖ್ಯಮಂತ್ರಿ ಆಗಿದ್ದರೂ ಸಹ ಅವರು ಮಹಡಿಯ ಮನೆಯಲ್ಲಿಯೇ ಇದ್ದರು. ಇವರ ಅಂತ್ಯಸಂಸ್ಕಾರ ಕ್ಕೆ ಹಣವು ಸಹ ಇರಲಾರದಷ್ಟು ಪ್ರಾಮಾಣಿಕ ರಾಜಕಾರಣಿಯಾಗಿದ್ದರು. ಅವರು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಸಾಮಾಜಿಕ ನ್ಯಾಯ ಒದಗಿಸಿಕೊಟ್ಟರು. ಶೋಷಿತರು, ಹಿಂದುಳಿದ ವರ್ಗಗಳ ಜನರ ಬಗ್ಗೆ ಕಾಳಜಿ ಹೊಂದಿದ್ದ ಅವರು ಪರಿಣಾಮಕಾರಿ ಯೋಜನೆಗಳ ಮೂಲಕ ಇಂದಿಗೂ ಜನಮಾನಸದಲ್ಲಿ ಉಳಿದಿದ್ದಾರೆ ಎಂದು ಹೇಳಿದರು

ಇದೇ ಸಂದರ್ಭದಲ್ಲಿ ಹಿರಿಯ ಮತ್ತು ಸಮಾಜ ಸೇವಕರಾದ ಶ್ರೀ ನರಸಿಂಗ ಚವ್ಹಾಣ ತರಿ ತಾಂಡಾ, ನೋರಾ ಆಸ್ಪತ್ರೆ ವೈದ್ಯಕೀಯರಾದ ಡಾ.ಆಜ್ರಾ, ಬರೋಕಾ ಕಣ್ಣಿನ ಆಸ್ಪತ್ರೆ ಆಡಳಿತ ಅಧಿಕಾರಿಗಳಾದ ಬಾಬು ದಡೇದ ಇವರನ್ನು ವಿಶೇಷವಾಗಿ ಸಂಘ ವತಿಯಿಂದ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಪಿ ಜಿ ರಾಠೋಡ, ವಿಠ್ಠಲ ಚವ್ಹಾಣ, ರಾಮಚಂದ್ರ ಜಾಧವ, ವಿಠಲ ಜಾಧವ, ಹೀರಾಮಣಿ ರಾಠೋಡ, ಲಾಲ್ಲಪ್ಪಾ ರಾಠೋಡ, ಎಸ್ ಎಸ್ ಪವಾರ, ಶಿವರಾಮ ರಾಠೋಡ, ಧನಸಿಂಗ ರಾಠೋಡ, ರಮೇಶ್ ಚವ್ಹಾಣ ಹಾಗೂ ಗೋಪಾಲ ರಾಠೋಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.