ಬಂಗಾಳಿ ಭಾಷೆಗೆ ಶ್ರೀಸಿದ್ಧಾಂತ ಶಿಖಾಮಣಿ ತರ್ಜುಮೆ

ಧಾರವಾಡ ಜ.2: ಕೆಲವೇ ದಿನಗಳಲ್ಲಿ ವೀರಶೈವ ಧರ್ಮಗ್ರಂಥವಾದ ಶ್ರೀಸಿದ್ಧಾಂತ ಶಿಖಾಮಣಿಯು ಬಂಗಾಳಿ ಭಾμÉಗೆ ತರ್ಜುಮೆಗೊಂಡು ಬಾಂಗ್ಲಾದೇಶದಲ್ಲಿ ಜರುಗುವ ವಿಶೇಷ ಸಮಾರಂಭದಲ್ಲಿ ಲೋಕಾರ್ಪಣೆಗೊಳ್ಳಲಿದೆ ಎಂದು ಕಾಶಿ ಜ್ಞಾನ ಪೀಠದ ಶ್ರೀಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಹೇಳಿದರು.
ಅವರು ವೀರಶೈವ ಧರ್ಮದ ಪಂಚಪೀಠಗಳಲ್ಲಿ ಒಂದಾಗಿರುವ ಕಾಶಿ ಜ್ಞಾನ ಪೀಠದ ಶ್ರೀಜಗದ್ಗುರು ವಿಶ್ವಾರಾಧ್ಯ ಗುರುಕುಲದಲ್ಲಿ ಹಮ್ಮಿಕೊಂಡಿದ್ದ ಧರ್ಮ ಸಿದ್ಧಾಂತ ಚಿಂತನ ಗೋಷ್ಠಿಯ ಸಾನ್ನಿಧ್ಯವಹಿಸಿ ಮಾತನಾಡುತ್ತಿದ್ದರು. ಪ್ರಸ್ತುತ ನಮ್ಮ ಕಾಶಿ ಜ್ಞಾನ ಪೀಠದ ವೇದ ವಿದ್ಯಾಲಯವು ಅಂತರ್ಜಾಲದ ಸಂವಹನದ ಅಡಿಯಲ್ಲಿ ಅಮೇರಿಕಾ, ರಶಿಯಾ, ಜರ್ಮನಿ ಮತ್ತು ಬಾಂಗ್ಲಾದೇಶಗಳ ಜೊತೆಗೆ ಭಾರತದ ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳಲ್ಲಿಯ ಆಸಕ್ತ ಸ್ತ್ರೀ-ಪುರುಷರಿಗೆ ಸ್ವರಯುಕ್ತವಾಗಿ ಶ್ರೀರುದ್ರ ಪಠಣವನ್ನು ಕಲಿಸಲಾಗುತ್ತಿದೆ. ನೂರಕ್ಕೂ ಹೆಚ್ಚು ಜನ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಹಾಗೂ ಗೃಹಿಣಿಯರು ಪಾಲ್ಗೊಂಡು ಎರಡು ಮಾಸಗಳಲ್ಲಿ ಸಂಪೂರ್ಣ ಶ್ರೀರುದ್ರವನ್ನು ಸ್ವರಯುಕ್ತವಾಗಿ ಅಭ್ಯಾಸ ಮಾಡಿದ್ದಾರೆ. ಅಂತರ್ಜಾಲದ ‘ಝೂಮ್ ಆ್ಯಪ್’ ಬಳಕೆ ಮಾಡುವ ಮೂಲಕ ವಿಶ್ವಾರಾಧ್ಯ ಗುರುಕುಲದ ವೇದ ಪ್ರಾಧ್ಯಾಪಕ ಪಂಡಿತ ಮಲ್ಲಿಕಾರ್ಜುನಶಾಸ್ತ್ರಿ ಅವರು ನಿತ್ಯವೂ ಪಾಠಪ್ರವಚನಗಳನ್ನು ನಡೆಸುತ್ತಿದ್ದು, ದೇಶ-ವಿದೇಶದ ವಿದ್ಯಾರ್ಥಿಗಳು ವೇದಾಧ್ಯಯನದಲ್ಲಿ ತೊಡಗಿರುವುದು ಹೊಸ ಉಪಕ್ರಮದ ಬೆಳವಣಿಗೆಯಾಗಿದೆ ಎಂದರು.
ಅಂತರ್ಜಾಲದ ‘ಝೂಮ್ ಆ್ಯಪ್’ ಕಲಿಕಾ ವರ್ಗದ ಶ್ರೀರುದ್ರ ಪ್ರಶಿಕ್ಷಣದಲ್ಲಿ ಪಾಲ್ಗೊಂಡಿದ್ದ ಬಾಂಗ್ಲಾದೇಶದ ಶ್ರೀ ಜ್ಞಾನಾನಂದ ಬ್ರಹ್ಮಚಾರಿ ಇವರು ವ್ಯಾಕರಣ, ನ್ಯಾಯ, ವೇದಾಂತ ಶಾಸ್ತ್ರಗಳಲ್ಲಿ ಪ್ರಖರ ಪಂಡಿತರಾಗಿದ್ದು ಸಂಸ್ಕøತ ಭಾμÉಯ ಮೇಲೆ ಪ್ರಭುತ್ವವನ್ನು ಹೊಂದಿದ್ದಾರೆ. ಜ್ಞಾನಾನಂದ ಬ್ರಹ್ಮಚಾರಿ ಅವರ ಮಾತೃಭಾμÉ ಬಂಗಾಳಿ ಆಗಿದ್ದು, ಅಖಂಡ ಮನುಕುಲದ ಜೀವನ ವಿಧಾನ ಚಿಂತನೆಗೆ ಅಗತ್ಯವಿರುವ ಶ್ರೀಸಿದ್ಧಾಂತ ಶಿಖಾಮಣಿ ಧರ್ಮಗ್ರಂಥವನ್ನು ಬಂಗಾಳಿ ಭಾμÉಗೆ ಅನುವಾದಿಸುವ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಇನ್ನು ಕೆಲವೇ ತಿಂಗಳುಗಳಲ್ಲಿ ಶ್ರೀಸಿದ್ಧಾಂತ ಶಿಖಾಮಣಿಯು ಬಂಗಾಳಿ ಭಾμÉಗೆ ತರ್ಜುಮೆಗೊಂಡು ಬಾಂಗ್ಲಾದೇಶದಲ್ಲಿಯೇ ಮುದ್ರಣವಾಗಲಿದೆ.