ಬಂಗಾರದ ಪದಕ ಪಡೆದ ರೈತನ ಮಗಳು


ಸಂಜೆವಾಣಿ ವಾರ್ತೆ
ಸಿರುಗುಪ್ಪ, ಅ.18: ತಾಲೂಕಿನ ಕರೂರು ಗ್ರಾಮದ ರೈತ ಹೆಚ್.ರಾಮಾಂಜಿನಿ ರೆಡ್ಡಿ ಪುತ್ರಿ ಹೆಚ್.ಮಾನಸ ಮಿತ್ರ  ಎಂ.ಎಸ್.ಸಿ ಪದವಿಯಲ್ಲಿ ಬೆಂಗಳೂರು ವಿ.ವಿ.ಯಿಂದ ಬಂಗಾರದ ಪದಕ ಪಡೆದುಕೊಂಡಿದ್ದಳೆ.
ಬೆಂಗಳೂರು ವಿ.ವಿ.ವ್ಯಾಪ್ತಿಯ ಪದ್ಮಶ್ರೀ ಇನ್ಸ್ಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಮತ್ತು ಸೈನ್ಸ್ ಕಾಲೇಜಿನಲ್ಲಿ ಎಂ.ಎಸ್.ಸಿ. ಪದವಿಯಲ್ಲಿ ಫುಡ್ ಮತ್ತು ನ್ಯೂಟ್ರಿಷಿಯನ್ ವಿಷಯದಲ್ಲಿ ಬಂಗಾರದ ಪದಕ ಪಡೆದಿದ್ದು, ತಾಲೂಕಿಗೆ ಕೀರ್ತಿ ತಂದಿದ್ದಾರೆ.
ಬೆಂಗಳೂರಿನಲ್ಲಿ ಅ.17ರಂದು ನಡೆದ ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ಬಂಗಾರದ ಪದಕ ಮತ್ತು ಪದವಿಯನ್ನು ನೀಡಿ ಗೌರವಿಸಿದರು.