ಫೋಟೊ ಸ್ಟುಡಿಯೋ ಬೀಗ ಮುರಿದು 5 ಲಕ್ಷ ರೂ.ಮೌಲ್ಯದ ವಸ್ತು ಕಳವು

ಕಲಬುರಗಿ,ನ.3-ಫೋಟೊ ಸ್ಟುಡಿಯೋ ಬೀಗ ಮುರಿದು ವಿಡಿಯೋ ಕ್ಯಾಮೆರಾ ಸೇರಿದಂತೆ ಸುಮಾರು 5 ಲಕ್ಷ ರೂ.ಮೌಲ್ಯದ ವಸ್ತುಗಳನ್ನು ಕಳವು ಮಾಡಿದ ಘಟನೆ ಆಳಂದ ಪಟ್ಟಣದಲ್ಲಿ ನಡೆದಿದೆ.
ಸಂತೋಷ ಧೂಳೆ ಎಂಬುವವರಿಗೆ ಸೇರಿದ ಫೋಟೊ ಸ್ಟುಡಿಯೋ ಬೀಗ ಮುರಿದು 1.40 ಲಕ್ಷ ರೂ.ಮೌಲ್ಯದ ವಿಡಿಯೋ ಕ್ಯಾಮೆರಾ, 1.30 ಲಕ್ಷ ಮತ್ತು 80 ಸಾವರ ರೂ.ಮೌಲ್ಯದ ಎರಡು ಕ್ಯಾಮೆರಾ, 40 ಸಾವಿರ ರೂ.ಮೌಲ್ಯದ ಲ್ಯಾಪ್‍ಟಾಪ್ ಮತ್ತು ಸಿ.ಸಿ.ಟಿ.ವಿ ಹಾರ್ಡಡಿಸ್ಕ್ ಕಳವು ಮಾಡಲಾಗಿದೆ.
ಈ ಸಂಬಂಧ ಆಳಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.