ಫೆ. 25ರಂದು ಏಕಂಬಾದಲ್ಲಿ ಶಿವಾಜಿ ಜಯಂತಿಸಂಭಾಜಿ ಬ್ರಿಗೇಡ್‍ನಿಂದ ಪತ್ರಕರ್ತರಿಗೆ ಸತ್ಕಾರ

ಸಂಜೆವಾಣಿ ವಾರ್ತೆ
ಔರಾದ್ :ಫೆ.23: ಪಟ್ಟಣದ ಕುಮಾರ ಪ್ಯಾಲೇಸ್‍ನಲ್ಲಿ ಗುರುವಾರ ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯೋತ್ಸವ ನಿಮಿತ್ತ ಸಂಭಾಜಿ ಬ್ರಿಗೇಡ್‍ನಿಂದ ಪತ್ರಕರ್ತರಿಗೆ ಸತ್ಕರಿಸಲಾಯಿತು.
ಈ ವೇಳೆ ಮಾತನಾಡಿದ ಸಂಬಾಜಿ ಬ್ರಿಗೇಡ್ ಜಿಲ್ಲಾಧ್ಯಕ್ಷ ಸತೀಶ ವಾಸರೆ, ಪತ್ರಕರ್ತರು ಕೇವಲ ಸುದ್ದಿಮನೆಗೆ ಮಾತ್ರ ಸೀಮಿತವಾಗಿರದೇ ಸಮಾಜಮುಖಿ ಕೆಲಸಗಳನ್ನು ಮಾಡಿದಾಗ ಮಾತ್ರ ಮಾದರಿ ಸಮಾಜ ನಿರ್ಮಾಣ ಸಾಧ್ಯ ಎಂದರು. ಇದೇ ಫೆ. 25ರಂದು ತಾಲೂಕಿನ ಏಕಂಬಾ ಗ್ರಾಮದಲ್ಲಿ ಸಂಭಾಜಿ ಬ್ರಿಗೇಡ್‍ನಿಂದ ಅದ್ಧೂರಿಯಾಗಿ ಜಯಂತೋತ್ಸವ ಮಾಡಲಾಗುತ್ತಿದೆ ಎಂದರು. ಶಿವಾಜಿ ಮಹಾರಾಜರ ಶೌರ್ಯ ಪರಾಕ್ರಮ ಯುವಪೀಳಿಗೆಗೆ ಆದರ್ಶವಾಗಿದೆ ಎಂದರು.
ಪತ್ರಕರ್ತ ಸಂಘದ ತಾಲೂಕು ಅಧ್ಯಕ್ಷ ಶಿವಾನಂದ ಮೊಕ್ತೆದಾರ್ ಮಾತನಾಡಿ, ಶಿವಾಜಿ ಮಹಾರಾಜರ ಶೌರ್ಯ, ಸಾಹಸ ರಾಷ್ಟ್ರಭಕ್ತಿ ಆಡಳಿತ ಎಂದೆಂದಿಗೂ ಪ್ರೇರಣಾದಾಯಕ. ಛತ್ರಪತಿ ಶಿವಾಜಿ ಮಹಾರಾಜರ ಬಗ್ಗೆ ಯುವ ಪೀಳಿಗೆಗೆ ತಿಳಿಸುವಂತಹ ಕೆಲಸ ಆಗಬೇಕು ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ನರಸಿಂಗ್ ಬಿರಾದಾರ್, ಗೋವಿಂದ ಪಾಟೀಲ್, ಪ್ರಶಾಂತ ಬಿರಾದಾರ್, ರಾಮ ರಾವಣಗಾಂವೆ, ದತ್ತಾ ಪಾಟೀಲ್ ಆಲೂರ, ಅಂಕುಶ ಪಾಟೀಲ್ ಅಕನಾಪೂರ, ದಯಾನಂದ ಬಿರಾದಾರ್, ನವನಾಥ ಪಾಟೀಲ್, ಶಿವಾಜಿ ಶೇರಿಕಾರ, ದತ್ತ ಚೋಪಡೆ, ಸಂಭಾಜಿ ಬಿರಾದಾರ್ ಸೇರಿದಂತೆ ಅನೇಕರಿದ್ದರು. ಅಮರ ಜಾಧವ ನಿರೂಪಿಸಿದರು.

ಫೆ. 25 ಶಿವಾಜಿ ಜಯಂತಿ ಆಚರಣೆ :

ಇದೇ ಫೆ. 25ರಂದು ಭಾನುವಾರ ತಾಲೂಕಿನ ಏಕಂಬಾ ಗ್ರಾಮದಲ್ಲಿ ಛತ್ರಪತಿ ಶಿವಾಜಿ ಜಯಂತಿ ಅದ್ಧೂರಿಯಾಗಿ ಆಚರಣೆ ಮಾಡಲಾಗುತ್ತಿದೆ ಎಂದು ಸಂಬಾಜಿ ಬ್ರಿಗೇಡ್ ಜಿಲ್ಲಾಧ್ಯಕ್ಷ ಸತೀಶ ವಾಸರೆ ಹೇಳಿದರು. ಭಾಜಾಪ ಯುವ ಮುಖಂಡ ನಂದುಕುಮಾರ ಸಾಳುಕೆ ಉದ್ಘಾಟಿಸಲಿದ್ದಾರೆ. ಎಂಜಿನಿಯರ್ ತುಷಾರ್ ಉಮಾಳೆ ಉಪನ್ಯಾಸ ನೀಡಲಿದ್ದಾರೆ. ಸಂಭಾಜಿ ಬ್ರಿಗೇಡ್ ರಾಷ್ಟ್ರೀಯ ಅಧ್ಯಕ್ಷ ಮನೋಜ ದಾದಾ ಆಕರೆ, ಏಕತಾ ಫೌಂಡೇಶನ್ ಅಧ್ಯಕ್ಷ ರವಿಂದ್ರ ಸ್ವಾಮಿ, ದೀಪಕ ಪಾಟೀಲ್, ಲೋಕಮುದ್ರಾ ಬ್ಯಾಂಕ್ ಸಂಸ್ಥಾಪಕ ಅಧ್ಯಕ್ಷ ಸುಭಾಷ ಶೇಡೋಳೆ ಸೇರಿದಂತೆ ಸಾವಿರಾರು ಜನ ಭಾಗವಹಿಸಲಿದ್ದಾರೆ.