ಫೋಟೋಗ್ರಾಫರ್ಸ್ ಗೆ ಮುರುಘಾ ಶ್ರೀ ನೆರವು

ಚಿತ್ರದುರ್ಗ, ಮೇ – 31 ನಗರದ ಶ್ರೀ ಮುರುಘರಾಜೇಂದ್ರ ಬೃಹನ್ಮಠದ ಆವರಣದಲ್ಲಿ  ಡಾ. ಶಿವಮೂರ್ತಿ ಮುರುಘಾ ಶರಣರು ಕೋವಿಡ್‌ನಿಂದಾಗಿ ಸಂಕಷ್ಟದಲ್ಲಿರುವ ವಿಶ್ವಕರ್ಮ ಸಮಾಜ, ಫೋಟೋ ಮತ್ತು ವೀಡಿಯೋಗ್ರಾರ‍್ಸ್, ಎಸ್.ಜೆ.ಎಂ. ಬ್ರಿಕ್ಸ್ ಕಾರ್ಮಿಕರು, ಕೋರಿಯರ್ ಸಿಬ್ಬಂದಿ ಹಾಗು ವಿವಿಧ ಅಂಗಡಿಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ಸೇರಿದಂತೆ 110ಜನರಿಗೆ ಆಹಾರ ಧಾನ್ಯದ ಕಿಟ್‌ಗಳನ್ನು ವಿತರಿಸಿದರು.ಈ ಸಂದರ್ಭದಲ್ಲಿ ಎಸ್.ಜೆ.ಎಂ. ವಿದ್ಯಾಪೀಠದ ಕಾರ‍್ಯದರ್ಶಿ ಎ.ಜೆ.ಪರಮಶಿವಯ್ಯ, ಬಸವರಾಜ್ ಕಟ್ಟಿ, ವಿಶ್ವಕರ್ಮ ಸಮಾಜದ ಶಂಕರಮೂರ್ತಿ, ಹಾಲಪ್ಪನಾಯಕ, ಬಸವರಾಜ ಗಡ್ಡೆಪ್ಪನವರ್ ಮೊದಲಾದವರಿದ್ದರು.