ಬಂಗಾಲದ ವಿಭಜನೆ ಕರ್ನಾಟಕ ಏಕೀಕರಣಕ್ಕೆ ನಾಂದಿಯಾಯಿತು-ಕೊಟ್ರೇಶ್

ಸಂಡೂರು:ನ:2: ಕನ್ನಡ ನಾಡು ಏಕೀಕರಣಗೊಳ್ಳಲು ಮತ್ತು ಬ್ರಿಟೀಷರ ವಿರುದ್ಧ ಹೋರಾಡಲು, ಕನ್ನಡಿಗರಿಗೆ ಪ್ರೇರಣೆಯಾದ ಘಟನೆಯಾದ ಬ್ರಿಟೀಷರ ಹೊಡೆದು ಆಳುವ ನೀತಿ 1905 ಆಗಸ್ಟ್ 16 ರಂದು ಬ್ರಿಟೀಷ್ ಸರ್ಕಾರ ಬಂಗಾಳ ರಾಜ್ಯ ವಿಭಜನೆಗೆ ಮುಂದಾಯಿತು.ಇದನ್ನು ಹಲವಾರು ಹೋರಾಟಗಾರರು ವಿರೋಧಿಸಿದರು ಎಂದು ಉದ್ಘಾಟರಾದ ಕೊಟ್ರೇಶ್ ತಿಳಿಸಿದರು.
ಅವರು ಇಂದು ಪಟ್ಟಣದ ಶ್ರೀಶೈಲೇಶ್ವರ ವಿದ್ಯಾಕೇಂದ್ರದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಬಂಗಾಳಿಗರು ‘ವಂಗಭಂಗ’ ಎನ್ನುವ ಚಳುವಳಿಯನ್ನು ನಡೆಸಿದರು. ಇದಕ್ಕೆ ಮಣಿದ ಬ್ರಿಟೀಷ್ ಸರ್ಕಾರ 1911 ರಂದು ಪುನಃ ಬಂಗಾಳವನ್ನು ಒಂದು ಮಾಡಿತು ಈ ಘಟನೆಯ ಪ್ರೇರಣೆಯಿಂದ ಅಂದಿನ ಕನ್ನಡದ ಪ್ರಮುಖ ಕಟ್ಟಾಳುಗಳು ಕನ್ನಡಿಗರನ್ನು ಒಂದು ಮಾಡುವ ಹೋರಾಟವನ್ನು ಪ್ರಾರಂಭಿಸಿದರು. ಅದರ ಫಲವಾಗಿ ಮುಂದೆ 1956 ನಂವೆಬರ್ 01 ರಂದು ಮೈಸೂರು ರಾಜ್ಯವೆಂದು ನಾಮಕರಣಗೊಂಡಿತು. ಮುಂದೆ ದೇವರಾಜ ಅರಸರ ಕಾಲದಲ್ಲಿ 1973 ನವೆಂಬರ್ 01 ರಂದು ಕರ್ನಾಟಕ ರಾಜ್ಯವೆಂದು ನಾಮಕರಣಗೊಂಡಿತು ಎಂದು ತಿಳಿಸಿದರು.
ಕನ್ನಡ ಧ್ವಜಾರೋಹಣ ಕಾಂiÀರ್iಕ್ರಮವನ್ನು ಲಕ್ಷ್ಮೀ ಎಸ್ ನಾನಾವಟೆ ಶಿಕ್ಷಣ ಮಹಾವಿದ್ಯಾಲಯದ ಮುಖ್ಯಸ್ಥರು ನೆರವೇರಿಸಿದರು. ಶಿಕ್ಷಕರಾದ ಗುರುಬಸವರಾಜ, ರುಕ್ಮಿಣಿ , ವಿನುತ ರವರು ವಿಶೇಷ ಪೂಜೆ ಸಲ್ಲಿಸಿದರು, ಸಂಗೀತ ಶಿಕ್ಷಕಿಯಾದ ಅಂಬಿಕ ನೆರವೇರಿಸಿದರು, ದೀಪಾ ಸ್ವಾಗತಿಸಿದರು, ರೇಖಾರವರು ಕನ್ನಡ ನಾಡು-ನುಡಿ ಕುರಿತಾದ ಗೀತೆಗಳನ್ನು ವಾಚಿಸಿದರು. ಗೋಣಿಬಸಪ್ಪ ಕನ್ನಡದ ಪ್ರಮುಖ ಹಳೆಗನ್ನಡದ ಕವಿಗಳ ವಾಣಿಗಳನ್ನು ಪ್ರಸ್ತುತಪಡಿಸಿ “ಕಪ್ಪೆ ಅರಭಟ್ಟನ ಶಾಸನ ಹೇಳುತ್ತದೆ, ಸಾಧುಗೆ ಸಾಧು ಮಾಧುರ್ಯಂಗೆ ಮಾಧುರ್ಯ ಕಲಿಗೆ ಕಲಿಯುಗ ವಿಪರೀತನ್ ಮಾಧವಂ ಈತನ್ ಪೆರಂ ಅಲ್ಲ” “ಲಕ್ಷ್ಮೀಧರಾಮಾತ್ಯನ ಶಾಸನ ಹೇಳುತ್ತದೆ, ಕೆರಯಂ ಕಟ್ಟಿಸು ಬಾವಿಯನ್ ಸವಿಸು ಮಾಡಿ ಸೆರೆಯೊಳ್ ಸಿಲಿಕಿದ ಅನಾಥರಂ ಬಿಡಿಸು ಮಿತ್ರರ್ಗಿಂಬುಕೆಯ್ ನಂಬಿದರ್ಗೆರೆವಟ್ಟಾಗಿರು ಶಿಷ್ಯರಂಪೊರೆ ಎನುತ್ತಿಂತೆಲ್ಲಮಂ ಪಿಂತೆತಾ ನೆರೆದಳ್ ಪಾಲರೆ ಒಂದು ತೊಟ್ಟು ಕಿವಿಯೊಳ್”. ಅರ್ಥಪೂರ್ಣವಾದ ಕನ್ನಡ ಸಾಹಿತಿಗಳ ಹಾಗು ಕವಿಗಳ ಬಗ್ಗೆ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷೀಯ ಭಾಷಣವನ್ನು ಸಂಸ್ಥೆಯ ಆಡಳಿತಾಧಿಕಾರಿಗಳಾದ ಕುಮಾರ್ ಎಸ್ ನಾನಾವಟೆರವರು ಕನ್ನಡ ಭಾಷಾ ಬೋಧಕರು ಭಾಷೆಯ ಬಗ್ಗೆ ಪ್ರೀತಿ ಇರಬೇಕು, ಮಕ್ಕಳಿಗೆ ಬೋಧಿಸುವಾಗ ಅರ್ಪಣಾ ಭಾವದಿಂದ ಸಿಗುವ ಸಂತೋಷ ಮತ್ಯಾವುದೆ ಪ್ರಶಸ್ತಿಗು, ಪ್ರಶಂಸೆಯೂ ಕೊಡಲಾರದು ಜಿ.ಎಸ್ ಶಿವರುದ್ರಪ್ಪನವರ ಕವನವಾದ “ಎಲ್ಲಿದೆ ನಂದನ ಎಲ್ಲಿದೆ ಬಂಧನ ಎಲ್ಲಾ ಇವೆ ನಮ್ಮೊಳಗೆ ಒಳಗಿನ ತಿಳಿಯನು ಕಲಕದೇ ಇದ್ದರೆ ಅಮೃತದ ಸವಿ ಇದೆ ನಾಲಿಗೆಗೆ ಹತ್ತಿರವಿದ್ದು ದೂರ ನಿಲ್ಲುವೆವು ನಮ್ಮ ಅಹಂಮಿನ ಕೋಟೆಯಲಿ” ಮನುಷ್ಯನು ಸ್ವಾರ್ಥ, ದ್ವೇಷ, ದುರ್ಗುಣಗಳನ್ನು ಬಿಟ್ಟು ನಾವೆಲ್ಲರೂ ಒಂದೇ ಎನ್ನುವ ಮನೋಭಾವನೆಯಿಂದ ಕಾರ್ಯ ನಿರ್ವಹಿಸೋಣ ಎಂದರು.
ಕಾರ್ಯಕ್ರಮವನ್ನು ಸುನಂಧ.ಕೆ.ಎಂ ನಿರೂಪಿಸಿದರು, ವಿನುತ ವಂದಿಸಿದರು.