ಫೈಜರ್ ಲಸಿಕೆ ರೂಪಾಂತರಿಗೂ ಪರಿಣಾಮಕಾರಿ

ವಾಷಿಂಗ್ಟನ್, ಜ. ೮- ಕೊರೊನಾಗೆ ಅಮೆರಿಕಾ ಅಭಿವೃದ್ಧಿಪಡಿಸಿರುವ ಫೈಜರ್ ಲಸಿಕೆ ರೂಪಾಂತರ ಕೊರೊನಾ ವೈರಸ್ ವಿರುದ್ದವೂ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿ ರೂಪಾಂತರ ಕೊರೊನಾ ವೈರಸ್‌ನ್ನು ತಡೆಗಟ್ಟುವ ಸಾಮರ್ಥ್ಯ ಹೊಂದಿದೆ ಎಂದು ಹೊಸ ಅಧ್ಯಯನ ವರದಿಗಳು ಹೇಳಿವೆ.
ಬ್ರಿಟನ್ ಹಾಗೂ ದಕ್ಷಿಣಾ ಆಫ್ರಿಕಾದಲ್ಲಿ ಕಾಣಿಸಿಕೊಂಡಿರುವ ರೂಪಾಂತರ ಕೊರೊನಾ ವೈರಸ್ ವಿರುದ್ಧ ಹೋರಾಡುವ ಶಕ್ತಿ, ಸಾಮರ್ಥ್ಯ ಫೈಸರ್ ಕೋವಿಡ್-೧೯ ಲಸಿಕೆಗೆ ಇದೆ ಎಂದು ಅಧ್ಯಯನ ವರದಿಗಳು ಹೇಳಿವೆ.
ಯಾವುದೇ ವೈರಸ್‌ಗಳು ರೂಪಾಂತರಗೊಳ್ಳುವುದು ಸಾಮಾನ್ಯ ಪ್ರಕ್ರಿಯೆ. ಹಾಗಾಗಿ ಕೊರೊನಾಗೆ ಈಗ ಅಭಿವೃದ್ಧಿಪಡಿಸಿರುವ ಲಸಿಕೆಗಳು ರೂಪಾಂತರ ವೈರಸ್‌ನಿಂದಲೂ ರಕ್ಷಣೆ ನೀಡುತ್ತವೆ ಎಂದು ಹೇಳಲಾಗಿದೆ.
ಅಮೆರಿಕಾದ ಟೆಕ್ಸಾಸ್ ವಿಶ್ವವಿದ್ಯಾನಿಲಯದ ವೈದ್ಯಕೀಯ ವಿಭಾಗದ ನಡೆಸಿರುವ ಸಂಶೋಧಾ ವರದಿಗಳ ಪ್ರಕಾರ ಫೈಸರ್ ಲಸಿಕೆ ರೂಪಾಂತರ ವೈರಸ್ ವಿರುದ್ಧವೂ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲಿದೆ ಎಂಬುದನ್ನು ದೃಢಪಡಿಸಿದೆ.
ಸುಮಾರು ೨೦ ಸೋಂಕಿತ ವ್ಯಕ್ತಿಗಳ ರಕ್ತ ಮಾದರಿಗಳನ್ನು ಸಂಗ್ರಹಿಸಿ ಅವರ ಮೇಲೆ ನಡೆಸಿದ ಪ್ರಯೋಗಗಳ ಆಧಾರದ ಮೇಲೆ ಈ ತೀರ್ಮಾನಕ್ಕೆ ಬರಲಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ.