ಬಂಗಾಳ- ದೀದಿ, ತ.ನಾ- ಸ್ಟಾಲಿನ್‌ಗೆ ಮತದಾರ ಜೈ

ನವದೆಹಲಿ, ಏ.29- ಪಶ್ಚಿಮ ಬಂಗಾಳದಲ್ಲಿ ಟಿಎಂಸಿ, ಅಸ್ಸಾಂ ನಲ್ಲಿ ಎನ್ ಡಿಎ, ಕೇರಳದಲ್ಲಿ ಎಲ್ ಡಿ ಎಫ್ ,ತಮಿಳುನಾಡಿಲ್ಲಿ ಡಿಎಂಕೆ ಹಾಗು ಪುದುಚೇರಿಯಲ್ಲಿ ಎಐಎಡಿಎಂಕೆ ಅಧಿಕಾರ ಹಿಡಿಯುವ ಸಾದ್ಯತೆಗಳಿವೆ ಎಂದು ಸಮೀಕ್ಷೆಗಳು ಅಂದಾಜು‌ ಮಾಡಿವೆ.

ಪಶ್ಚಿಮ ಬಂಗಾಳದ 8 ನೇ‌ ಹಾಗು ಕೊನೆಯ ಹಂತದ ಮತದಾನ ಮುಗಿಯುತ್ತಿದ್ದಂತೆ “ಪಂಚ” ರಾಜ್ಯಗಳ ಚುನಾವಣೋತ್ತರ ಸಮೀಕ್ಷೆ ಬಹಿರಂಗ ಗೊಂಡಿದ್ದು ಪಂಚ ರಾಜ್ಯಗಳಲ್ಲಿ ಯಾರೆಲ್ಲ ಅಧಿಕಾರ ಹಿಡಿಯಬಹುದು ಎನ್ನುವ ಮುನ್ಸೂಚನೆಯನ್ನು ಮತದಾನೋತ್ತರ ಸಮೀಕ್ಷೆ ಬಹಿರಂಗಪಡಿಸಿದೆ

ಪಶ್ವಿಮ ಬಂಗಾಳದಲ್ಲಿ ತೀವ್ರ ಜಿದ್ದಾ ಜಿದ್ದಿನ‌ ಕಣದಲ್ಲಿ ತೃಣಮೂಲ ಕಾಂಗ್ರೆಸ್ – ಟಿಎಂಸಿ ಹ್ಯಾಟ್ರಿಕ್ ಗೆಲುವಿನ ನಗೆ ಬೀರಲಿದೆ ಎಂದು ಸಮೀಕ್ಷೆಗಳು ಹೇಳಿವೆ.

ಹಠಕ್ಕೆ ಬಿದ್ದು ಕೊರೊನಾ ಸೋಂಕು ಕೂಡ ಲೆಕ್ಕಿಸದೆ 8 ಹಂತದಲ್ಲಿ ಚುನಾವಣೆ ನಡೆಯುಂತೆ ನೋಡಿಕೊಂಡ ಬಿಜೆಪಿ ಅಧಿಕಾರ ಅಧಿಕಾರ ಹಿಡಿಯುವ ಮಾತು ಕನಸಿನ ದು ಎನ್ನುವುದು ಎನ್ನುವುದನ್ನು ಸಮೀಕ್ಷೆ ಬಹಿರಂಗಪಡಿಸಿದೆ.

294 ವಿಧಾನಸಭಾ ಕ್ಣೇತ್ರಗಳ ಪೈಕಿ ಆಢಳಿತರಾಢ ಟಿಎಂಸಿ 156, ಬಿಜೆಪಿ 121, ಹಾಗು ಉಳಿದ ಸ್ಥಾನಗಳನ್ನು ಕಾಂಗ್ರೆಸ್,ಎಡಪಕ್ಷದ ಮೈತ್ರಿಕೂಟ, ಪಕ್ಷೇತರರು ಪಡೆಯುವ ಸಾದ್ಯತೆಗಳಿವೆ ಎಂದು ಹೇಳಲಾಗಿದೆ.

ಅಧಿಕಾರ ಹಿಡಯಲು 148 ಮ್ಯಾಜಿಕ್ ಸಂಖ್ಯೆಯ ಅಗತ್ಯವಿದೆ.

ಅಸ್ಸಾಂ ನಲ್ಲಿ ಮತ್ತೊಮ್ಮೆ ಎನ್ ಡಿಎ;

ಅಸ್ಸಾಂ ನಲ್ಲಿ ಬಿಜೆಪಿ ನೇತೃತ್ವದ ಎನ್ ಡಿಒ ಮೈತ್ರಿಕೂಟ ಸತತ ಎರಡನೇ ಬಾರಿ ಅಧಿಕಾರ ಹಿಡಯಲಿದೆ ಎಂದು ಸಮೀಕ್ಷೆ ತಿಳಿಸಿದೆ.

126 ಕ್ಷೇತ್ರಗಳ ಪೈಕಿ ಎನ್ ಡಿಎ 73 ಸ್ಥಾನಗಳಲ್ಲಿ ಗೆಲವು ಸಾಧಿಸಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರ ಹಿಡಿಯಲಿದೆ.ಇಲ್ಲಿ‌ ಮ್ಯಾಜಿಕ್ ಸಂಖ್ಯೆ 64.

ಕೇರಳ: ಎಲ್ ಡಿಎಫ್ ಗೆ ಅಧಿಕಾರ:

140 ಕ್ಷೇತ್ರಗಳಿರುವ ಕೇರಳದಲ್ಲಿ ಮತ್ತೊಮ್ಮೆ ಎಡ ಪಕ್ಷಗಳ ನೇತೃತ್ವದ ಎಲ್ ಡಿಎಫ್ ಅಧಿಕಾರ ಹಿಡಿಯಲಿದೆ ಎಂದು ಅಂದಾಜು ಮಾಡಲಾಗಿದೆ

76 ಸ್ಥಾನಗನ್ನು ಎಲ್ ಡಿಎಫ್ , ಕಾಂಗ್ರೆಸ್ ನೇತೃತ್ವದ ಯುಡಿಎಫ್ 62 ಸ್ಥಾನ ಪಡೆಯಲಿದೆ. ಬಿಜೆಪಿ 1 ರಿಂದ 2 ಸ್ಥಾನ ಪಡೆಯಬಹುದು ಎಂದು ಹೇಳಲಾಗಿದೆ.

ಡಿಎಂಕೆಗೆ ಮತದಾರನ ಜೈ:

ತಮಿಳುನಾಡಿನಲ್ಲಿ ಕಳೆದ ಎರಡು ವಾರದಿಂದ ಅಧಿಕಾರದಲ್ಲಿರುವ ಆಡಳಿತರೂಢ ಎಐಎಡಿಎಂಕೆ ಪಕ್ಷವನ್ನು ಈ ಬಾರಿ ಮತದಾರ ತುಸು ವಿಶ್ರಾಂತಿ ನೀಡಿ ವಿರೋಧಪಕ್ಷ ಡಿಎಂಕೆಗೆ ಜೈ ಎಂದಿದ್ದಾರೆ. ಈ ಮೂಲಕ ಎಡಪ್ಪಾಡಿ ಪಳನಿಸ್ವಾಮಿ- ಪನ್ನೀರ್ ಸೆಲ್ವಂ ಜೋಡಿಯನ್ನು ಮನೆಗೆ ಕಳುಹಿಸುವುದು ಪಕ್ಕಾ ಆಗಿದೆ.

ಎಂ.ಕೆ ಸ್ಟಾಲಿನ್ ನೇತೃತ್ವದ ಡಿಎಂಕೆ, ಹಾಗು ಕಾಂಗ್ರೆಸ್ ಮೈತ್ರಿ ಕೂಟ ಅಧಿಕಾರ ಹಿಡಿಯಲಿದ್ದು ,ಮೊದಲ ಬಾರಿಗೆ ಎಂ.ಕೆ ಸ್ಟಾಲಿನ್ ಮುಖ್ಯಮಂತ್ರಿ ಆಗುವುದು ಬಹುತೇಕ ಖಚಿತ ಎನ್ನಲಾಗಿದೆ.

234 ಕ್ಷೇತ್ರದ ಪೈಕಿ ಡಿಎಂಕೆ ಮೈತ್ರಿಕೂಟ 171 ಸ್ಥಾನ, ಆಡಳಿತಾರೂಢ ಎಐಎಡಿಎಂಕೆ ನೇತೃತ್ವದ ಮೈತ್ರಿಕೂಟ 58 ಸ್ಥಾನ ಗೆಲ್ಲಬಹುದು ಎಂದು ಅಂದಾಜು ಮಾಡಲಾಗಿದೆ.

ಪುದುಚೇರಿ ಎಐಎಡಿಎಂಕೆ ಪಾಲು:

30 ವಿಧಾನಸಭಾ ಕ್ಷೇತ್ರ ಇರುವ ಪುದುಚೆರಿ ಕೇಂದ್ರಾಳಿತ ಪ್ರದೇಶದಲ್ಲಿ ಎಐಎಡಿಎಂಕೆ- ಬಿಜೆಪಿ ಮೈತ್ರಿಕೂಟ ಅಧಿಕಾರಕ್ಕೆ ಬರಲಿದೆ ಎಂದು ಅಂದಾಜು ಮಾಡಲಾಗಿದೆ.

ಇಲ್ಲಿ ಕಾಂಗ್ರೆಸ್ ಆಡಳಿತವಿತ್ತುಮ ಚುನಾವಣೆ ಗೆ ಮುನ್ನ ನಡೆದ ಕ್ಷಿಪ್ರ ರಾಜಕೀಯ ಬೆಳವಣಿಗೆಯಲ್ಲಿ ನಾರಾಯಣ ಸ್ವಾಮಿ ನೇತೃತ್ವದ ಸರ್ಕಾರ ರಾಜೀನಾಮೆ ನೀಡುವಂತಾಗಿತ್ತು.ಕೈಯಲ್ಲಿದ್ದ ಆಡಳಿತವನ್ನು ಕಾಂಗ್ರೆಸ್ ಇಲ್ಲಿ ಕಳೆದುಕೊಳ್ಳಲಿದೆ ಎನ್ನಲಾಗಿದೆ.

30 ಕ್ಷೇತ್ರಗಳ ಪೈಕಿ ಎಐಎಡಿಎಂಕೆ 16 ರಿಂದ 18 ಸ್ಥಾನ ಪಡೆಯಲಿದೆ ಉಳಿದ ಸ್ಥಾನವನ್ನು ಕಾಂಗ್ರೆಸ್, ಡಿಎಂಕೆ ಮೈತ್ರಿಕೂಟ ಗೆಲ್ಲಲಿದೆ ಎಂದು ಸಮೀಕ್ಷೆ ತಿಳಿಸಿದೆ.

ಮೇ.2 ಫಲಿತಾಂಶ ಪ್ರಕಟ:

ಮೇ 2 ರಂದು ಫಲಿತಾಂಶ ಪ್ರಕಟವಾಗಲಿದ್ದು ಮತದಾರನ ಒಲವು ಯಾರ ಕಡೆಗೆ ಎನ್ನುವುದು ಸ್ಪಷ್ಟವಾಗಲಿದೆ.

ಹಲವು ಬಾರಿ ಸಮೀಕ್ಷೆ ನಿಜ ಆಗಿದ್ದು ಮತ್ತು ಕೆಲವು ಸಂದರ್ಭಗಳಲ್ಲಿ ತಲೆಕೆಳಗಾಗಿದೆ. ಮೇ.2 ರ ಫಲಿತಾಂಶ ದತ್ತ ಚಿತ್ತ ನೆಟ್ಟಿದೆ.