ಫ್ರಾನ್ಸ್, ಬ್ಯಾಂಕಾಕ್‌ನಿಂದ ಆಮ್ಲಜನಕ ಖರೀದಿ; ಕೇಜ್ರಿ

New Delhi, Aug 23 (ANI): Delhi Chief Minister Arvind Kejriwal during an interaction with traders in New Delhi on Sunday. (ANI Photo)

ನವದೆಹಲಿ, ಏ.೨೭- ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೊರೊನಾ ಸೋಂಕಿತರಿಗೆ ಆಮ್ಲಜನಕ ಕೊರತೆ ಎದುರಾಗಿರುವ ಹಿನ್ನೆಲೆಯಲ್ಲಿ ಫ್ರಾನ್ಸಿನಿಂದ ೨೧ ಹಾಗು ಬ್ಯಾಂಕಾಕ್ ನಿಂದ ೧೮ ಆಕ್ಸಿಜನ್ ಟ್ಯಾಂಕರ್ ಅಮದು ಮಾಡಿಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ.
ಕೋವಿಡ್ ಸೋಂಕಿತರ ಜೀವ ಉಳಿಸುವ ಹಿನ್ನೆಲೆಯಲ್ಲಿ ದೆಹಲಿ ಸರ್ಕಾರ ಸಾಧ್ಯವಾದ ಎಲ್ಲ ಕಡೆಯಿಂದ ಆಮ್ಲಜನಕ ಖರೀದಿ ಮಾಡಲು ಮುಂದಾಗಿದೆ ಎಂದು ಅವರು ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು.
ಬ್ಯಾಂಕಾಕ್ ನಿಂದ ಮತ್ತು ಪ್ರಾನ್ಸ್ ನಿಂದ ಆಮ್ಲಜನಕ ತರಿಸಿಕೊಳ್ಳಲು ಮುಂದಾಗಿದ್ದು ನಾಳೆಯಿಂದಲೇ ದೆಹಲಿಗೆ ಒಂದೊಂದೇ ಘಟಕಗಳು ಬರಲಿವೆ ಇದರಿಂದಾಗಿ ರೋಗಿಗಳಿಗೆ ಆಮ್ಲಜನಕ ಕೊರತೆ ಎದುರಾಗುವುದು ತಪ್ಪಲಿದೆ ಎಂದು ಅವರು ಹೇಳಿದ್ದಾರೆ.
ಭಾರತೀಯ ವಾಯುಪಡೆಯ ಹೆಲಿಕ್ಯಾಪ್ಟರ್ ಗಳು ಬ್ಯಾಂಕಾಕ್ ಮತ್ತು ಫ್ರಾನ್ಸ್ ನಿಂದ ಆಮ್ಲಜನಕ ಟ್ಯಾಂಕರ್ ಗಳನ್ನು ಭಾರತಕ್ಕೆ ಹೊತ್ತು ತರಲಿವೆ
ಈ ಸಂಬಂಧ ಮಾತುಕತೆ ನಡೆದಿದೆ ಎಂದು ಅವರು ಹೇಳಿದರು
ಫ್ರಾನ್ಸ್ ನಲ್ಲಿ ೨೧ ಆಮ್ಲಜನಕ ಟ್ಯಾಂಕ್‌ಗಳು ದೆಹಲಿಗೆ ಬರಲು ಸಜ್ಜಾಗಿವೆ .ಭಾರತೀಯ ವಾಯುಪಡೆಯ ಹೆಲಿಕ್ಯಾಪ್ಟರ್ ಅಲ್ಲಿಗೆ ತೆರಳಿ ೨೧ ಆಮ್ಲಜನಕವನ್ನು ಬರಲಿದೆ ಎಂದು ಅವರು ಹೇಳಿದರು.
ಬ್ಯಾಂಕಾಕ್ ಇಂದ ೧೮ ಮತ್ತು ಫ್ರಾನ್ಸ್ ನಿಂದ ೨೧ ಆಮ್ಲಜನಕ ಟ್ಯಾಂಕ್‌ಗಳು ದೆಹಲಿಗೆ ಬಂದ ನಂತರ ಆಮ್ಲಜನಕವಿಲ್ಲದೆ ಪರದಾಡುತ್ತಿರುವ ಕೊರೋನಾ ಸೋಂಕಿತರ ಸಮಸ್ಯೆ ಕಡಿಮೆಯಾಗಲಿದೆ ಎಂದು ಅವರು ಹೇಳಿದ್ದಾರೆ.
ಮುಂದಿನ ತಿಂಗಳು ದೆಹಲಿಯಲ್ಲಿ ೪೪ ಆಮ್ಲಜನಕ ಘಟಕಗಳನ್ನು ಆರಂಭಿಸಲು ಉದ್ದೇಶಿಸಲಾಗಿದೆ. ಪೈಕಿ ೮ ಘಟಕಗಳು ಕೇಂದ್ರ ಸರ್ಕಾರವು ಉಳಿದ ೩೬ ಘಟಕಗಳು ದೆಹಲಿ ಸರ್ಕಾರ ನಿರ್ವಹಣೆ ಮಾಡಲಿದೆ ಎಂದು ಅವರು ತಿಳಿಸಿದ್ದಾರೆ.
ದೆಹಲಿಯ ವಿವಿಧ ಆಸ್ಪತ್ರೆಗಳಲ್ಲಿ ಕೋವಿಡ್ ರೋಗಿಗಳಿಗೆ ಆಮ್ಲಜನಕ ಸಿಗದೇ ಕಳೆದ ಹಲವು ದಿನಗಳಿಂದ ಸಾವಿನ ಸಂಖ್ಯೆ ನಿತ್ಯ ಏರಿಕೆ ಆಗಿರುವ ಹಿನ್ನೆಲೆಯಲ್ಲಿ ಅದನ್ನು ತಡೆಗಟ್ಟುವ ಸಲುವಾಗಿ ಸರ್ಕಾರ ಇಂಥದ್ದೊಂದು ಕ್ರಮಗಳನ್ನು ಕೈಗೊಂಡಿದೆ ಮುಂದಿನ ದಿನಗಳಲ್ಲಿ ಪರಿಸ್ಥಿತಿ ತಹಬದಿಗೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ