ಫ್ರಿಡ್ಜ್‌ನಲ್ಲಿ ಮಾಡೆಲ್‌ನ ಮೃತ ದೇಹ ಪತ್ತೆ

ಲಾಸ್ ಏಂಜಲೀಸ್,ಅ.೩೦-ಇತ್ತೀಚಿನ ದಿನಗಳಲ್ಲಿ ನಾನಾ ನಮೂನೆಯ ಸಾವಿನ ಪ್ರಕರಣಗಳು ದಾಖಲಾಗುತ್ತಿವೆ. ಅದರಲ್ಲೂ ತರಕಾರಿ ಆಹಾರ ಪದಾರ್ಥಗಳನ್ನು ಕೆಡದಂತೆ ಇಡಬಹುದಾದ
ಫ್ರಿಡ್ಜ್‌ಗಳಲ್ಲಿ ಶವಗಳು ಪತ್ತೆಯಾಗುತ್ತಿರುವುದರಿಂದ ಫ್ರಿಡ್ಜ್ ನೋಡಿದರೆ ದಿಗಿಲು ಬೀಳುವಂತಾಗಿದೆ.
ಈ ಹಿಂದೆ ಪ್ರಿಯಕರನೊಬ್ಬ ತನ್ನ ಗೆಳತಿಯ ಮೃತ ದೇಹವನ್ನು ಫ್ರಿಡ್ಜ್‌ನಲ್ಲಿಟ್ಟ ಪ್ರಕರಣ ಸಾಕಷ್ಟು ಸುದ್ದಿಯಾಗಿತ್ತು. ಇದೇ ರೀತಿಯ ಪ್ರಕರಣ ಲಾಸ್ ಏಂಜಲೀಸ್‌ನಲ್ಲಿ ನಡೆದಿದೆ. ೩೧ ವರ್ಷದ ಯುವ ಮಾಡೆಲ್ ಒಬ್ಬರ ಮೃತದೇಹ ಫ್ರಿಡ್ಜ್‌ನಲ್ಲಿ ಪತ್ತೆಯಾಗಿದೆ.
ಲಾಸ್ ಏಂಜಲೀಸ್‌ನ ಪ್ರಸಿದ್ಧ ಮಾಡೆಲ್ ಮಲಿಸಾ ಮೂನಿಯಾ ಅವರ ಮೃತ ದೇಹ ಫ್ರಿಡ್ಜ್‌ನಲ್ಲಿ ಪತ್ತೆಯಾಗಿದೆ. ಕೈಕಾಲುಗಳನ್ನು ಬಿಗಿಯಾಗಿ ಕಟ್ಟಿದ ಸ್ಥಿತಿಯಲ್ಲಿ ಮಲೀಸಾ ಶವ ಪತ್ತೆಯಾಗಿದ್ದು, ಸಾವಿನ ಕಾರಣ ನಿಗೂಢವಾಗಿದೆ. ಈ ವೇಳೆ ಮಾಲಿಸಾ ಎರಡು ತಿಂಗಳ ಗರ್ಭಿಣಿ ಎಂದು ಹೇಳಲಾಗಿದೆ.
ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಮಾಲಿಸಾ ಅವರ ದೇಹದ ಮೇಲೆ ಗಾಯದ ಗುರುತುಗಳು ಕಂಡುಬಂದಿವೆ. ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ.