ಫ್ಯಾನ್ಸ್ ಕ್ರಿಕೆಟ್ ಲೀಗ್ ಗೆ ತಾರೆಯರ ಸಜ್ಜು

ಕನ್ನಡ ಚಿತ್ರರಂಗ್ ನಟರ ಅಭಿಮಾನಿಗಳು ಸೇರಿಕೊಂಡು ಫ್ಯಾನ್ಸ್ ಕ್ರಿಕೆಟ್ ಲೀಗ್ ಪಂದ್ಯಾವಳಿ ಏರ್ಪಡಿಸಲಾಗಿದ್ದು ಇದೀಗ  ಏಳನೇ ಸೀಸನ್ ಗೆ ಬಂದು ತಲುಪಿದೆ. ನಮ್ ಟಾಕೀಸ್ ತಂಡದ ಪ್ರಯತ್ನದಿಂದಾಗಿ ಎಲ್ಲಾ ಫ್ಯಾನ್ಸ್ ಒಟ್ಟಾಗಿದ್ದಾರೆ.

ಈಗಾಗಲೇ ಆರು ಸೀಸನ್ ಮುಗಿಸಿರುವ ಫ್ಯಾನ್ಸ್ ಕ್ರಿಕೆಟ್ ಲೀಗ್ ಈಗ ಏಳನೇ ಸೀಸನ್ ಗೆ ಸಜ್ಜಾಗಿ ನಿಂತಿದೆ. ಪ್ರತಿ ಬಾರಿ ಕನ್ನಡದ ಮೇರು ನಟರ ಹುಟ್ಟುಹಬ್ಬದಂದು ಎಫ್ ಸಿಎಲ್ ಆಯೋಜನೆ ಮಾಡಿಕೊಂಡು ಬರ್ತಿರುವ ಭರತ್  ಬಾರಿ ಗೀತಾ ರಚನಕಾರ ವಿ.ನಾಗೇಂದ್ರ ಹುಟ್ಟುಹಬ್ಬದ ಡಿಸೆಂಬರ್ ಐದರಿಂದ ಆರಂಭವಾಗುತ್ತಿವೆ

ಎಂಟು ತಂಡಗಳು ಎಫ್ ಸಿಎಲ್ ನಲ್ಲಿ ಆಡಲಿದ್ದು, ಇತ್ತೀಚೆಗಷ್ಟೇ ಜರ್ಸಿ ಬಿಡುಗಡೆ ಮಾಡಲಾಗಿದ್ದುಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ನೆನಪಿಗೆ ಆ ಅವರ ಸಿನಿಮಾಗಳ ಪೋಸ್ಟರ್  ಪ್ರಿಂಟ್ ಮಾಡಲಾಗಿದೆ.

ಶುಗರ್ ಲೆಸ್, ಸಖತ್, ಕಾಲಚಕ್ರ, ಮರ್ದಿನಿ, ರೈಡರ್, ಅರ್ಜುನ್ ಗೌಡ, ಬೈರಾಗಿ ಹಾಗೂ ಕ್ರಾಂತಿ ತಂಡಗಳು ಭಾಗವಹಿಸಲಿವೆ. ಡಿಸೆಂಬರ್ ಐದಕ್ಕೆ ಶುರುವಾಗ್ತಿರುವ ಫ್ಯಾನ್ಸ್ ಕ್ರಿಕೆಟ್ ಲೀಗ್ ಕರುನಾಡ ಚಕ್ರವರ್ತಿ ಡಾ.ಶಿವರಾಜ್ ಕುಮಾರ್ ಶುಭ ಕೋರಿದ್ದಾರೆ. ಈ ಬಾರಿ ಎಫ್ ಸಿಎಲ್ ಕಪ್ ಯಾರ ಪಾಲಾಗುತ್ತೋ ಕಾದು ನೋಡಬೇಕು.