ಫೌಂಡ್ರಿ ಕ್ಷೇತ್ರದಲ್ಲಿ ಪಿಯರ್‌ಲೈಟ್ ಲೈನರ್ಸ್‌ ಸೇವೆ


ಸಂಜೆವಾಣಿ ವಾರ್ತೆ
ಶಿವಮೊಗ್ಗ. ಫೆ.೨೬; ಪಿಯರ್‌ಲೈಟ್ ಲೈನರ್ಸ್‌ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ಕೈಗಾರಿಕಾ ಕ್ಷೇತ್ರದಲ್ಲಿ ಐದು ದಶಕಗಳ ಮಹತ್ತರ ಸೇವೆ ಸಲ್ಲಿಸಿದ್ದು, ಸಿಲಿಂಡರ್ ಲೈನರ್ಸ್‌ ಮತ್ತು ಇಂಜಿನ್ ಉತ್ಪನ್ನಗಳ ತಯಾರಿಕೆಯಲ್ಲಿ ಗುಣಮಟ್ಟ ಮತ್ತು ನಾವೀನ್ಯತೆಯ ದಾರಿದೀಪವಾಗಿ ನಿಂತಿದೆ. ನಮ್ಮ ಸಂಸ್ಥೆಯ ಪ್ರಯಾಣವು ಕರ್ನಾಟಕ ರಾಜ್ಯದ ಸುಂದರವಾದ ನಗರ ಶಿವಮೊಗ್ಗದಲ್ಲಿ 1974ರಿಂದ ಆರಂಭಗೊಂಡಿತು.
ಫೌಂಡ್ರಿ ಉದ್ಯಮದಲ್ಲಿ ಸಣ್ಣದಾಗಿ ಹೆಜ್ಜೆಯನಿಟ್ಟು ಆರಂಭಿಸಿ ಸಿಲಿಂಡರ್ ಲೈನರ್ಸ್‌ಗಳ ತಯಾರಿಕೆ ಕ್ಷೇತ್ರದಲ್ಲಿ ಪರಿಣಿತಿ ಸಾಧಿಸಿ ಐದು ದಶಕಗಳಿಂದ ಗಮನಾರ್ಹ ಪಥದಲ್ಲಿ ಸಾಗಿದ್ದೇವೆ. 4.5 ಕೆ.ಜಿ. ಇಂದ 2,000 ಕೆ.ಜಿ.ವರೆಗೆ ಸಿಲಿಂಡರ್ ಲೈನರ್‌ಗಳ ಉತ್ಪಾದಿಸುವ ಸಾಮಾರ್ಥ್ಯವನ್ನು ಹೊಂದುವ ಮುಖಾಂತರ ಪ್ರಸಿದ್ಧ ತಯಾರಕರಾಗಿ ಸಂಸ್ಥೆ ಬೆಳೆದಿದೆ. ಅಗತ್ಯವಿರುವ ಎಲ್ಲ ಅಂಶಗಳನ್ನು ಒಳಗೊಂಡು ಪರಿಪೂರ್ಣ ಉತ್ಪನ್ನಗಳನ್ನು ಸಿದ್ಧಪಡಿಸಲಾಗುತ್ತಿದೆ.ಸಂಸ್ಥೆಯು ಉತ್ಪನ್ನಗಳ ವೈವಿಧ್ಯ ತಯಾರಿಕೆಯಲ್ಲಿ ಪರಿಣತಿ ಸಾಧಿಸಿದ್ದು, ಸ್ವಲ್ಪ ಪ್ರಮಾಣದ ಸ್ವಯಂ ಚಾಲಿತ ವ್ಯವಸ್ಥೆಯ ಫಾಸ್ಟ್ ಲೂಪ್ ಮೊಲ್ಡಿಂಗ್ ಲೈನ್ ಸ್ಥಾಪನೆಯೊಂದಿಗೆ ಇಂಜಿನ್ ಕಾಸ್ಟಿಂಗ್ ಉದ್ಯಮದ ಜಗತ್ತಿನಲ್ಲಿ ಸಾಹಸ ಮಾಡುತ್ತಿದೆ.ಇಂದು ಪ್ರಪಂಚಾದ್ಯಂತ ಇರುವ ಯಂತ್ರೋಪಕರಣಗಳನ್ನು ನಮ್ಮ ಸಂಸ್ಥೆಯ ಉತ್ಪನ್ನಗಳು ಅಲಂಕರಿಸುತ್ತಿದ್ದು, ಕಂಪ್ರೆಸರ್‌ಗಳು, ಟ್ರ್ಯಾಕ್ಟರ್‌ಗಳು, ಕೈಗಾರಿಕಾ ಎಂಜಿನ್‌ಗಳು, ಜೆನ್‌ಸೆಟ್‌ಗಳು, ಲೊಕೊಮೊಟೀವ್ ಇಂಜಿನ್‌ಗಳು, ಮೆರೈನ್ ಇಂಜಿನ್‌ಗಳು, ರಕ್ಷಣಾ ಟ್ರಕ್‌ಗಳು, ಆರ್ಮಿ ಟ್ಯಾಂಕರ್‌ಗಳು ಮತ್ತು ಇನ್ನೂ ಹೆಚ್ಚಿನ ಮೂಲ ಸಲಕರಣೆ ತಯಾರಕರ ನಂಬಿಕೆಗೆ ನಮ್ಮ ಸಂಸ್ಥೆಯು ಪಾತ್ರವಾಗಿದೆ. ಸಂಸ್ಥೆ ಬದ್ಧತೆಯು ಗ್ರಾಹಕರ ಅಪಾರ ನೀರಿಕ್ಷೆಗಳನ್ನು ಪೂರೈಸಿ ಉತ್ಪನ್ನಗಳನ್ನು ತಲುಪಿಸುತ್ತಿದೆ.ನಮ್ಮ ಉತ್ಪನ್ನಗಳು ಇಟಲಿ, ಅಮೇರಿಕಾ, ಇಂಗ್ಲೆಂಡ್, ಯುಎಇ, ಜರ್ಮನಿ ಮತ್ತು ಹಲವಾರು ದೇಶಗಳಲ್ಲಿರುವ ಗೌರವಾನ್ವಿತ ಗ್ರಾಹಕರನ್ನು ತಲುಪುತ್ತಿವೆ. ನಿಖರವಾದ ವಿಶೇಷಣಗಳನ್ನು ಒಳಗೊಂಡು ಸಿದ್ಧವಾದ ಉತ್ಪನ್ನಗಳು ಮೂರು ದಶಕಗಳಿಂದಲೂ ವಿದೇಶಗಳಿಗೆ ರಫ್ತಾಗುತ್ತಿದೆ. ಉತ್ಪನ್ನಗಳು ಹಾಗೂ ಸೇವೆಗಳನ್ನು ನಿಮ್ಮ ನೀರಿಕ್ಷೆಗೂ ಮೀರಿ ಪೂರೈಸುವುದರಲ್ಲಿ ನಾವು ನಂಬಿಕೆ ಇಟ್ಟಿದ್ದೇವೆ. ಒಂದೇ ಸಿಲಿಂಡರ್ ಲೈನರ್ ಆಗಿರಲಿ ಅಥವಾ ಅತಿ ದೊಡ್ಡ ಉತ್ಪನ್ನಗಳ ಸೇವೆ ಇರಲಿ ಪರಿಪೂರ್ಣ ಸೇವೆ ಹಾಗೂ ಪರಿಹಾರ ಒದಗಿಸಲು ಸಿದ್ಧರಿದ್ದೇವೆ.ಪಿಯರ್‌ಲೈಟ್ ಲೈನರ್ಸ್‌ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ಹೆಚ್ಚು ನುರಿತ ಹಾಗೂ ಅನುಭವಿ ವೃತ್ತಿಪರರ ತಂಡ ಹೊಂದಿರುವ ಹೆಮ್ಮೆ ಇದೆ. ಗ್ರಾಹಕರ ಅನನ್ಯ ಬೇಡಿಕೆಗಳನ್ನು ನೀರಿಕ್ಷೆಗೆ ತಕ್ಕಂತೆ ಪರಿಹಾರ ರೂಪದಲ್ಲಿ ಸೇವೆ ನೀಡಲು ಪರಿಣತಿ ಹೊಂದಿದ್ದೇವೆ. ಗ್ರಾಹಕರಿಗೆ ನೀರಿಕ್ಷಿತ ಉತ್ತಮ ಸೇವೆ, ಸಮಯಕ್ಕೆ ಸರಿಯಾಗಿ ಉತ್ಪನ್ನಗಳ ಪೂರೈಕೆ ಹಾಗೂ ಗುಣಮಟ್ಟ ಕಾಯ್ದುಕೊಳ್ಳುವಿಕೆಯ ಖಾತರಿ ಒದಗಿಸುತ್ತೇವೆ.