ಬಂಗಾರಪ್ಪ ಜನ್ಮ ದಿನಾಚರಣೆ

ಹೂವಿನಹಡಗಲಿ:ಅ.28. ಪಟ್ಟಣದಲ್ಲಿ ಬಿ.ಎಸ್.ಎನ್.ಡಿ.ಪಿ. ಹಾಗೂ ತಾಲೂಕು ಆರ್ಯ ಈಡಿಗ ಸಂಘದಿಂದ ಮಾಜಿ ಮುಖ್ಯಮಂತ್ರಿ ದಿವಂಗತ ಎಸ್.ಬಂಗಾರಪ್ಪನವರ ಜನ್ಮದಿನ ಆಚರಿಸಲಾಯಿತು.
ಗಂಗಾಮತ ಸಮಾಜದ ಅಧ್ಯಕ್ಷ ಬಿ.ಎಲ್.ಶ್ರೀಧರ ಮಾತನಾಡಿ, ಬಡವರ ಕಲ್ಯಾಣಕ್ಕಾಗಿ ಹಲವು ಯೋಜನೆ ರೂಪಿಸಿದ್ದ ಬಂಗಾರಪ್ಪ ಜನಾನುರಾಗಿ ನಾಯಕರಾಗಿದ್ದರು. ಆಶ್ರಯ ಯೋಜನೆಯ ಪರಿಣಾಮಕಾರಿ ಅನುಷ್ಠಾನದ ಮೂಲಕ ರಾಜ್ಯದಲ್ಲಿ ಅಸಂಖ್ಯಾತ ಬಡವರಿಗೆ ಸೂರು ಕಲ್ಪಿಸಿದ್ದಾರೆ. ಅವರ ಸಂಪುಟದಲ್ಲಿ ಸಚಿವರಾಗಿದ್ದ ಈಟಿ ಶಂಭುನಾಥ ಅವರು ಪಟ್ಟಣದಲ್ಲಿ ‘ಬಂಗಾರಪ್ಪ ನಗರ’ ನಿರ್ಮಿಸಿ ಅವರ ಹೆಸರನ್ನು ಶಾಶ್ವತವಾಗಿ ಉಳಿಸಿದ್ದಾರೆ ಎಂದು ಹೇಳಿದರು.
ತಾ.ಪಂ. ಸದಸ್ಯ ಈಟಿ ಲಿಂಗರಾಜ ಅವರನ್ನು ಸನ್ಮಾನಿಸಲಾಯಿತು. ಬಿ.ಎಸ್.ಎನ್.ಡಿ.ಪಿ. ಜಿಲ್ಲಾಧ್ಯಕ್ಷ ಕೆ.ಅಯ್ಯನಗೌಡ, ತಾಲೂಕು ಅಧ್ಯಕ್ಷ ಈ ಗುರುಮೂರ್ತಿ, ಗೌರವಾಧ್ಯಕ್ಷ ಈ.ಬಸವರಾಜಪ್ಪ, ಉಪಾಧ್ಯಕ್ಷ ಈ ವೀರೇಶ, ಆರ್ಯಈಡಿಗ ಸಂಘದ ಅಧ್ಯಕ್ಷ ಈ.ಮಲ್ಲಪ್ಪ, ಸಮಾಜದ ಮುಖಂಡರಾದ ಈ ಚಂದ್ರಪ್ಪ, ಈ.ಭೀಮಣ್ಣ, ಪತ್ರಕರ್ತ ಹೆಚ್.ಚಂದ್ರಪ್ಪ ಇತರರು ಇದ್ದರು.