ಫೇಸ್ ಬುಕ್ ಗೆಳತಿಯ ಮಾತಿಗೆ ಮರುಳಾಗಿ ೩೫ ಲಕ್ಷ ಕಳಕೊಂಡ

ಬೆಂಗಳೂರು,ಜೂ.೨೩- ಫೇಸ್‌ಬುಕ್‌ನಲ್ಲಿ ಅಂದದ ಅಪರಿಚಿತ ಯುವತಿಯರ ಜೊತೆ ಸ್ನೇಹ ಬೆಳೆಸಿ ಬರೋಬ್ಬರಿ ೩೫ ಲಕ್ಷ ಕಳೆದುಕೊಂಡು ಪೊಲೀಸರ ಮೊರೆ ಹೋಗಿದ್ದಾರೆ.
ಖಾಸಗಿ ಫೈನಾನ್ಸ್ ಯೂನಿಟ್‌ನಲ್ಲಿ ಮ್ಯಾನೇಜರ್ ಆಗಿರುವ ನಗರದ ೪೮ ವರ್ಷದ ವ್ಯಕ್ತಿಯೊಬ್ಬರಿಗೆ ಫೇಸ್‌ಬುಕ್ ಮೂಲಕ ಪರಿಚಯವಾದ ನ್ಯಾನ್ಸಿ ವಿಲಿಯಂ ಎಂಬ ವಿದೇಶಿ ಮಹಿಳೆ, ೩೫ ಲಕ್ಷ ಪಡೆದು ವಂಚನೆ ಮಾಡಿದ್ದಾಳೆ.
ಮೊದಲಿಗೆ ಫ್ರೆಂಡ್ ರಿಕ್ವೆಸ್ಟ್ ಕಳಿಸಿದ್ದ ನ್ಯಾನ್ಸಿ ವಿಲಿಯಂ ನಂತರ ತಾನು ಇಂಗ್ಲೆಂಡಿನವಳು ಎಂದು ಪರಿಚಯ ಮಾಡಿಕೊಂಡು ಸ್ನೇಹ ಬೆಳೆಸಿದ್ದಾಳೆ.
ಪರಸ್ಪರ ಇಬ್ಬರೂ ಫೋನ್ ನಂಬರ್ ಎಕ್ಸ್‌ಚೇಂಜ್ ಮಾಡಿಕೊಂಡು ನಂತರ ವಾಟ್ಸ್ ಆಪ್‌ನಲ್ಲಿ ಚಾಟಿಂಗ್, ಕಾಲ್ ಮಾಡಿದ್ದಾರೆ. ಹೀಗೆ ಬೆಳೆದ ಸ್ನೇಹ ಮತ್ತಷ್ಟು ಗಾಢವಾಗಿ ಇಬ್ಬರು ಒಟ್ಟಿಗೆ ಸೇರಿ ಬ್ಯುಸಿನೆಸ್ ಆರಂಭಿಸೋಣ, ಇಂಗ್ಲೆಂಡ್‌ನಿಂದ ಭಾರತಕ್ಕೆ ಬಂದು ಜ್ಯುವೆಲ್ಲರಿ ಬ್ಯುಸಿನೆಸ್‌ನಲ್ಲಿ ತೊಡಗುತ್ತೇನೆ ಅಂತಾ ನ್ಯಾನ್ಸಿ ನಂಬಿಸಿದ್ದಾಳೆ. ಅದಕ್ಕಾಗಿ ಹಣ ಹೂಡಿಕೆ ಮಾಡುವಂತೆ ಕೇಳಿದ್ದಾಳೆ.
ನ್ಯಾನ್ಸಿ ಮಾತಿಗೆ ಮರುಳಾದ ವ್ಯಕ್ತಿಯು, ಹಂತ ಹಂತವಾಗಿ ೩೫ ಲಕ್ಷ ಕೊಟ್ಟು ಕೈ ಸುಟ್ಟುಕೊಂಡಿದ್ದಾರೆ. ಅತ್ತ ಹಣ ಅಕೌಂಟ್‌ಗೆ ತಲುಪುತ್ತಿದ್ದಂತೆ ಫೇಸ್‌ಬುಕ್ ಖಾತೆ ಡಿಲೀಟ್ ಮಾಡಿರುವ ನ್ಯಾನ್ಸಿ ವಿಲಿಯಂ, ನಾಪತ್ತೆಯಾಗಿದ್ದಾಳೆ.
ಫೇಸ್‌ಬುಕ್ ಗೆಳತಿಯ ಬಣ್ಣದ ಮಾತಿಗೆ ಮರುಳಾಗಿ ವಂಚನೆಗೆ ಒಳಗಾಗಿ, ಆಕೆಯ ವಿರುದ್ಧ ಪೂರ್ವ ವಿಭಾಗದ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ ಎಂದು ಪೂರ್ವ ವಿಭಾಗದ ಡಿಸಿಪಿ ಭೀಮಾಶಂಕರ ಗುಳೇದ್ ತಿಳಿಸಿದ್ದಾರೆ.