ಫೌಂಡೇಶನ್ ವತಿಯಿಂದ ಕಾನ್ಸಂಟ್ರೇಟರ್ ಕಾಣಿಕೆ

ಚಿಕ್ಕೋಡಿ,ಜೂ9: ನಿಪ್ಪಾಣಿ ಮತಕ್ಷೇತ್ರದ ಸೌಂದಲಗಾದಲ್ಲಿರುವ ಸಂತ ನಿರಂಕಾರಿ ಚಾರಿಟೇಬಲ್ ಫೌಂಡೇಶನ್ ಹಾಗೂ ಜೊಲ್ಲೆ ಚಾರಿಟಿ ಫೌಂಡೇಶನ್ ಸಹಯೋಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಕೋವಿಡ್ ಆರೈಕೆ ಕೇಂದ್ರಕ್ಕೆ ದೆಹಲಿಯ ಸದ್ಗುರು ಮಾತಾ ಸುಧೀಕ್ಷಾ ಮಹಾರಾಜ ಅವರು ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ ಶಶಿಕಲಾ ಜೊಲ್ಲೆ, ಹಾಗೂ ಚಿಕ್ಕೋಡಿ ಲೋಕಸಭೆ ಸಂಸದರಾದ ಅಣ್ಣಾಸಾಹೇಬ ಜೊಲ್ಲೆಯವರಿಗೆ 80 ಬೆಡ್, 80 ಆಕ್ಸಿಜನ್ ಕಾನ್ಸಟ್ರೇಂಟರ್ ಮಷಿನ್, 1,500 ಮಾಸ್ಕ್ ಹಾಗೂ 50 ಲೀಟರ್ ಸ್ಯಾನಿಟೈಸರ್ ಹಸ್ತಾಂತರಿಸಿದರು.
ಸೇವಾ ಕಾರ್ಯಕ್ಕೆ ಕೈಜೋಡಿಸಿದ ಸದ್ಗುರು ಮಾತಾ ಸುಧೀಕ್ಷಾ ಜಿ ಮಹಾರಾಜ ಅವರಿಗೆ ಸಚಿವೆ ಶಶಿಕಲಾ ಜೊಲ್ಲೆ ಹಾಗೂ ಸಂಸದ ಅಣ್ಣಾಸಾಹೇಬ ಜೊಲ್ಲೆ ಮನಃಪೂರ್ವಕ ಧನ್ಯವಾದಗಳನ್ನು ತಿಳಿಸಿದರು. ನಂತರ ಮಾತನಾಡಿದ ಅವರು ನಮ್ಮ ಈ ಕಾರ್ಯಕ್ಕೆ ಮುಕ್ತ ಮನಸ್ಸಿನಿಂದ ದಾನಿಗಳು ನೆರವು ನೀಡಲು ಇಚ್ಛಿಸಿದ್ದಲ್ಲಿ, ಅದನ್ನು ಸ್ವೀಕರಿಸಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂತ ನಿರಂಕಾರಿ ಸಂಘದ ಸೌಂದಲಗಾ ಅಧ್ಯಕ್ಷರಾದ ಗಣಪತಿ ಗಾಡಿವಡ್ಡರ, ನಿಪ್ಪಾಣಿ ನಗರಸಭೆ ಅಧ್ಯಕ್ಷರಾದ ಜಯವಂತ ಬಾಟಲೆ, ತಾ. ಪಂ.ಸದಸ್ಯರಾದ ಕಿರಣ ನಿಕಾಡೆ, ಸಾಗರ ದೇಸಾಯಿ, ಪ್ರಕಾಶ ಶಿಂಧೆ, ದಾದು ಕೊಗನೊಳೆ, ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.