ಫೆ.24ರಂದು  ಶ್ರೀತೇರುಮಲ್ಲೇಶ್ವರಸ್ವಾಮಿ ಬ್ರಹ್ಮರಥೋತ್ಸವ

ಸಂಜೆವಾಣಿ ವಾರ್ತೆ

ಹಿರಿಯೂರು.ಫೆ.೧೪;ದಕ್ಷಿಣಕಾಶಿಯೆಂದೇ ಪ್ರಸಿದ್ಧವಾಗಿರುವ ಶ್ರೀ ತೇರುಮಲ್ಲೇಶ್ವರಸ್ವಾಮಿಯ ಬ್ರಹ್ಮರಥೋತ್ಸವ ಇದೇ ಫೆಬ್ರವರಿ 24 ರಂದು ಮಧ್ಯಾಹ್ನ 12 ಗಂಟೆಗೆ ಮಘಾ ನಕ್ಷತ್ರದಲ್ಲಿ ನಡೆಯಲಿದೆ ಎಂಬುದಾಗಿ ತಾಲೂಕು ತಹಶೀಲ್ದಾರ್ ರಾಜೇಶ್ ಕುಮಾರ್ ತಿಳಿಸಿದ್ದಾರೆ.ನಗರದ ಶ್ರೀತೇರುಮಲ್ಲೇಶ್ವರಸ್ವಾಮಿ ಜಾತ್ರಾಮಹೋತ್ಸವ ಇದೇ ಫೆಬ್ರವರಿ 13ರಿಂದ ಕಂಕಣ ಕಲ್ಯಾಣೋತ್ಸವದೊಂದಿಗೆ  ಪ್ರಾರಂಭಗೊಂಡು, ಫೆಬ್ರವರಿ 28ರವರೆಗೆ ಬಹಳ ವಿಜೃಂಭಣೆಯಿಂದ  ನಡೆಯಲಿದೆ.ಫೆಬ್ರವರಿ 14 ರಂದು ರಾತ್ರಿ 8ಕ್ಕೆ ಮಂಟಪೋತ್ಸವ, ಫೆಬ್ರವರಿ 15ರಂದು ರಾತ್ರಿ 8ಕ್ಕೆ ಗಿಳಿ ಮಹೋತ್ಸವ ಫೆಬ್ರವರಿ 16ರಂದು ರಾತ್ರಿ 8ಕ್ಕೆ ಗಂಡಬೇರುಂಡ  ಮಹೋತ್ಸವ, ಫೆಬ್ರವರಿ 17ರಂದು ರಾತ್ರಿ 8.00ಕ್ಕೆ ನವಿಲು ಮಹೋತ್ಸವ, ಫೆಬ್ರವರಿ 18ರಂದು ರಾತ್ರಿ 8ಕ್ಕೆ ಸಿಂಹ ಮಹೋತ್ಸವ, ಫೆಬ್ರವರಿ 19ರಂದು ರಾತ್ರಿ 8ಕ್ಕೆ ನಂದಿ ಮಹೋತ್ಸವ ನಡೆಯಲಿದ್ದು,ಫೆಬ್ರವರಿ 20ರಂದು ರಾತ್ರಿ 8ಕ್ಕೆ ಸರ್ಪ ಮಹೋತ್ಸವ , ಫೆಬ್ರವರಿ 21ರಂದು ರಾತ್ರಿ 8ಕ್ಕೆ ಅಶ್ವ ಮಹೋತ್ಸವ, ಫೆಬ್ರವರಿ 22ರಂದು ರಾತ್ರಿ 8ಕ್ಕೆ ಗಜಮಹೋತ್ಸವ(ಮೂರು ಕಳಸ ಸ್ಥಾಪನೆ) ಫೆಬ್ರವರಿ 23ರಂದು ಬೆಳಿಗ್ಗೆಯಿಂದ ರಾತ್ರಿಯವರೆಗೆ ಬಸವ ಮಹೋತ್ಸವ (ದೊಡ್ಡ ಉತ್ಸವ) ಅಕ್ಕಿ ತಂಬಿಟ್ಟಿನ ಆರತಿ ಕಾರ್ಯಕ್ರಮ ನಡೆಯಲಿದೆ.ಹಿರಿಯೂರು ತಾಲ್ಲೂಕು ಐಮಂಗಲ ಹೋಬಳಿ ಬೀರೇನಳ್ಳಿ ಮಜುರೆ ಕರಿಯಣ್ಣ ಹಟ್ಟಿ ಗ್ರಾಮದ ವೀರಕರಿಯಣ್ಣ ದೇವರ ನೇತೃತ್ವದಲ್ಲಿ ಫೆಬ್ರವರಿ 24 ರಂದು ಬೆಳಿಗ್ಗೆ 9ಕ್ಕೆ ಶಿವಧನಸ್ಸಿನ ಗಂಗಾ ಸ್ನಾನದ ಉತ್ಸವ  ನಂತರ ಮಧ್ಯಾಹ್ನ 12ಕ್ಕೆ ಮಘಾ ನಕ್ಷತ್ರದಲ್ಲಿ ತೇರುಮಲ್ಲೇಶ್ವರಸ್ವಾಮಿಯ ಬ್ರಹ್ಮರಥೋತ್ಸವ ನಡೆಯಲಿದ್ದು ,ಮಧ್ಯಾಹ್ನ 1.30ಕ್ಕೆ ಪ್ರಸಾದ ವಿನಿಯೋಗ, ಸಂಜೆ 5ಕ್ಕೆ ಚಂದ್ರಮೌಳೇಶ್ವರ ಮತ್ತು ಉಮಾಮಹೇಶ್ವರ ರಥೋತ್ಸವಗಳು ಸಹ ನಡೆಯಲಿವೆ.ಫೆಬ್ರವರಿ 25 ರಂದು ಸಂಜೆ 5ಕ್ಕೆ ಸಿದ್ದನಾಯಕ ವೃತ್ತದಲ್ಲಿ ಶ್ರೀ ಮದಕರಿ ಯುವಕ ಸಂಘದಿದ ಜಂಗೀ ಕುಸ್ತಿಯನ್ನು ಏರ್ಪಡಿಸಲಾಗಿದೆ. ಫೆಬ್ರವರಿ 26ರಂದು ರಾತ್ರಿ 8ಕ್ಕೆ ಸುಮಂಗಲಿಯರಿಂದ ಕರ್ಪೂರದಾರತಿ , ಫೆಬ್ರವರಿ 27 ರಂದು ರಾತ್ರಿ 8ಕ್ಕೆ ಚಿಟುಗ ಮಲ್ಲೇಶ್ವರಸ್ವಾಮಿ ದೇವಸ್ತಾನದಲ್ಲಿ ಅಭಿಷೇಕ ಹಾಗೂ ಉಯ್ಯಾಲೋತ್ಸವ,  ವಸಂತೋತ್ಸವ ,ಓಕುಳಿ ಪರ್ವಟೋತ್ಸವ ನಡೆಯಲಿದೆ. . ಫೆಬ್ರವರಿ 28ರಂದು ಸಂಜೆ 4ಕ್ಕೆ ಕಂಕಣ ವಿಸರ್ಜನೆಯೊಂದಿಗೆ ಮಹೋತ್ಸವ ಮುಕ್ತಾಯಗೊಳ್ಳಲಿದೆ.ಶ್ರೀತೇರುಮಲ್ಲೇಶ್ವರಸ್ವಾಮಿಯ ಜಾತ್ರಾ ಮಹೋತ್ಸವಕ್ಕೆ ಭಕ್ತಾದಿಗಳು ಹಾಗೂ ಸಾರ್ವಜನಿಕರು ತನು,ಮನ,ಧಾನ್ಯ ರೂಪದಲ್ಲಿ ಸಹಕರಿಸುವುದು, ಸಾರ್ವಜನಿಕರು ಜಾತ್ರಾ ಮಹೋತ್ಸವದ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಶ್ರೀಸ್ವಾಮಿಯ ಕೃಪೆಗೆ ಪಾತ್ರರಾಗಬೇಕು ಎಂಬುದಾಗಿ ತಾಲೂಕು ತಹಶೀಲ್ದಾರ್ ರಾಜೇಶ್ ಕುಮಾರ್ ತಿಳಿಸಿದ್ದಾರೆ.