ಫ.ಗು.ಹಳಕಟ್ಟಿ ವಚನ ಸಾಹಿತ್ಯ ಅವಿಸ್ಮರಣೀಯ

ದೇವದುರ್ಗ,ಜು.೦೪-
ವಚನ ಭ್ರಹ್ಮ ಎಂದೇ ಬಿರುದು ಪಡೆದ ಫಕೀರಪ್ಪ ಗುರುಬಸಪ್ಪ ಹಳಕಟ್ಟಿ ಕನ್ನಡ ಸಾಹಿತ್ಯ ಅದರಲ್ಲೂ ವಚನ ಸಾಹಿತ್ಯ ನೀಡಿದ ಕೊಡುಗೆ ಅವಿಸ್ಮರಣೀಯವಾಗಿದೆ ಎಂದು ಶರಣ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಮುನಿಯಪ್ಪ ನಾಲೋಲಿ ಹೇಳಿದರು.
ಪಟ್ಟಣದ ಮಿನಿವಿಧಾನಸೌಧ ಸಭಾಂಗಣದಲ್ಲಿ ತಾಲೂಕು ಆಡಳಿತದಿಂದ ಆಯೋಜಿಸಿದ್ದ ವಚನಕಾರ ಫ.ಗು.ಹಳಕಟ್ಟಿ ಅವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಹಳಕಟ್ಟಿ ನಾಡಿನಾದ್ಯಂತ ಪ್ರವಾಸ ಮಾಡಿ ವಚನಗಳನ್ನು ಸಂಗ್ರಹ ಮಾಡಿ ಅವುಗಳ ಸಂಪುಟಗಳನ್ನು ಪ್ರಕಟಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.
ನಾಡಿನ ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಕನ್ನಡ ಭಾಷೆಯ ವಚನ ಸಾಹಿತ್ಯವನ್ನು ನಾವು ಅಧ್ಯಯನ ಮಾಡುತ್ತಿದ್ದರೆ ಅದಕ್ಕೆ ಕಾರಣ ಹಳಕಟ್ಟಿ. ಅವರು ಎರಡು ಲಕ್ಷಕ್ಕೂ ಅಧಿಕ ವಚನಗಳನ್ನು ಸಂಗ್ರಹಿಸಿ ಓದುಗರಿಗೆ ಕಾಣಿಕೆಯಾಗಿ ನೀಡಿದ್ದಾರೆ. ಶಿಕ್ಷಣ ಪ್ರೇಮಿಯಾಗಿದ್ದ ಹಳಕಟ್ಟಿ ಶಾಲೆಗಳು ಸ್ಥಾಪಿಸಿ ಶಿಕ್ಷಣ ಸೇವೆ ಒದಗಿಸಿದ್ದಾರೆ. ವಚನ ಸಾಹಿತ್ಯ ಶರಣ ಸಾಹಿತ್ಯಕ್ಕೆ ಇವರ ಸೇವೆ ಕನ್ನಡಿಗರು ಹೃದಯದಲ್ಲಿ ಮನೆ ಮಾತಾಗಿದ್ದಾರೆ ಎಂದರು.
ಶಿರಸ್ತೇದಾರ್ ಗೋವಿಂದ ನಾಯಕ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸಿದರು. ಕಸಾಪ ತಾಲೂಕು ಅಧ್ಯಕ್ಷ ಎಚ್.ಶಿವರಾಜ, ಸಹ ಕಾರ್ಯದರ್ಶಿ ಶಿವರಾಜ ರುದ್ರಾಕ್ಷಿ, ಹನುಮಂತಪ್ಪ ಮನ್ನಾಪುರ್, ಬಸವರಾಜ್, ಪ್ರಕಾಶ್ ನೀಲಿ, ಮಲ್ಲಿಕಾರ್ಜುನ, ಪ್ರಮೋದ್, ಆದಿಕಮಲಮ್ಮ, ನಿವೃತ್ತ ಶಿಕ್ಷಕಿ ಗಂಗಮ್ಮ, ಭಾರತಿ ಕೋಡಿಮಠ, ಭೋಜಪ್ಪ ಮಿಣಜಿಗಿ, ಬಸವರಾಜ್ ಮಡಿವಾಳ ಇತರರಿದ್ದರು.