ಫೇಸ್ ಮಾಸ್ಕ್ ಹಾಕದವರಿಂದ 1,38,800 ರೂ. ದಂಡ ವಸೂಲಿ

ಬೀದರ:ಜೂ.11: ರಾಜ್ಯಾದ್ಯಂತ ಕೋವಿಡ್-19 ಸೋಂಕು ವ್ಯಾಪಕರೀತಿಯಲ್ಲಿ ಹರಡುತ್ತಿದ್ದು, ಸದರಿ ಸಾಂಕ್ರಾಮಿಕರೋಗವನ್ನುತಡೆಯಲುರಾಜ್ಯ ಸರ್ಕಾರ ಮೇ.10 ರಿಂದ ಜೂನ.14ರ ವರೆಗೆ ಲಾಕಡೌನ್ (ನಿಷೇಧ) ವನ್ನು ಆದೇಶಿಸಿರುತ್ತಾರೆ.

ಕೊರೊನಾ ವೈರಸ್ ಸೋಂಕು ಇತರರಿಗೆ ಹರಡದಂತೆ ತಡೆಯಲು ಕರ್ನಾಟಕ ಎಪಿಡೇಮಿಕ್ ಡೀಸಿಸ್ ಆಕ್ಟ್-2020 ಆದೇಶವನ್ನು ಉಲ್ಲಂಘಿಸಿದವರ ವಿರುದ್ಧ ಜಿಲ್ಲೆಯಲ್ಲಿ 01 ಪ್ರಕರಣ ಹಾಗೂ ಫೇಸ್ ಮಾಸ್ಕ್ ಹಾಕದವರಿಗೆ ಒಟ್ಟು 1388 ಪ್ರಕರಣಗಳು ಹಾಕಿ 1,38,800 ರೂ. ದಂಡ ವಿಧಿಸಲಾಗಿದೆ. ಸಾರ್ವಜನಿಕರು ಮನೆಯಲ್ಲಿಯೇ ಇರತಕ್ಕದ್ದು ಅತ್ಯವಶ್ಯಕ ಸಂದರ್ಭದಲ್ಲಿ ಮಾತ್ರ ಮನೆಯಿಂದ ಹೊರಗೆ ಬರತಕ್ಕದ್ದು ಅಂತಾ ಆದೇಶವಿದ್ದರು ಸಹ ಜಿಲ್ಲೆಯಲ್ಲಿ ಅನಾವಶ್ಯಕವಾಗಿ ಸಂಚರಿಸಿದವರ 137 ವಾಹನಗಳನ್ನು ಜಪ್ತಿ ಮಾಡಿ ಕಾನೂನು ಪ್ರಕ್ರಿಯೆ ಕೈಕೊಳ್ಳಲಾಗಿದೆ. ಇನ್ನೂ ಮುಂದೆ ಸಾರ್ವಜನಿಕರು ಲಾಕ್‍ಡೌನ್ ಆದೇಶವನ್ನು ಉಲ್ಲಂಘಿಸಿದರೆ ಅವರ ವಿರುದ್ಧ ಕಠಿಣ ಕಾನೂನು ಕ್ರಮಜರುಗಿಸಲಾಗುವದು ಎಂದು ಪೊಲೀಸ್ ವರಿಷ್ಠಾಧಿಕಾರಿಗಳಿಂದ ನಾಗೇಶ ಡಿ.ಎಲ್. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.