ಫೈನಲ್ ಗೆ ಒಸಾಕ ಮುನ್ನಡೆ


ನ್ಯೂಯಾರ್ಕ್, ಸೆ .11 -ನಾಲ್ಕನೇ ಶ್ರೇಯಾಂಕಿತೆ ಜಪಾನಿನ ನವೊಮಿ ಒಸಾಕ ಯುಎಸ್ ಓಪನ್ ಗ್ರ್ಯಾನ್ ಸ್ಲಾಮ್ ಟೆನಿಸ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಫೈನಲ್ ಪ್ರವೇಶಿಸಿದ್ದಾರೆ.
ಗುರುವಾರ ತಡರಾತ್ರಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಅಧಿಕಾರಯುತ ಪ್ರದರ್ಶನ ನೀಡಿದ ಒಸಾಕಾ ಅಮೆರಿಕದ ಜೆನ್ನಿಫರ್ ಬ್ರ್ಯಾಡಿ ಅವರನ್ನು ಬಗ್ಗು ಬಡಿದು ಪ್ರಶಸ್ತಿ ಸುತ್ತು ತಲುಪಿದರು. 2018ರಲ್ಲಿ ಪ್ರಶಸ್ತಿ ಜಯಿಸಿದ್ದ ಒಸಾಕಾ ಮೊದಲ ಸೆಟ್ ನಲ್ಲಿ ಎದುರಾಳಿ ಆಟಗಾರ್ತಿಯಿಂದ ದಿಟ್ಟ ಪ್ರತಿರೋಧ ಎದುರಿಸಿದರೂ. ಆದರೆ ಛಲ ಬಿಡದ ಜಪಾನ್ ಆಟಗಾರ್ತಿ ಟೈಬ್ರೇಕರ್ ನಲ್ಲಿ ಮಿಂಚುವ ಮೂಲಕ ಸೆಟ್ ವಶಪಡಿಸಿಕೊಂಡರು.
3ನೇ ಶ್ರೇಯಾಂಕಿತ ಒಸಾಕ 7-6(7-1), 3-6, 6-3 ನೇರ ಸೆಟ್ ಗಳಿಂದ ಬ್ರ್ಯಾಡಿಗೆ ಸೋಲುಣಿಸಿದರು. ಒಸಾಕ ಪ್ರಶಸ್ತಿಗಾಗಿ ಶನಿವಾರ ಮತ್ತೊಂದು ಸೆಮಿಫೈನಲ್ ನಲ್ಲಿ ಮುಖಾಮುಖಿಯಾಗಲಿರುವ ಸೆರೆನಾ ವಿಲಿಯಮ್ಸ್ ಅಥವಾ ವಿಕ್ಟೋರಿಯಾ ಅಜಾರೆಂಕಾ ನಡುವಿನ ವಿಜೇತರನ್ನು ಎದುರಿಸಲಿದ್ದಾರೆ