ಫೆ. 26ರಂದು ಮಹಾನಗರ ಪಾಲಿಕೆಯ ಮುಂಗಡಪತ್ರ ತಯಾರಿಕೆಯ ಪೂರ್ವಭಾವಿ ಸಭೆ

ಕಲಬುರಗಿ:ಫೆ.23:ಕಲಬುರಗಿ ಮಹಾನಗರ ಪಾಲಿಕೆಯ 2024-25ನೇ ಸಾಲಿನ ಮುಂಗಡಪತ್ರವನ್ನು ತಯಾರಿಕೆಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಸಲಹೆ ಸೂಚನೆ ಪಡೆಯಲು ಫೆಬ್ರವರಿ 26 ರಂದು ಸೋಮವಾರ…ಮಧ್ಯಾಹ್ನ 3.30ಕ್ಕೆ ಕಲಬುರಗಿ ಇಂದಿರಾ ಸ್ಮಾರಕ ಭವನ (ಟೌನ್‍ಹಾಲ್) ದಲ್ಲಿ ಪೂರ್ವಭಾವಿ ಸಭೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಲಬುರಗಿ ಮಹಾನಗರ ಪಾಲಿಕೆಯ ಆಯುಕ್ತರು ತಿಳಿಸಿದ್ದಾರೆ.

 ನೋಂದಾಯಿತ ಸ್ಥಳೀಯ ಕಲ್ಯಾಣ ಸಂಘ, ವ್ಯಾಪಾರ, ಉದ್ಯಮಿ ನಡೆಸುವ ಸಂಘ-ಸಂಸ್ಥೆಗಳು, ಎನ್.ಜಿ.ಓ. ಸಂಘಗಳು, ಇತರೆ ಪ್ರಮುಖ ನಾಗರಿಕರು ಹಾಗೂ ಸಾರ್ವಜನಿಕರು ಮೇಲ್ಕಂಡ ದಿನದಂದು ನಡೆಯುವ ಈ ಪೂರ್ವಭಾವಿ ಈ ಸಭೆಗೆ  ಹಾಜರಾಗಿ ತಮ್ಮ ಸಲಹೆ ಸೂಚನೆ ನೀಡಬಹುದಾಗಿದೆ ಅವರು ತಿಳಿಸಿದ್ದಾರೆ.