ಫ್ರಾನ್ಸ್‌ನಲ್ಲಿ ೮ ಮಂದಿಯಲ್ಲಿ ಒಮಿಕ್ರಾನ್ ಪತ್ತೆ

ಪ್ಯಾರಿಸ್, ನ.೨೯- ಕೊರೊನಾ ಸೋಂಕಿಗೆ ಸಂಬಂಧಿಸಿದಂತೆ ಫ್ರಾನ್ಸ್‌ಗೆ ಆಘಾತ ಎದುರಾಗಿದೆ. ನಿನ್ನೆ ತಡರಾತ್ರಿ ಸುಮಾರಿಗೆ ಆಫ್ರಿಕಾ ಪ್ರವಾಸ ಮುಗಿಸಿ ಫ್ರಾನ್ಸ್‌ಗೆ ಮರಳಿರುವ ೮ ಮಂದಿಗೆ, ಅಪಾಯಕಾರಿ ಓಮಿಕ್ರಾನ್ ಸೋಂಕಿಗೆ ಈಡಾಗಿದ್ದಾರೆ ಎನ್ನಲಾಗಿದೆ.
ಈ ಫ್ರಾನ್ಸ್ ಪ್ರವಾಸಿಗರು ಆಫ್ರಿಕಾದಲ್ಲಿ ಕಳೆದ ೧೪ ದಿನಗಳಲ್ಲಿ ಹಲವು ಪ್ರದೇಶಗಳಿಗೆ ಭೇಟಿ ನೀಡಿದ್ದರು ಎನ್ನಲಾಗಿದೆ. ಸದ್ಯ ಒಮಿಕ್ರಾನ್ ಸೋಂಕಿನ ಹಿನ್ನೆಲೆಯಲ್ಲಿ ಪ್ರಯಾಣ ನಿರ್ಬಂಧ ಹೇರಿರುವುದರಿಂದ ಫ್ರಾನ್ಸ್ ನಾಗರಿಕರು ಮರಳಿ ತಮ್ಮ ದೇಶಕ್ಕೆ ಆಗಮಿಸಿದ್ದರು. ಈ ವೇಳೆ ವಿಮಾಣ ನಿಲ್ದಾಣದಲ್ಲಿ ಮಾಡಲಾದ ಪರೀಕ್ಷೆ ವೇಳೆ ೮ ಮಂದಿ ಪ್ರವಾಸಿಗರು ಕೊರೊನಾ ಸೋಂಕಿಗೆ ತುತ್ತಾಗಿರುವುದು ಬೆಳಕಿಗೆ ಬಂದಿದೆ. ಸದ್ಯ ಇವರೆಲ್ಲರೂ ಶಂಕಿತ ಒಮಿಕ್ರಾನ್‌ಗೆ ಈಡಾಗಿದ್ದಾರೆ ಎನ್ನಲಾಗಿದೆ. ಸಹಜವಾಗಿಯೇ ಇದು ಫ್ರಾನ್ಸ್‌ಗೆ ದೊಡ್ಡ ಆಘಾತ ನೀಡಿದಂತಾಗಿದೆ. ಸದ್ಯ ಈ ಬಗ್ಗೆ ಇನ್ನಷ್ಟು ವೈದ್ಯಕೀಯ ಪರೀಕ್ಷೆ ಮುಂದುವರೆದಿದ್ದು, ಇದಕ್ಕೆ ಇನ್ನಷ್ಟು ದಿನಗಳೇ ಬೇಕಾಗಬಹುದು ಎನ್ನಲಾಗಿದೆ. ಈಗಾಗಲೇ ಆಫ್ರಿಕಾ ರಾಷ್ಟ್ರಗಳಿಗೆ ಬ್ರಿಟನ್, ಅಮೆರಿಕಾ ಹಾಗೂ ಯುರೋಪಿಯನ್ ಯೂನಿಯನ್ (ಇಯು) ಪ್ರಯಾಣ ನಿರ್ಬಂಧ ಹೇರಿದ್ದು, ಇದೀಗ ಫ್ರಾನ್ಸ್ ಕೂಡ ಇದೇ ಹಾದಿ ತುಳಿದಿದೆ.