ಫ್ಲೋರೋಸಿಸ್: ಮಕ್ಕಳಲ್ಲಿ ಅರಿವು

(ಸಂಜೆವಾಣಿ ವಾರ್ತೆ)
ಬಾಗಲಕೋಟೆ,ಆ24 : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಬಾದಾಮಿ ತಾಲೂಕಿನ ಹುಲಸಗೇರಿ, ಲಕ್ಕಸಕೊಪ್ಪ ಹಾಗೂ ಜಮ್ಮನಕಟ್ಟಿ ಗ್ರಾಮಗಳ ಶಾಲೆಗಳ ಮಕ್ಕಳಲ್ಲಿ ಫೆÇ್ಲೀರೋಸಿಸ್ ತಡೆ ಹಾಗೂ ನಿಯಂತ್ರಣ ಕುರಿತು ಅರಿವು ಮೂಡಿಸಲಾಯಿತು.
ಜಿಲ್ಲೆಯ ಬಾಗಲಕೋಟೆ, ಬಾದಾಮಿ ಮತ್ತು ಹುನಗುಂದ ತಾಲೂಕುಗಳಲ್ಲಿ ಫೆÇ್ಲೀರೋಸಿಸ್ ಹೆಚ್ಚಾಗಿ ಕಂಡು ಬರುತ್ತಿರುವ ಹಿನ್ನಲೆಯಲ್ಲಿ ಅರಿವು ಕಾರ್ಯಕ್ರಮ ನಡೆಸಲಾಗುತ್ತಿದ್ದು, ಫೆÇ್ಲೀರೈಡ್ ಅಂಶ ಹೆಚ್ಚಾಗಿರುವ ಆಹಾರ ಹಾಗೂ ನೀರು ಸೇವನೆಯಿಂದ ಫೆÇ್ಲೀರೋಸಿಸ್ ಉಂಟಾಗುತ್ತದೆ. ಇದರಿಂದ ದೇಹದ ಅನೇಕ ಭಾಗಗಳಲ್ಲಿ ದುಷ್ಪರಿಣಾಮ ಉಂಟಾಗುತ್ತದೆ ಎಂದು ಜಿಲ್ಲಾ ಫೆÇ್ಲೀರೋಸಿಸ್ ಸಮಾಲೋಚಕ ಡಾ.ಬಾಬುರೆಡ್ಡಿ ತಿಳಿಸಿದರು.
ಸಾಮಾನ್ಯವಾಗಿ ಕುಡಿಯುವ ನೀರು, ಆಹಾರ, ಕೆಲವು ಔಷಧಿಗಳ ಸೇವನೆ ಹಾಗೂ ಕಾರ್ಖಾನೆಗಳಿಂದ ಹೊರಹೊಮ್ಮುವ ಧೂಳು, ಹೊಗೆ ಮುಂತಾದವುಗಳಿಂದ ಫೆÇ್ಲೀರೈಡ್ ದೇಹದೊಳಗೆ ಪ್ರವೇಶಿಸುತ್ತದೆ. ಫೆÇ್ಲೀರೋಸಿಸ್ ವಯಸ್ಸಿನ ಅಂತರ, ಲಿಂಗಬೇಧವಿಲ್ಲದೇ ಚಿಕ್ಕಮಕ್ಕಳು, ವಯಸ್ಕರು, ಮಹಿಳೆಯರು, ಪುರುಷರು ಎಲ್ಲರಲ್ಲಿಯೂ ಕಂಡುಬರುತ್ತದೆ. 5 ರಿಂದ 7 ವರ್ಷದ ಮಕ್ಕಳ ಹಲ್ಲುಗಳಲ್ಲಿ ವಿಪರೀತವಾಗಿ ಕಂಡುಬಂದು ಹಲ್ಲಿನ ಮೇಲೆ ಹಳದಿ ಬಣ್ಣ ಅಥವಾ ಕಂದು ಬಣ್ಣದ ಶಾಶ್ವತ ಅಡ್ಡಗೆರೆಗಳು ಉಂಟಾಗಿ ಹಲ್ಲಿನ ಒಳ ಮತ್ತು ಹೊರ ಭಾಗಗಳಲ್ಲಿ ತೊಂದರೆಯಾಗುತ್ತದೆ ಎಂದರು.
ಇದನ್ನು ತಡೆಗಟ್ಟಲು ಫೆÇ್ಲೀರೈಡ್ ಅಂಶ ಕಡಿಮೆ ಇರುವ ಶುದ್ದ ಕುಡಿಯುವ ನೀರು, ಹಾಲು, ಬೆಲ್ಲ, ಹಸಿರು ಸೊಪ್ಪು, ನುಗ್ಗೇಕಾಯಿ, ಕಾಳುಗಳು, ಹಸಿರು ತರಕಾರಿ, ಹಣ್ಣುಗಳು ಹಾಗೂ ಬೆಳ್ಳುಳ್ಳಿ, ಶುಂಠಿ, ಈರುಳ್ಳಿ, ಕ್ಯಾರೆಟ್, ಪರಂಗಿಹಣ್ಣು, ಗೆಣಸು, ಮೀನು, ಮೊಟ್ಟೆ, ಶುದ್ದ ಮಾಂಸ ಹಾಗೂ ತಾಜಾ ಆಹಾರ ಪದಾರ್ಥಗಳನ್ನು ಸೇವಿಸಬೇಕು. ಆದರೆ ಹೆಚ್ಚು ಫೆÇೀರೈಡ್ ಇರುವ ನೀರು, ಕಪ್ಪು ಟೀ, ಅಡಿಕೆ, ಕಪ್ಪು ಉಪ್ಪು ಮತ್ತು ಅದರಿಂದ ತಯಾರಾಗುವ ಆಹಾರ, ತಂಬಾಕು ಸೇರಿಸಬಾರದು ಎಂದರು.
ಕಾರ್ಯಕ್ರಮದ ನಂತರ ಶಾಲಾ ಮಕ್ಕಳ ಹಲ್ಲುಗಳನ್ನು ಪರೀಕ್ಷೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಲ್ಯಾಬ್ ಟೆಕ್ನಿಷಿಯನ್ ಪತ್ತಾರ ಸೇರಿದಂತೆ ಇತರರು ಇದ್ದರು.