ಫೆ.4ರಂದು ಕೌದಿ ಏಕವ್ಯಕ್ತಿ ನಾಟಕ ಪ್ರದರ್ಶನ

ಕಲಬುರಗಿ,ಫೆ.2: ಮೈಸೂರಿನ ಕವಿತಾ ಪ್ರಕಾಶನ ಕಲಬುರಗಿ ರಂಗಾಯಣ ಸಹಯೋಗದಲ್ಲಿ ಗಣೇಶ ಅಮೀನಗಡ ಅವರ ಕೌದಿ ನಾಟಕ ಪ್ರದರ್ಶನ ಫೆ. 4ರಂದು ಸಂಜೆ 6.30ಕ್ಕೆ ಕಲಬುರಗಿ ರಂಗಾಯಣದಲ್ಲಿ ಜರುಗಲಿದೆ ಎಂದು ನಾಟಕಕಾರ ಗಣೇಶ ಅಮೀನಗಡ ತಿಳಿಸಿದರು.ಭಾಗ್ಯಶ್ರೀ ಪಾಳಾ ಅಭಿನಯದ ಏಕವ್ಯಕ್ತಿ ಪ್ರಯೋಗ ಇದಾಗಿದ್ದು, ಜಗದೀಶ ಆರ್. ಪಾಣಿ ನಿರ್ದೇಶನದ ಸಿದ್ಧಾರ್ಥ ಕಟ್ಟಿಮನಿ ರಂಗ ಸಜ್ಜಿಕೆಯ ಈ ನಾಟಕಕ್ಕೆ ಕೃಷ್ಣ ಬಡಿಗೇರ ಸಂಗೀತ ನೀಡಲಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ಚಿಂತಕಿ ಡಾ. ಮೀನಾಕ್ಷಿ ಬಾಳಿ ಉದ್ಘಾಟಿಸಲಿದ್ದು, ರಂಗಕರ್ಮಿ ಸಂದೀಪ ಬಿ., ಕವಯತ್ರಿ ರೇಣುಕಾ ಹೆಳವರ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಹೇಳಿದರು.ಕಲಬುರಗಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಆಡಳಿತಾಧಿಕಾರಿ ಜಗದೀಶ್ವರಿ ನಾಸಿ, ಭಾಗ್ಯ ಶ್ರೀ, ಜಗದೀಶ ಇತರರಿದ್ದರು.