ಫೆ. 26ರಂದು ಬಸವಾಮೃತ ಪ್ರಶಸ್ತಿ ಪ್ರದಾನ

ಕಲಬುರಗಿ.ಫೆ.23:ನಗರದ ಅನ್ನಪೂರ್ಣ ಕ್ರಾಸ್ ಹತ್ತಿರ ಇರುವ ಕಲಾ ಮಂಡಳದಲ್ಲಿ ಫೆಬ್ರವರಿ 26ರಂದು ಬೆಳಿಗ್ಗೆ 10-45ಕ್ಕೆ ಬಸವಾಮೃತ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಸ್ನೇಹ ಸಂಗಮ ವಿವಿದೋದ್ದೇಶ ಸೇವಾ ಸಂಘದ ಅಧ್ಯಕ್ಷ ಹಾಗೂ ನ್ಯಾಯವಾದಿ ಹಣಮಂತರಾಯ್ ಅಟ್ಟೂರ್ ಅವರು ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಿ. ಅಮೃತೇಶ್ ಮಾಸ್ತರ್ ಅವರ ಸವಿನೆನಪಿಗಾಗಿ ಬಸವಾಮೃತ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದರು.
ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಡಾ. ಶರಣಪ್ಪ ಹಲಸೆ, ಹೃದ್ರೋಗ ತಜ್ಞ ಡಾ. ವೀರೇಶ್ ಪಾಟೀಲ್ ಹೆಬ್ಬಾಳ್, ಜಿಲ್ಲಾ ಪಂಚಾಯಿತಿ ಸದಸ್ಯ ಶರಣಗೌಡ ಪಾಟೀಲ್, ಲಕ್ಷ್ಮಣ್ ಹೇರೂರ್, ವಿಠಲ್ ನಿಂಬಾಳ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಇದೇ ಸಂದರ್ಭದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವೀರಭದ್ರ ಸಿಂಪಿ, ಸಂಘಟಕ ವಿಜಯಕುಮಾರ್ ತೇಗಲತಿಪ್ಪಿ, ಉಪನ್ಯಾಸಕ ಬಿ.ಎಚ್. ನಿರಗುಡಿ, ಹೋರಾಟಗಾರ ಪ್ರಭುದೇವ್ ಯಳಸಂಗಿ, ಸಂಜೀವಕುಮಾರ್ ಅವರನ್ನು ವಿಶೇಷವಾಗಿ ಸನ್ಮಾನಿಸಲಾಗುವುದು ಎಂದು ಅವರು ಹೇಳಿದರು.
ಸಮಾರಂಭವನ್ನು ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ದಯಾನಂದ್ ಅಗಸರ್ ಅವರು ಉದ್ಘಾಟಿಸುವರು. ಸಾನಿಧ್ಯವನ್ನು ಶ್ರೀನಿವಾಸ್ ಸರಡಗಿಯ ರೇವಣಸಿದ್ಧ ಶಿವಾಚಾರ್ಯರು, ಅಧ್ಯಕ್ಷತೆಯನ್ನು ಹಿರಿಯ ಸಾಹಿತಿ ಡಾ. ಸ್ವಾಮಿರಾವ್ ಕುಲಕರ್ಣಿ ವಹಿಸುವರು. ಪ್ರಶಸ್ತಿಯನ್ನು ಕೆಎಸ್‍ಆರ್‍ಪಿ ಕಮಾಂಡೆಂಟ್ ಬಸವರಾಜ್ ಜಿಳ್ಳೆ ಅವರು ಪ್ರದಾನ ಮಾಡುವರು. ಮುಖ್ಯ ಅತಿಥಿಗಳಾಗಿ ಅರುಣಕುಮಾರ್ ಕಿಣ್ಣಿ, ಶರಣಗೌಡ ಪಾಟೀಲ್, ಅಮರಪ್ರಿಯ ಹಿರೇಮಠ್ ಅವರು ಆಗಮಿಸುವರು ಎಂದು ಅವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಸಂಘದ ಸಹ ಕಾರ್ಯದರ್ಶಿ ಮಲಕಾಜಿ ಪೂಜಾರಿ, ಶ್ರವಣಕುಮಾರ್ ಮಠ್, ರಘುನಂದನ್ ಕುಲಕರ್ಣಿ, ದೇವಿಂದ್ರ ಎಕಲೂರ್ ಮುಂತಾದವರು ಉಪಸ್ಥಿತರಿದ್ದರು.