ಬಂಗಾರಪ್ಪ ನಗರ ನಾಮಫಲಕ ಅನಾವರಣ

ಹೂವಿನಹಡಗಲಿ ನ 18 : ಪಟ್ಟಣದ ಬಂಗಾರಪ್ಪ ನಗರದಲ್ಲಿ ಪುರಸಭೆಯಿಂದ ಅಳವಡಿಸಿರುವ ನಾಮಫಲಕವನ್ನು ಶಾಸಕ ಪಿ.ಟಿ.ಪರಮೇಶ್ವರನಾಯ್ಕ ಅನಾವರಣಗೊಳಿಸಿದರು.
ಗವಿಮಠದ ಡಾ. ಹಿರಿಶಾಂತವೀರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಐಗೋಳ ಚಿದಾನಂದ, ಎಂ.ಪರಮೇಶ್ವರಪ್ಪ, ಪುರಸಭೆ ಅಧ್ಯಕ್ಷ ವಾರ ಗೌಸ್ ಮೊಹಿದ್ದೀನ್, ಉಪಾಧ್ಯಕ್ಷೆ ಆರ್.ನಿರ್ಮಲಾ, ಮುಖ್ಯಾಧಿಕಾರಿ ಡಿ.ಬಿ.ಈರಣ್ಣ, ಬಿ.ಎಸ್.ಎನ್.ಡಿ.ಪಿ. ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಅಯ್ಯನಗೌಡ, ತಾಲ್ಲೂಕು ಘಟಕದ ಅಧ್ಯಕ್ಷ ಈ. ಗುರುಮೂರ್ತಿ ಇತರರು ಇದ್ದರು.