ಫ್ಯಾಷನ್ ಶೋನಲ್ಲಿ ನಟಿ ಶೋಭಿತಾ

ಮುಂಬೈ,ಜು.೩೧-ಬಹುಭಾಷಾ ನಟಿ, ತೆಲುಗು ಸ್ಟಾರ್ ನಾಗ ಚೈತನ್ಯ ಅವರ ಗೆಳತಿ ಎಂದೇ ಖ್ಯಾತರಾಗಿರುವ ನಟಿ ಶೋಭಿತಾ ಧೂಳಿಪಾಲ ಮತ್ತೆ ಸುದ್ದಿಯಲ್ಲಿದ್ದಾರೆ. ಇತ್ತೀಚೆಗಷ್ಟೇ ಮುಂಬೈನಲ್ಲಿ ನಡೆದ ಫ್ಯಾಷನ್ ಕಾರ್ಯಕ್ರಮವೊಂದರಲ್ಲಿ ಶೋಭಿತಾ ಭಾಗಿಯಾಗಿದ್ದರು.
ರ್‍ಯಾಂಪ್ ವಾಕ್ ಮಾಡಿ ಗಮನ ಸೆಳೆದ ಚೆಲುವೆ, ಸಿಲ್ವರ್ ಕಲರ್ ಡ್ರೆಸ್‌ನಲ್ಲಿ ಮಿಂಚಿ, ತಮ್ಮ ಒಂದು ನೋಟದಿಂದ ಅಭಿಮಾನಿಗಳ ಹೃದಯವನ್ನೇ ಸ್ತಬ್ಧವಾಗಿಸಿದರು.
ನಟಿ ಶೋಭಿತಾ ಧೂಳಿಪಾಲ ಸೋಷಿಯಲ್ ಮೀಡಿಯಾದಲ್ಲಿ ಅತ್ಯಂತ ಜನಪ್ರಿಯ ಹೆಸರುಗಳಲ್ಲಿ ಒಬ್ಬರು. ಅಕ್ಕಿನೇನಿ ನಾಗಚೈತನ್ಯ ಮತ್ತು ಶೋಭಿತಾ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳಿಂದ ಸದಾ ಸುದ್ದಿಯಲ್ಲಿರುತ್ತಾರೆ. ಆದರೆ ಆಕೆ ಮಾತ್ರ ಆ ರೂಮರ್‌ಗಳಿಗೂ ತನಗೂ ಸಂಬಂಧವೇ ಇಲ್ಲ ಎಂಬಂತೆ ಸಾಮಾಜಿಕ ಜಾಲತಾಣಗಳಲ್ಲಿ ಹಾಟ್ ಫೋಟೋಶೂಟ್ ಮೂಲಕ ಸದ್ದು ಮಾಡುತ್ತಿದ್ದಾಳೆ.


ಇತ್ತೀಚೆಗಷ್ಟೇ ದಿ ನೈಟ್ ಮ್ಯಾನೇಜರ್-೨ ಎಂಬ ವೆಬ್ ಸಿರೀಸ್ ನಲ್ಲಿ ತುಂಬಾ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದರು. ಅವರು ತೆಲುಗು ಮೂಲದ ನಟಿಯಾಗಿದ್ದರೂ, ಶೋಭಿತಾ ಬಾಲಿವುಡ್‌ನಲ್ಲಿ ಉತ್ತಮ ಅವಕಾಶಗಳನ್ನು ಪಡೆಯುತ್ತಿದ್ದಾಳೆ , ವೃತ್ತಿಜೀವನವನ್ನು ಯಶಸ್ವಿಯಾಗಿ ಸಾಗಿಸುತ್ತಿದ್ದಾರೆ. ತೆಲುಗು ಚಿತ್ರರಂಗದಿಂದ ಬಾಲಿವುಡ್ ಗೆ ಜಿಗಿದ ಈಕೆ ಬಾಲಿವುಡ್ ನಟಿಯರನ್ನು ಮೀರಿಸುವಷ್ಟು ಬೋಲ್ಡ್ ಪೋಸ್ ನೀಡುತ್ತಿದ್ದಾಳೆ. ಟ್ರೆಂಡಿಯಾಗಿದ್ದರೂ, ಬಿಕಿನಿಯಲ್ಲಿದ್ದರೂ, ಸೀರೆಯಲ್ಲಿದ್ದರೂ ನೆವರ್ ಬಿ ಪೋರ್ ಎಂಬ ಬೋಲ್ಡ್ ಪೋಸ್ ಗಳ ಮೂಲಕ ಇಂಟರ್ ನೆಟ್ ಹಾಟ್ ಮಾಡುತ್ತಿದ್ದಾರೆ. ತನ್ನ ಮಾದಕ ಮೈಮಾಟ ಸೆಕ್ಸಿ ನೋಟದಿಂದ ಯುವಕರ ಮನ ಕದಿಯುತ್ತಾ ನಿದ್ದೆಯಿಲ್ಲದಂತೆ ಮಾಡುತ್ತಾಳೆ.