
ಸಿಂಧನೂರು,ಜು.೧೭-ಧಾರ್ಮಿಕ ವಿಷಯವನ್ನು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಕ್ಕೆ ಸಿಟ್ಟಿಗೆದ್ದ ಯುವಕರ ಗುಂಪು ಗಲಾಟೆ ರಾದಾಂತ ಮಾಡಿದ್ದರಿಂದ ಈಗ ಬಂಗಾಲಿ ಕ್ಯಾಂಪ್‌ನಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದ್ದು ಕಂಡುಬಂದಿದೆ.
ತಾಲೂಕಿನ ಆರ್.ಹೆಚ್. ನಂ,೨ ಕ್ಯಾಂಪ್‌ನಲ್ಲಿ ಈ ಘಟನೆ ನಡೆದಿದೆ. ಯುವತಿ ಅಲ್ಲಾಹನ ಕುರಿತು ಇನ್‌ಸ್ಟಾಗ್ರಾಂನಲ್ಲಿ ಅವಹೇಳನ ಮಾಡಿದ್ದಕ್ಕೆ ಸಿಟ್ಟಿಗೆದ್ದ ಒಂದು ಕೊಮಿನ ಯುವಕರ ಗುಂಪು ರವಿವಾರ ಸಂಜೆ ಮಾದಕವಸ್ತುಗಳಿಂದ ಸಿಕ್ಕ ಸಿಕ್ಕ ವರ ಮೇಲೆ ಹಲ್ಲೆ ಮಾಡಿ ಪುಂಡಾಟ ಮೆರೆದಿದ್ದಾರೆ. ಇದರಿಂದ ಕ್ಯಾಂಪ್‌ನಲ್ಲಿರುವ ನಿವಾಸಿಗಳು ಏನಾಗುತ್ತಿದೆ ಎಂದು ಭಯಬೀತರಾಗಿದ್ದರು.
ಯುವತಿ ಮಾಡಿದ ಎಡವಟನಿಂದ ಒಂದು ಸಮಾಜದ ಯುವಕರ ಗುಂಪು ಗಲಾಟೆ ಮಾಡಲು ಶನಿವಾರ ಬಂಗಾಲಿ ಕ್ಯಾಂಪ್‌ಗೆ ಹೋಗಿದ್ದು ಗಲಾಟೆಯ ಮುನ್ಸೂಚನೆ ಅರಿತ ಕ್ಯಾಂಪ್‌ನ ಮುಖಂಡರು ರವಿವಾರ ಕುಳಿತು ಮಾತಾಡೋಣ ಯಾರು ಗಲಾಟೆ ಮಾಡಬೇಟಿ ಎಂದು ಯುವಕರನ್ನು ಸಮಾಧಾನ ಮಾಡಿ ಕಳಿಸಿದ್ದಾರೆ ಎನ್ನಲಾಗಿದೆ.
ರವಿವಾರ ಸಂಜೆ ಅಲ್ಪಸಂಖ್ಯಾತರ ಯುವಕರ ಪುಂಡರ ಗುಂಪು ಬಂಗಾಲಿ ಕ್ಯಾಂಪ್ ೨ ಗೆ ಹೋಗಿ ಕ್ಯಾಂಪಿನ ದುರ್ಗಾ ದೇವಿ ಗುಡಿಯ ಮುಂದೆ ನಮಾಜ ಮಾಡಿ ಪ್ರಚೋದಿಸುವ ಘೋಷಣೆಗಳನ್ನು ಕೂಗಿ ಎದುರಿಗೆ ಸಿಕ್ಕ ಸಿಕ್ಕವರ ಮೇಲೆ ಹಲ್ಲೆ ಮಾಡತೊಡಗಿದರು. ಇದರಿಂದ ಸಿಟ್ಟಿಗೆದ್ದ ಕ್ಯಾಂಪ್‌ನ ಜನರು ತಿರುಗಿ ಬಿದ್ದಾಗ ಕೆಲ ಯುವಕರು ತಮ್ಮ ಬೈಕ್‌ಗಳನ್ನು ಬಿಟ್ಟು ಒಡಿಹೋಗಿದ್ದಾರೆ.
ವಿಷಯ ತಿಳಿದು ಸಿಪಿಐ ರವಿಕುಮಾರ ಗ್ರಾಮೀಣ ಠಾಣೆಯ ಪಿಎಸ್‌ಐ ಮಣಿಕಂಠ ಹೆಚ್ಚಿನ ಸಂಖ್ಯೆಯ ಸಿಬ್ಬಂದಿಗಳೂಂದಿಗೆ ಕ್ಯಾಂಪ್‌ಗೆ ತೆರಳಿ ಗಲಾಟೆಯಲ್ಲಿ ತೊಡಗಿದ್ದ ಇಬ್ಬರು ಯುವಕರನ್ನು ಬಂಧಿಸಿ ಸೂಕ್ತ ಪೋಲಿಸ್ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದಾರೆ ಆದರು ಇನ್ನೂ ಕ್ಯಾಂಪ್‌ನಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಡದಂತೆ ಇದೆ.
ಬಿಜೆಪಿಯ ಮುಖಂಡರಾದ ಮಾಜಿ ಸಂಸದ ಕೆ, ವೀರುಪಾಕ್ಷಪ್ಪ, ಕೊಲ್ಲಾ ಗಿರಿರಾವ್, ಮಧ್ವಾಚಾರ್ಯರ, ಪ್ರಹ್ಲಾದ ಕೆಂಗಲ್ ಸೇರಿದಂತೆ ಇತರರು ಕ್ಯಾಂಪ್‌ಗೆ ಭೇಟೆ ನೀಡಿ ಮುಖಂಡರೊಂದಿಗೆ ಘಟನೆ ಸಂಬಂಧ ಚರ್ಚಿಸಿ ಬಂದಿದ್ದಾರೆ. ಗಲಾಟೆ ಮಾಡಿ ಹಲ್ಲೆ ನಡೆಸಿದ ಆರೋಪಿಗಳನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕ್ಯಾಂಪ್‌ನ ಸಾರ್ವಜನಿಕರು ಪೋಲಿಸ್ ಅಧಿಕಾರಿಯನ್ನು ಒತ್ತಾಯ ಮಾಡಿದ್ದಾರೆ.