ಫೋಟೋ ಹಂಚಿಕೊಂಡ ಮೇಘನಾ

ಬೆಂಗಳೂರು,ಏ.೨೨- ನಟಿ ಮೇಘನಾ ರಾಜ್ ಅವರು ಪುತ್ರ ಮತ್ತು ದಿವಂಗತ ಪತಿ, ನಟ ಚಿರಂಜೀವಿ ಸರ್ಜಾ ಜೊತೆ ಇರುವ “ಚಿತ್ರಕಲೆ” ಯ ಫೋಟೋ ಅನ್ನು ಅಭಿಮಾನಿಯೊಬ್ಬರು ಚಿತ್ರಿಸಿ ನಟಿ ಮೇಘನಾ ರಾಜ್ ಅವರಿಗೆ ಕಳುಹಿಸಿಕೊಟ್ಟಿದ್ದಾರೆ.
ಅಭಿಮಾನಿ ಕಳುಹಿಸಿಕೊಟ್ಟಿರುವ ಅಪರೂಪದ ಚಿತ್ರವನ್ನು ನಟಿ ಮೇಘನಾ ರಾಜ್ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ ಅಭಿಮಾನಿಗಳಿಂದ ಶುಭಾಷಯಗಳ ಮಹಾಪೂರವೇ ಹರಿದು ಬಂದಿದೆ.
ಪುತ್ರ ಜೂನಿಯರ್ ಚಿರುಗೆ ೬ ತಿಂಗಳು ಪೂರ್ಣಗೊಂಡಿರುವ ಸಮಯದಲ್ಲಿ ನಟಿ ಮೇಘನಾ ಅವರು ಈ ಅಪರೂಪದ ಚಿತ್ರಕಲೆಯ ಫೋಟೋ ಹಂಚಿಕೊಂಡು ಸಂಭ್ರಮಪಟ್ಟಿದ್ದಾರೆ.
ಹೃದಯಾಘಾತದಿಂದ ಕಳೆದ ವರ್ಷ ಜೂನ್ ೭ ರಂದು ನಟ ಚಿರಂಜೀವಿ ಸರ್ಜಾ ನಿಧನರಾಗಿದ್ದರು.
ಆಗಿನ್ನೂ ಐದು ತಿಂಗಳ ಗರ್ಭಿಣಿಯಾಗಿದ್ದ ನಟಿ ಮೇಘನಾ ರಾಜ್, ಇದೀಗ ತಮ್ಮ ೬ ತಿಂಗಳ ಪುತ್ರ ಮೂಲಕ ಪತಿಯ ನೋವು ಮರೆಯುತ್ತಿದ್ದಾರೆ.
ಚಿರಂಜೀವಿ ಸರ್ಜಾ ಅಭಿಮಾನಿಯೊಬ್ಬರು ಆರ್ಟ್ ವರ್ಕ್ ಮೂಲಕ ಮಾಡಿರುವ ಈ ಭಾವಚಿತ್ರ ಎಲ್ಲರ ಗಮನ ಸೆಳೆದಿದೆ. ಪತಿ ದಿವಂಗತ ಚಿರು ಜೊತೆಗೆ ಮಗ ಮತ್ತು ನಟಿ ಮೇಘನಾ ಇರುವ ಫೋಟೋ ಹೆಚ್ಚು ಗಮನ ಸೆಳೆದಿದೆ.
ಆರ್ಟ್ ವರ್ಕ್ ಇರುವ ಫೋಟೊಗೆ ನಟಿ ಮೇಘನಾ ಅವರು ಫ್ಯಾಬುಲೆಸ್ ಎಂದು ಬರೆದಿದ್ದಾರೆ. ಇದಕ್ಕೆ ಮೆಚ್ಚುಗೆಯ ಮಹಪೂರವೇ ಹರಿದು ಬಂದಿದೆ.