ಫ್ಯಾಕ್ಟರಿಗಳಲ್ಲಿ ಲೋಡಿಂಗ್ ಮಾಮೂಲಿ ಪಡೆಯದಿರಲು ನಿರ್ಧಾರ

ರಾಯಚೂರು.ನ.೨೪- ಹತ್ತಿ ಕಾಳು ಜಿನ್ನಿಂಗ್ ಫ್ಯಾಕ್ಟರಿಗಳಲ್ಲಿ ಲೋಡಿಂಗ್ ಮಾಮೂಲಿ ತೆಗೆದುಕೊಳ್ಳುತ್ತಿರುವ ಬಗ್ಗೆ ಇಂದು ತೀರ್ಮಾನಿಸಲಾಯಿತು.
ಲಾರಿ ಓನರ್ಸ್ ವೆಲ್‌ಫೇರ್ ಅಸೋಸಿಯೇಷನ್, ಜಿನ್ನಿಂಗ್ ಫ್ಯಾಕ್ಟರಿ ಮಾಲೀಕರು ಮತ್ತು ಹಮಾಲರ ಶ್ರಮಿಕ್ ಸಂಘದ ಸದಸ್ಯರು ಸೇರಿ ರಾಯಚೂರಿನ ಜಿನ್ನಿಂಗ್ ಫ್ಯಾಕ್ಟರಿಯಲ್ಲಿ ಲೋಡಿಂಗ್‌ಗೆ ಮಾಮೂಲಿ ತೆಗೆದುಕೊಳ್ಳಬಾರದೆಂದು ನಿಗದಿಸಲಾಗಿದೆ. ಲಾರಿ ಚಾಲಕ ಅಥವಾ ಮಾಲೀಕನಲ್ಲಿ ಯಾವುದೇ ತರಹದ ಹಣವನ್ನು ತೆಗೆದುಕೊಳ್ಳಬಾರದೆಂದು ಮಾಜಿ ಶಾಸಕ ಎ.ಪಾಪಾರೆಡ್ಡಿ ಸೂಚಿಸಿದರು. ಲೋಕಲ್ ಲಾರಿಗಳು ಯಾವುದೇ ತರಹದ ಹಣ ಪಡೆಯುವುದಿಲ್ಲವೆಂದು ಸಹಮತಿಸಿವೆ. ಇದಕ್ಕೆ ಟ್ರಾನ್ಸ್‌ಪೋರ್ಟ್ ಮಾಲೀಕರು, ಲಾರಿ ಮಾಲೀಕರು ಒಪ್ಪಿಕೊಂಡಿದ್ದಾರೆ.
ಮಾಜಿ ಶಾಸಕ ಎ.ಪಾಪಾರೆಡ್ಡಿ ಅವರ ನೇತೃತ್ವದಲ್ಲಿ ನಡೆದ ಈ ಸಭೆಯಲ್ಲಿ ಗೂಡ್ಸ್ ಟ್ರಾನ್ಸ್‌ಪೋರ್ಟ್ ಅಧ್ಯಕ್ಷ ಗಿರಿಯಣ್ಣ, ಕಾಟನ್ ಜಿನ್ನಿಂಗ್ ಮಿಲ್ಲರ್ಸ್ ಅಧ್ಯಕ್ಷ ವಿ.ಲಕ್ಷ್ಮೀರೆಡ್ಡಿ, ಆರ್‌ಡಿಜಿಎ ಎಕ್ಬಾಲ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.