ಬಂಗಾರ ಬೆಳ್ಳಿ ಮತ್ತು ನಗದು ಹಣ ಕಳ್ಳತನ


ಸಂಜೆವಾಣಿ ವಾರ್ತೆ
ಸಿರುಗುಪ್ಪ, ಡಿ.03: ತಾಲೂಕಿನ ಸಿರಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ ಎಂ.ಸೂಗೂರಿನ ಗ್ರಾಮದ ಮನೆ ಯೊಂದರಲ್ಲಿ ಬಂಗಾರ ಬೆಳ್ಳಿ ಮತ್ತು ನಗದು ಹಣ ಕಳ್ಳತನ ನಡೆದ ಘಟನೆ ನಡೆದಿದೆ.
ತೆಕ್ಕಲಕೋಟೆ ವಲಯ ಪೊಲೀಸ್ ಠಾಣೆ ಮತ್ತು ಸಿರಿಗೇರಿ ಪೊಲೀಸ್ ಠಾಣೆ ವ್ಯಾಪ್ತಿಯ ಎಂ.ಸೂಗೂರು ಗ್ರಾಮದ ಮಟ್ಟಿ ಏರಿಯಾದಲ್ಲಿನ ನಿವಾಸಿ ಚಾಗಿ ವೀರೇಶ ಗೌಡ ಇವರ ಮನೆ ತಡರಾತ್ರಿ ವೇಳೆಯಲ್ಲಿ ಕಳ್ಳತನ ನಡೆದಿದ್ದು ಈ ಕುರಿತಂತೆ ಸಿರಿಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲುಗೊಂಡಿದೆ.
ಬೀಗ ಹಾಕಿದ ಮನೆಯ ಚಿಲಕವನ್ನು ಮುರಿದು ಗೋದ್ರೆಜ್ ತೆಗೆದು ಅದರಲ್ಲಿನ ಬಂಗಾರದ ಆಭರಣಗಳು ಬೆಳ್ಳಿಯ ಆಭರಣಗಳು ಮತ್ತು ನಗದು ಹಣವನ್ನು ದೋಚಿದ್ದಾರೆ ಎಂದು ತಿಳಿಸಿದ್ದರೆ.
ಬಂಗಾರದ ಆಭರಣಗಳಾದ ಕತ್ತಿನ ಸರ ನೆಕ್ಲೆಸ್ ಉಂಗುರಗಳು ಎಳೆ ಸರಗಳು ಕೈ ಚೈನುಗಳು ಕಿವಿಯ ಆಭರಣಗಳು ಸರಗಳು ಸೇರಿದಂತೆ ಕಾಲು ಚೈನುಗಳು ಹಾಗೂ ಇನ್ನಿತರ ಒಟ್ಟು 19 ತೊಲೆ ಬಂಗಾರ ಮತ್ತು ಹದಿನೈದು ತೊಲೆ ಬೆಳ್ಳಿ ಹಾಗೂ 4,80,000 ನಗದು ಹಣವನ್ನು ಕಳ್ಳರು ದೋಚಿದ್ದಾರೆ
ಪೋಲಿಸ್ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಶ್ವಾನದಳ ಮತ್ತು ಬೆರಳಚ್ಚು ತಜ್ಞರನ್ನು ಕರೆಸಿ, ಮಾಹಿತಿ ಸಂಗ್ರಹಿಸಿದ್ದಾರೆ, ಸಿರಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.