ಫೈಜರ್ ಲಸಿಕೆ ಪರಾಮರ್ಶೆಗೆ ಯುರೋಪ್ ನಿರ್ಧಾರ

ಅಮಸ್ಟರ್‌ಡ್ಯಾಮ್, ಡಿ ೨೧- ಅಮೆರಿಕದ ಫೈಜರ್ ಕಂಪನಿ ಮತ್ತು ಜರ್ಮನಿ ಪಾಲುದಾರಿಕೆಯ ಬಯೊನ್ ಟೆಕ್ ಜಂಟಿಯಾಗಿ ಅಭಿವೃದ್ಧಿಪಡಿಸುವ ಲಸಿಕೆಯನ್ನು ಯುರೊಪ್ ಔಷಧಿಗಳ ಪ್ರಾಧಿಕಾರ ಪರಾಮರ್ಶೆ ನಡೆಸಲು ಮುಂದಾಗಿದೆ.
ಬ್ರಿಟನ್ ಮತ್ತು ಅಮೆರಿಕದಲ್ಲಿ ಲಸಿಕೆ ವಿತರಣೆ ಆರಂಭವಾಗಿದ್ದು, ಡಿ.೨೭ರಿಂದ ಜರ್ಮನಿ, ಆಸ್ಟ್ರೇಲಿಯಾ, ಇಟಲಿ ಸೇರಿದಂತೆ ಯುರೋಪ್ ದೇಶಗಳು ಡಿ.೨೭ರಿಂದ ಲಸಿಕೆ ವಿತರಣೆ ಪ್ರಕ್ರಿಯೆಗೆ ಚಾಲನೆ ನೀಡಲು ಮುಂದಾಗಿವೆ. ಅದಕ್ಕೆ ಮುಂಚಿತವಾಗಿ ಲಸಿಕೆ ಪರಾಮರ್ಶೆ ನಡೆಸಲು ತೀರ್ಮಾನಿಸಿದೆ.
ಒಂದು ವೇಳೆ ಯುರೋಪ್ ಔಷಧಿಗಳ ಸಂಸ್ಥೆ ಈ ಲಸಿಕೆಗಳಿಗೆ ಅಂತಿಮ ಮುದ್ರೆ ಒತ್ತಿದರೆ ಯುರೋಪಿಯನ್ ಆಯೋಗ ಮುಂದಿನ ಕ್ರಮ ಕೈಗೊಳ್ಳುವ ನಿರೀಕ್ಷೆಯಿದೆ.
ಕ್ರಿಸ್‌ಮಸ್ ಹಬ್ಬದ ನಂತರ ಈ ಲಸಿಕೆಗಳನ್ನು ವಿತರಿಸಲು ಯುರೋಪಿಯನ್ ಆಯೋಗದ ನೇತೃತ್ವ ವಹಿಸಿರುವ ಉರ್ಸುಲಾ ವಾನ್ ಡರ್ ಲಿಯೇನ್ ಡಿ.೨೬-೨೭ರಿಂದ ಲಸಿಕೆ ವಿತರಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಡಿ೨೭ರ ವೇಳೆಗೆ ೪೫೦ ದಶಲ್ಷಕ ಜನರಿಗೆ ಲಸಿಕೆ ವಿತರಿಸುವ ಮೂಲಕ ಶೇ. ೭೦ರಷ್ಟು ಗುರಿ ಸಾಧಿಸಲು ಯುರೋಪ್ ರಾಷ್ಟ್ರಗಳು ತೀರ್ಮಾನಿಸಿವೆ.