’ಫೈಟರ್’ ಫಿಲ್ಮ್ ನ ಫಸ್ಟ್ ಲುಕ್ ಹಂಚಿಕೊಂಡ ಹೃತಿಕ್ ರೋಷನ್

ಹೃತಿಕ್ ರೋಷನ್ ’ಫೈಟರ್’ ಫಿಲ್ಮ್ ನ ಫಸ್ಟ್ ಲುಕ್ ಹಂಚಿಕೊಂಡಿದ್ದು, ಚಿತ್ರದ ಬಿಡುಗಡೆ ದಿನಾಂಕವನ್ನು ಶೀರ್ಷಿಕೆಯಲ್ಲಿ ಬಿಡುಗಡೆ ಮಾಡಿದ್ದಾರೆ. ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ನೋಡಿದ ಅವರ ಅಭಿಮಾನಿಗಳು ತುಂಬಾ ಉತ್ಸುಕರಾಗಿದ್ದಾರೆ.
ಬಾಲಿವುಡ್ ನ ಹ್ಯಾಂಡ್ಸಮ್ ಹಂಕ್ ಹೃತಿಕ್ ರೋಷನ್ ತಮ್ಮ ಮುಂಬರುವ ಆ?ಯಕ್ಷನ್-ಥ್ರಿಲ್ಲರ್ ಚಿತ್ರ ’ಫೈಟರ್’ನ ಫಸ್ಟ್ ಲುಕ್ ನ್ನು ಬಿಡುಗಡೆ ಮಾಡಿದ್ದು, ಅಭಿಮಾನಿಗಳನ್ನು ಆಶ್ಚರ್ಯಗೊಳಿಸಿದ್ದಾರೆ. ನಟನ ಈ ಲುಕ್ ಚಿತ್ರದ ಬಗ್ಗೆ ಅಭಿಮಾನಿಗಳ ಉತ್ಸಾಹವನ್ನು ಮತ್ತಷ್ಟು ಹೆಚ್ಚಿಸಿದೆ. ಹೃತಿಕ್ ತಮ್ಮ ಲುಕ್ ಜೊತೆಗೆ ಚಿತ್ರದ ಬಿಡುಗಡೆ ದಿನಾಂಕವನ್ನೂ ಘೋಷಿಸಿದ್ದಾರೆ .


ಹೃತಿಕ್ ರೋಷನ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ’ಫೈಟರ್’ ಚಿತ್ರದ ಫಸ್ಟ್ ಲುಕ್ ನ್ನು ಹಂಚಿಕೊಂಡಿದ್ದು ಈ ಚಿತ್ರದಲ್ಲಿ ಹೃತಿಕ್ ಮುಖ ಕಾಣಿಸುತ್ತಿಲ್ಲ. ಅವರು ಫೈಟರ್ ಜೆಟ್ ಬಳಿ ಕ್ಯಾಮೆರಾದ ಕಡೆಗೆ ಬೆನ್ನಿನೊಂದಿಗೆ ನಿಂತಿರುವುದು ಕಂಡುಬರುತ್ತದೆ. ಚಿತ್ರದಲ್ಲಿ ನಟನ ಮುಖ ಕಾಣಿಸದಿದ್ದರೂ, ಚಿತ್ರದಲ್ಲಿ ಹೃತಿಕ್ ಹೆಚ್ಚು ಚುರುಕಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಅವರ ನೋಟದಿಂದ ಊಹಿಸಬಹುದು.
ಶೀರ್ಷಿಕೆಯಲ್ಲಿ ಬಿಡುಗಡೆ ದಿನಾಂಕವನ್ನು ಹೃತಿಕ್ ಹೇಳಿದ್ದಾರೆ:
ಈ ಚಿತ್ರವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡ ಹೃತಿಕ್ ರೋಷನ್ ಶೀರ್ಷಿಕೆಯಲ್ಲಿ ಬರೆದಿದ್ದಾರೆ – ಫೈಟರ್.. .. ೨೫ ಜನವರಿ ೨೦೨೪.. ಫೈಟರ್‌ಗೆ ಕಾಯಲು ಇನ್ನು ಏಳು ತಿಂಗಳು. ..


ಹೃತಿಕ್ ಅವರ ಈ ಪೋಸ್ಟ್ ನೋಡಿ, ಅವರ ಅಭಿಮಾನಿಗಳು ತುಂಬಾ ಸಂತೋಷಪಟ್ಟಿದ್ದಾರೆ ಮತ್ತು ಕಾಮೆಂಟ್ ವಿಭಾಗದಲ್ಲಿ ನಟನಿಗೆ ಹೃದಯ ಎಮೋಜಿಯನ್ನು ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಹೃತಿಕ್ ರೋಷನ್ ಜೊತೆಗೆ ಬಾಲಿವುಡ್‌ನ ಸೂಪರ್ ಸೆಕ್ಸಿ ಮಹಿಳೆ ಅಂದರೆ ದೀಪಿಕಾ ಪಡುಕೋಣೆ ಕಾಣಿಸಿಕೊಳ್ಳಲಿದ್ದಾರೆ . ಸಿದ್ಧಾರ್ಥ್ ಆನಂದ್ ಅವರ ಈ ಚಿತ್ರದಲ್ಲಿ ಹೃತಿಕ್ ರೋಷನ್ ಮತ್ತು ದೀಪಿಕಾ ಪಡುಕೋಣೆ ಅವರಲ್ಲದೆ, ಬಾಲಿವುಡ್‌ನ ಎವರ್‌ಗ್ರೀನ್ ನಟ ಅನಿಲ್ ಕಪೂರ್ ಕೂಡ ಕಾಣಿಸಿಕೊಳ್ಳಲಿದ್ದಾರೆ. ಸಿದ್ಧಾರ್ಥ್ ಆನಂದ್ ಜೊತೆಗಿನ ಹೃತಿಕ್ ರೋಷನ್ ಅವರ ಮೂರನೇ ಚಿತ್ರ. ಈ ಹಿಂದೆ ಅವರು ಸಿದ್ಧಾರ್ಥ್ ಅವರ ’ಬ್ಯಾಂಗ್ ಬ್ಯಾಂಗ್’ ಮತ್ತು ’ವಾರ್’ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.

ಪರಿಣಿತಿ ಚೋಪ್ರಾ ಫೋಟೋಗ್ರಾಫರ್ ಗಳಿಂದ ತಪ್ಪಿಸಿಕೊಂಡಾಗ….

ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಕಳೆದ ತಿಂಗಳು ಆಮ್ ಆದ್ಮಿ ಪಕ್ಷದ ನಾಯಕ ರಾಘವ್ ಚಡ್ಡಾ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ನಿಶ್ಚಿತಾರ್ಥದ ನಂತರ ಪರಿಣಿತಿ ಲೈಮ್‌ಲೈಟ್‌ನಲ್ಲಿದ್ದಾರೆ. ಆದರೆ ಅವರು ತನ್ನನ್ನು ಲೈಮ್‌ಲೈಟ್‌ನಿಂದ ದೂರವಿರಿಸಲು ಸದಾ ಪ್ರಯತ್ನಿಸುತ್ತಿದ್ದಾರೆ. ಇದೀಗ ಆಕೆಯ ವೀಡಿಯೋವೊಂದು ಹೊರಬಿದ್ದಿದ್ದು, ಇದರಲ್ಲಿ ಪರಿಣಿತಿ ಫೋಟೋಗ್ರಾಫರ್ ಗಳ ಮೇಲೆ ಕೋಪಗೊಂಡಿದ್ದಾರೆ.


ಪರಿಣಿತಿಯ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕ್ಲಿಪ್‌ನಲ್ಲಿ ನಟಿ ತೀವ್ರ ಅಸಮಾಧಾನಗೊಂಡಿರುವುದನ್ನು ಕಾಣಬಹುದು. ಪರಿಣಿತಿ ಬಹಳ ದಿನಗಳ ನಂತರ ಮುಂಬೈನಲ್ಲಿ ಕಾಣಿಸಿಕೊಂಡಿದ್ದುದು ನಿಜ. ಅಷ್ಟರಲ್ಲಿ ಫೋಟೋಗ್ರಾಫರ್ ಗಳು ಅವರನ್ನು ಸುತ್ತುವರೆದರು. ಇದು ನಟಿಗೆ ತುಂಬಾ ಕೋಪ ತರಿಸಿತ್ತು.
ಈ ಫೋಟೋಗ್ರಾಫರ್ ಗಳು ಪರಿಣಿತಿಯನ್ನು ಗುರುತಿಸಿದ ತಕ್ಷಣ, ಎಲ್ಲರೂ ಅವರನ್ನು ತಮ್ಮ ಕ್ಯಾಮೆರಾಗಳಲ್ಲಿ ಸೆರೆಹಿಡಿಯಲು ಧಾವಿಸಿದರು, ಆದರೆ ನಟಿಗೆ ತಮ್ಮ ಫೋಟೋಗಳನ್ನು ಕ್ಲಿಕ್ ಮಾಡುವ ಮನಸ್ಥಿತಿ ಇರಲಿಲ್ಲ. ಅವರು ಫೋಟೋ ಗ್ರಾಫರ್ ಗಳೊಂದಿಗೆ ತುಂಬಾ ಅಸಮಾಧಾನಗೊಂಡಿದ್ದರು. ಹಾಗೂ ಅವರು ತಮ್ಮ ಫೋಟೋ ಕ್ಲಿಕ್ಕಿಸಲು ಸಾರಾಸಗಟಾಗಿ ನಿರಾಕರಿಸಿದರು.


ಪರಿಣಿತಿ ಫೋಟೋಗ್ರಾಫರ್ ಗಳ ಮೇಲಿನ ಕೋಪವನ್ನು ಹೊರಹಾಕಿದರು:
ಫೋಟೋ ಗ್ರಾಫರ್ ಗಳನ್ನು ನೋಡಿದ ಪರಿಣಿತಿ ಚೋಪ್ರಾ ಮೊದಲು ತಿರುಗಿ ಬೆನ್ನು ಕಾಣಿಸಿ ನಿಂತರು, ನಂತರ ’ಅರೆ ಯಾರ್ ,ರುಖೋ ಎಂದು ತಡೆದರು. ಆವಾಗ ಅಂಗರಕ್ಷಕರು ಅವರನ್ನು ಸುತ್ತುವರೆದು ಕರೆದೊಯ್ದರು.ಪಿಂಕ್ ಸಲ್ವಾರ್-ಸೂಟ್‌ನಲ್ಲಿ ಕಾಣಿಸಿಕೊಂಡಿರುವ ಪರಿಣಿತಿ ಅವರ ಈ ವೀಡಿಯೊ ಇಂಟರ್ನೆಟ್‌ನಲ್ಲಿ ವೈರಲ್ ಆಗುತ್ತಿದೆ ಮತ್ತು ಜನರು ಇದಕ್ಕೆ ತಮ್ಮ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.
ಅನೇಕರು ಪರಿಣಿತಿಯ ಇಂತಹ ವರ್ತನೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಕೆಲವರು ಪರಿಣಿತಿಯನ್ನು ‘ಅಹಂಕಾರಿ’ ಎಂದು ಕರೆಯುತ್ತಿದ್ದು, ಆಕೆಗೆ ಅಷ್ಟೊಂದು ಯಾರೂ ಮಹತ್ವ ಕೊಡಬಾರದು ಎಂದಿದ್ದಾರೆ.
ಮದುವೆಯ ಪ್ರಶ್ನೆಗೆ ಪರಿಣಿತಿ ಉತ್ತರ:
ಮೊನ್ನೆ ರಾತ್ರಿ ಪ್ರಶಸ್ತಿ ಸಮಾರಂಭದಿಂದ ಹೊರಡುವಾಗ, ಪರಿಣಿತಿ ಚೋಪ್ರಾ ಕೂಡ ಫೋಟೋಗ್ರಾಫರ್ ಗಳಿಂದ ಸುತ್ತುವರೆದಿದ್ದರು.ಪರಿಣಿತಿ ಲಿಫ್ಟ್ ಪ್ರವೇಶಿಸಿದಾಗ, ಅವರ ಮದುವೆಯ ಬಗ್ಗೆ ಕೇಳುತ್ತಿದ್ದರು.
ನಟಿ ಯಾವಾಗ ಮದುವೆಯಾಗುತ್ತಾರೆ? ಮದುವೆಯ ನಂತರ ಅವರ ಜೀವನ ಹೇಗೆ ನಡೆಯುತ್ತದೆ ಎಂದೆಲ್ಲ ಕೇಳಿದ್ದರು. ಆಗ ನಟಿ ನಾನು ಇನ್ನೂ ಮದುವೆಯಾಗಿಲ್ಲ… ಎಂದಷ್ಟೇ ಹೇಳಿದ್ದರು.
ಈ ಪತ್ರಕರ್ತರೆಲ್ಲ ಮದುವೆ ಬಗ್ಗೆ ಕೇಳುತ್ತಾರೆಂದು ಪರಿಣಿತಿ ಚೋಪ್ರಾಗೆ ಕಿರಿಕಿರಿಯಾಗಿದೆ.
ಪರಿಣಿತಿ ಶೀಘ್ರದಲ್ಲೇ ಇಮ್ತಿಯಾಜ್ ಅಲಿ ಅವರ ’ಚಮ್ಕಿಲಾ’ ದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದರಲ್ಲಿ ಅವರು ದಿಲ್ಜಿತ್ ದೋಸಾಂಜ್ ಅವರೊಂದಿಗೆ ತೆರೆ ಹಂಚಿಕೊಳ್ಳಲಿದ್ದಾರೆ.