ಫೆ,28 ರಂದು ಶಿಕ್ಷಕ ಸಂಘದ ಶತಮಾನೋತ್ಸವ ,ಸೋಸೈಟಿ ಉದ್ಘಾಟನೆ

ಇಂಡಿ:ಫೆ.21: ಸಿಂದಗಿ ರಸ್ತೆಯ ಶ್ರೀಮಲ್ಲಿಕಾರ್ಜುನ ದೇವಸ್ಥಾನದ ಹತ್ತಿರ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಹಕಾರಿ ಸಂಘದ
ಶತಮಾನೋತ್ಸವ ಹಾಗೂ ಶಿಕ್ಷಕ ಸಂಘದ ಸೋಸೈಟಿ ಕಟ್ಟಡ ಉದ್ಘಾಟನೆ ಫೆ,28 ರಂದು ಲೋಕಾರ್ಪಣೆಗೊಳ್ಳಲ್ಲಿದ್ದು ಇಡೀ ರಾಜ್ಯದಲ್ಲಿಯೇ ಕ.ರಾ.ಪ್ರಾ.ಶಾ ಶಿಕ್ಷಕರ ಕಟ್ಟಡ ಇರುವುದಿಲ್ಲ. ಪಟ್ಟಣದಲ್ಲಿ ಅತ್ಯೆಂತ ಸುಂದರ ಸುಸಜ್ಜಿತ ತಲೆ ಎತ್ತಿ ನಿಂತಿರುವುದು ಸಂತಸ ತಂದಿದೆ ಎಂದು ವಿಜಯಪೂರ ಸಹಕಾರಿ ಬ್ಯಾಂಕಿನ ಜಿ.ಓ.ಸಿ.ಸಿ ಬ್ಯಾಂಕಿನ ಉಪಾಧ್ಯಕ್ಷ ಅಲ್ಲಾಭಕ್ಷ ವಾಲೀಕಾರ ಹೇಳಿದರು.
ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು 1951-52ರಲ್ಲಿ ಈ ಸಂಘ ರಜಿಸ್ಟರ್ ಮಾಡಲಾಗಿದ್ದು ನಡೇದಾಡುವ ದೇವರಾದ ಶ್ರೀಸಿದ್ದೇಶ್ವರ ಮಹಾಸ್ವಾಮಿಜೀಗಳು ಅಡಿಗಲ್ಲು ಹಾಕಿದ್ದಾರೆ ಅವರ ಪಾದಸ್ಪರ್ಶದಿಂದ ಇಂದು ಸಂಘ ಇಷ್ಟೋಂದು ಹೆಮ್ಮರವಾಗಿ ಬೆಳೆದಿದೆ. ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ಶಿಕ್ಷಕರ ಹಾಗೂ ಶಿಕ್ಷಣಕ್ಕೆ ಸಂಬಂದಿಸಿದ ಅನೇಕ ವಿಷಯಗಳು ಸರಕಾರದ ಜೊತೆ ಸೌಹಾರ್ದತ್ತ್ ಬಗೆಹರಿಸುವ ಮೂಲಕ ಶೈಕ್ಷಣಿಕ ಪ್ರಗತಿಗೆ ಸಹಕಾರಿಯಾಗಿ ನಮ್ಮ ಸಂಘ ಕೆಲಸ ಮಾಡಿದೆ.
ಈ ಕಾರ್ಯಕ್ರಮಕ್ಕೆ ಕಾತ್ರಾಳ ಬಾಲಗಾಂವ್ ಅಮೃತಾನಂದ ಮಹಾಸ್ವಾಮಿಗಳು ದಿವ್ಯಸಾನಿಧ್ಯ
ವಹಿಸಲ್ಲಿದ್ದಾರೆ. , ನೈತೃತ್ವ ಶಾಸಕ,ಅಂದಾಜು ಸಮಿತಿ ಅಧ್ಯಕ್ಷ ಯಶವಂತರಾಯಗೌಡ ಪಾಟೀಲ . ಪ್ರಾಥಮಿಕ ,ಪ್ರೌಢ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ,ಸಹಕಾರಿ ಸಚಿವ ರಾಜಣ್ಣಾ. ಸಚಿವರಾದ ಎಂ ಬಿ.ಪಾಟೀಲ,ಶಿವಾನಂದ ಪಾಟೀಲ , ಸೇರಿದಂತೆ ಚಂದ್ರಶೇಖರ ನೂಗ್ಲಿ ಇನ್ನು ಅನೇಕ ಗಣ್ಯರ ಸಮ್ಮುಖದಲ್ಲಿ ಕಟ್ಟಡ ಉದ್ಘಾಟನೆಯಾಗಲಿದೆ. ಆದ್ದರಿಂದ ಶಿಕ್ಷಕ ಬಂಧುಗಳು ,ಗುರುಮಾತೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವೀಗೋಳಿಸಬೇಕು ಎಂದು ಮನವಿ ಮಾಡಿದ್ದಾರೆ.

ನಿಕಟಪೂರ್ವ ಕಸಾಪ ಅಧ್ಯಕ್ಷ ಡಾ.ಕಾಂತು ಇಂಡಿ ಮಾತನಾಡಿ ಸಹಕಾರಿ ಸಂಘ ತನ್ನದೇಯಾದ ಇತಿಹಾಸ ಹೊಂದಿದೆ.ಶಿಕ್ಷಕ ಸಂಘದ ಸೋಸೈಟಿ ಕಟ್ಟಡದ ಸಲುವಾಗಿ ಸ್ಥಳೀಯ ಶಾಸಕರಾದ ಯಶವಂತರಾಯಗೌಡ ಪಾಟೀಲ 10ಲಕ್ಷ ಅನುಧಾನ ನೀಡಿದ್ದು. ವಿಧಾನ ಪರಿಷತ್ತ್ ಸದಸ್ಯರಾದ ಎಸ್.ಆರ್ ಪಾಟೀಲ ಕಟ್ಟಡಕ್ಕೆ 3 ಲಕ್ಷ ರೂ, ವಿಧಾನ ಪರಿಷ್ಯತ್ತ್ ಸದಸ್ಯರಾದ ಹಣಮಂತ ನಿರಾಣಿ 2ಲಕ್ಷ ರೂ, ಅರುಣ ಶಹಾಪೂರ 2 ಲಕ್ಷ ರೂ ಮತ್ತು ಎಲ್ಲಾ ಶಿಕ್ಷಕ ಬಂಧುಗಳ ಸಹಾಯ ಸಹಕಾರದಿಂದ ಇಂದು ಕಟ್ಟಡ ನಿರ್ಮಾಣವಾಗಿದೆ ಇವರೇಲ್ಲರಿಗೂ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದ ಅವರು ಇಷ್ಠೇಲ್ಲಾ ಬೆಳವಣಿಗೆಗೆ ಪೂರ್ವಜನರ ಸಹಕಾರ ಕೇವಲ 10 ರೂ ಷೇರು ಸಂಗ್ರಹಿಸಿ ಸಂಘ ಕಟ್ಟಿದ್ದಾರೆ ಇಂದು 8 ಕೋಟಿ 37 ಲಕ್ಷ ಬಂಡವಾಳದಲ್ಲಿದೆ. ಫೆ, 28 ರಂದು ಸಾಧನಾ ಪಥ್ ಎಂಬ ಹೊತ್ತಿಗೆ ಬಿಡುಗಡೆ ಮಾಡಲಾಗುವುದು ಒಟ್ಟಾರೆ ಈ ಶಿಕ್ಷಕರ ಸಹಕಾರಿ ಸಂಘ ಶಿಕ್ಷಕರು ಕಷ್ಟದ ಸಂಧರ್ಬದಲ್ಲಿ ಸಹಾಯ ನೀಡುವ ಒಂದು ಸಂಸ್ಥೆ ಎಂದರು.

ನಿರ್ದೇಶಕ ಪಿ.ಎ ಏಲಗಾರ ಮಾತನಾಡಿ ಸ.ಶಿ.ಸಂಘದ ಉದ್ದೇಶ ನೌಕರರ ಸಮಸ್ಯಗಳನ್ನು ಹಣಕಾಸಿನ ಸಮಸ್ಯಗಳಿಗೆ ಸಹಕಾರಿ ಸಂಘ ಬೆನ್ನೇಲಬು ಎಂದರೆ ತಪ್ಪಾಗುವುದಿಲ್ಲ. 1,ನೂರು ವರ್ಷದ ಶತಮಾನೋತ್ಸವ ಆಚರಣೆ ಯಲ್ಲಿ ನಮ್ಮ ಊರ್ವಜರ ,ಹಿರಿಯರನ್ನು ಗೌರವಿಸಿ ಅವರನ್ನು ಸ್ಮರಿಸುವ ಅರ್ಥಪೂರ್ಣ ಕಾರ್ಯ ವೇದಿಕೆಯ ಮೂಲಕ ನಡೆಯುತ್ತದೆ. ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಯಾವ ರೀತಿ ವ್ಯಹಾರ ನಡೆಯುತ್ತದೆ ನಮ್ಮ ಸಹಕಾರಿ ಬ್ಯಾಂಕಿನಲ್ಲಿ ನಡೆಯುತ್ತದೆ. ಅನೇಕರು 2 ಕೋಟಿ ಹಣ ಠೇವಣಿಯಾಗಿ ಇಟ್ಟಿದ್ದಾರೆ ವಿಶ್ವಾಸರ್ಹತೆ ನಂಬಿಕೆ ಮುಖ್ಯ ಸಹಕಾರಂ ಗೆಲ್ಗೇ ಇದು ನಮ್ಮ ಸಹಕಾರಿಯ ತತ್ವ ಎಂದರು.
ಪ್ರಾ.ಶಾ.ಶಿಕ್ಷಕ ಸಹಕಾರಿ ಪತ್ತಿನ ಸಂಘದ ಅಧ್ಯಕ್ಷ ಪರಮಾನಂದ ಚಾಂದಕವಠೆ,ಕೆ.ಎಸ್.ಪಿ.ಎಸ್.ಟಿ.ಎ ಅಧ್ಯಕ್ಷ ಎಸ್.ವ್ಹಿ ಹರಳಯ್ಯಾ, ಎಂ.ಎಂ ನೇದಲಗಿ, ವಾಯ್.ಟಿ ಪಾಟೀಲ, ಶಾರದಾ ಗಿರಣಿ, ಡಿ.ಜಿ ರಾಠೊಡ, ಜೆ.ಎ ಚವುಡಿಹಾಳ, ಬಂಗಾರೇಪ್ಪ ಜಮಾದಾರ, ಎ.ಎಂ ಶೇಖ, ಶ್ರೀದೇವಿ ಮುಗಳಿ, ಜಯರಾಮ ಚವ್ಹಾಣ, ಸಿ.ಎಸ್ ಝಳಕಿ, ಆನಂದ ಕೆಂಬಾಗಿ, ಅನೀತಾ ರಾಠೋಡ, ವಿಜಯಲಕ್ಷ್ಮೀ ಡಿಸ್ಲೇ, ಜಯಶ್ರೀ ತೇಲಗ, ಸುರೇಶ ಚವ್ಹಾಣ, ಕೆ.ಎಸ್ ಕಾಂಬಳೆ, ಜೆಟ್ಟೆಪ್ಪ ಮಾದರ, ಕೆ.ಎಂ ಇಂಡಿ, ಸಿ.ಆರ್ ಮ್ಯಾಗೇರಿ ಸೇರಿದಂತೆ ಅನೇಕ ಶಿಕ್ಷಕ ಸಂಘದ ಪದಾಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿದ್ದರು.