ಬಂಗುಡೆ ಮೀನು

ಬೇಕಾಗುವ ಸಾಮಗ್ರಿ
ಕಾಚಂಪುಳಿ (ಇದು ಇಲ್ಲದಿದ್ದರೆ ಹುಣಸೆಹಣ್ಣು ಬಳಸುಬಹುದು) ತೆಂಗಿನೆಣ್ಣೆ
ಶುಂಠಿ
ಬೆಳ್ಳುಳ್ಳಿ
ಈರುಳ್ಳಿ
ಮೆಣಸಿನಕಾಯಿ
ಕರಿಬೇವು
ಖಾರದ ಪುಡಿ
ಕೊತ್ತಂಬರಿ ಪುಡಿ
ಅರಿಶಿಣ ಪುಡಿ
ಮೆಂತೆ ಪುರಿ
ಕಾಳುಮೆಣಸಿನ ಪುಡಿ
ಉಪ್ಪು ನೀರು

ಮಾಡುವ ವಿಧಾನ:

  • ಎಲ್ಲಾ ಮಸಾಲೆಯನ್ನು ೧ ಕಪ್‌ಗೆ ಹಾಕಿ ಅದಕ್ಕೆ ೧ ಚಮಚ ನೀರು ಹಾಕಿ ಪೇಸ್ಟ್ ಮಾಡಿ ಬದಿಯಲ್ಲಿ ತೆಗೆದಿಡಿ.
  • ದಪ್ಪ ತಳವಿರುವ ಪ್ಯಾನ್ (ಮಣ್ಣಿನ ಮಡಕೆಯಾದರೆ ತುಂಬಾ ಒಳ್ಳೆಯದು)ಎಣ್ಣೆಯನ್ನು ಬಿಸಿ ಮಾಡಿ ಅದಕ್ಕೆ ಎಣ್ಣೆ ಹಾಕಿ, ಎಣ್ಣೆ ಬಿಸಿಯಾದಾಗ ಕತ್ತರಿಸಿದ ಶುಂಠಿ, ಬೆಳ್ಳುಳ್ಳಿ, ಈರುಳ್ಳಿ, ಹಸಿ ಮೆಣಸಿನಕಾಯಿ, ಕರಿಬೇವು ಹಾಕಿ ಫ್ರೈ ಮಾಡಿ.
  • ಈರುಳ್ಳಿ ಫ್ರೈಯಾಗಿ ಕಂದು ಬಣ್ಣಕ್ಕೆ ತಿರುಗುವಾಗ ಪೇಸ್ಟ್ ಮಾಡಿಟ್ಟ ಮಸಾಲೆ ಹಾಕಿ ಅದರ ಹಸಿ ವಾಸನೆ ಹೋಗಲು ೨-೩ ನಿಮಿಷ ಫ್ರೈ ಮಾಡಿ, ನಂತರ ನೀರು ಹಾಕಿ ರುಚಿಗೆ ತಕ್ಕ ಉಪ್ಪು ಸೇರಿಸಿ. ಈಗ ನೀರಿನಲ್ಲಿ ನೆನೆಸಿಟ್ಟ ಕಾಚಂಪುಳಿ ಹಾಕಿ (ಕಾಚಂಪುಳಿ ಇಲ್ಲದಿದ್ದರೆ ಎರಡು ನಿಂಬೆ ಹಣ್ಣಿನ ಗಾತ್ರ ಹುಣಸೆಹಣ್ಣಿನ ರಸ ಹಾಕಿ) ಮಿಶ್ರ ಮಾಡಿ ಕುದಿಸಿ.
  • ಮಿಶ್ರಣ ಕುದಿ ಬರಲಾರಂಭಿಸಿದಾಗ ಮೀನನ್ನು ಹಾಕಿ ಸಾಧರಣ ಉರಿಯಲ್ಲಿ ೧೦ ನಿಮಿಷ ಬೇಯಿಸಿ (ತುಂಬಾ ಬೇಯಿಸಿದ್ದರೆ ಮೀನಿನ ಮಾಂಸ ಮುಳ್ಳಿನಿಂದ ಬೇರ್ಪಡುವುದು).

ಈಗ ೧ ಚಮಚ ತೆಂಗಿನೆಣ್ಣೆ ಹಾಕಿ, ಉರಿಯಿಂದ ಇಳಿಸಿ ಇಡಿ.