ಫೆ.24ಕ್ಕೆ ಜೆಎಸ್‍ಎಸ್ ಘಟಿಕೋತ್ಸವ: 1660 ಮಂದಿಗೆ ಪದವಿ ಪ್ರಧಾನ

ಸಂಜೆವಾಣಿ ನ್ಯೂಸ್
ಮೈಸೂರು: ಫೆ.21:- ಜೆಎಸ್‍ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾನಿಲಯದ 6ನೇ ಘಟಿಕೋತ್ಸವ ಫೆ.24ರಂದು ನಡೆಯಲಿದ್ದು, ಪಿಎಚ್‍ಡಿ ಸೇರಿದಂತೆ 1660 ವಿದ್ಯಾರ್ಥಿಗಳಿಗೆ ವಿವಿಧ ಪದವಿ ಪ್ರಧಾನ ಮಾಡಲಾಗುತ್ತಿದೆ ಎಂದು ಕುಲಪತಿ ಪೆÇ್ರ.ಎ.ಎನ್.ಸಂತೋಷ್‍ಕುಮಾರ್ ತಿಳಿಸಿದರು.
ವಿವಿಯ ಸುವರ್ಣ ಮಹೋತ್ಸವ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಸಂಜೆ 4 ಗಂಟೆಗೆ ಸುತ್ತೂರು ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಸಾನಿಧ್ಯದಲ್ಲಿ ಘಟಿಕೋತ್ಸವ ನಡೆಯಲಿದ್ದು, ನವದೆಹಲಿಯ ಎಐಸಿಟಿಇ ಅಧ್ಯಕ್ಷ ಪೆÇ್ರ.ಟಿ.ಜಿ. ಸೀತಾರಾಮ್ ಘಟಿಕೋತ್ಸವ ಭಾಷಣ ಮಾಡುವರು. ಜೆಎಸ್‍ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಬೆಟಸೂರಮಠ ಪ್ರಮಾಣವಚನ ಬೋಧನೆ ಮಾಡುವರು. ಜೆಎಸ್‍ಎಸ್ ಮಹಾವಿದ್ಯಾಪೀಠ ತಾಂತ್ರಿಕ ಶಿಕ್ಷಣ ವಿಭಾಗ ನಿರ್ದೇಶಕ ಡಾ.ಬಿ.ಸುರೇಶ್, ವಿವಿಯ ಕುಲಸಚಿವ ಎಸ್.ಎ.ಧನರಾಜ್ ಹಾಗೂ ಇತರರು ಹಾಜರಿರುವರು ಎಂದು ತಿಳಿಸಿದರು.
1660 ವಿದ್ಯಾರ್ಥಿಗಳಿಗೆ ಪದವಿ: ಯುಜಿ, ಪಿಜಿ, ಪಿಎಚ್‍ಡಿ ಸೇರಿದಂತೆ ಒಟ್ಟು 1660 ಮಂದಿಗೆ ಪದವಿ ಪ್ರಧಾನ ಮಾಡಲಾಗುವುದು. 1060 ಬಿಇ, 47 ಬಿಸಿಎ, 120 ಎಂ.ಟೆಕ್, 117 ಎಂಸಿಎ, 51ಎಂಎಸ್‍ಸಿ, 256 ಎಂಬಿಎ ಮತ್ತು 9 ಪಿಎಚ್‍ಡಿ ವಿದ್ಯಾರ್ಥಿಗಳು ಪದವಿ ಪಡೆಯಲಿದ್ದಾರೆ. ನಾನಾ ವಿಭಾಗಗಳಲ್ಲಿ ಅತೀ ಹೆಚ್ಚು ಅಂಕ ಪಡೆದ 32 ವಿದ್ಯಾರ್ಥಿಗಳು ಸೇರಿದಂತೆ 63 ವಿದ್ಯಾರ್ಥಿಗಳಿಗೆ ಪದಕ, ನೀಡಲಾಗುವುದು. ಇದರಲ್ಲಿ 31 ದತ್ತಿ ಪದಕಗಳು ಸೇರಿವೆ ಎಂದು ಮಾಹಿತಿ ನೀಡಿದರು.
ವಿವಿ ಇತ್ತೀಚೆಗೆ ಕೈಗಾರಿಕೆ ಮತ್ತು ಉದ್ಯಮಚಾಲಿತ ಕೋರ್ಸ್‍ಗಳನ್ನು ಆರಂಭಿಸಿದೆ. ಜತೆಗೆ ವಿವಿಧ ಕಂಪನಿಗಳ ಸಹಯೋಗದಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲಾಗುತ್ತಿದ್ದು, ಸಂಶೋಧನಾ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ವಿವಿಯಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಹಲವು ಕಂಪನಿಗಳಲ್ಲಿ ಉನ್ನತ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ತಿಳಿಸಿದರು.
ಫೆ.22ರಂದು ಯುವಬಿಂಬ ಕಾರ್ಯಕ್ರಮ
ಜೆಎಸ್‍ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾನಿಲಯ ಭಾರತೀಯ ವಿವಿಗಳ ಅಸೋಸಿಯೇಶನ್ ಸಹಯೋಗದಲ್ಲಿ ಫೆ.22ರಿಂದ 26ರವರೆಗೆ ಆಜ್ಞೇಯ ವಲಯ ಯುವ ಬಿಂಬ-2024 ಕಾರ್ಯಕ್ರಮ ಆಯೋಜಿಸಿದೆ.
ಈ ಸಾಂಸ್ಕೃತಿಕ ಹಬ್ಬ ವಿವಿಯ ಆವರಣದಲ್ಲಿ ನಡೆಯಲಿದ್ದು, ನೃತ್ಯ, ಸಂಗೀತ, ವಿವಿಧ ಶೈಕ್ಷಣಿಕ ಕಾರ್ಯಕ್ರಮ, ಲಲಿತ ಕಲೆ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಒಳಗೊಂಡಿದೆ. 5 ದಿನಗಳ ಕಾಲ 6 ಹಂತಗಳಲ್ಲಿ ನಡೆಯುವ ಸ್ಪರ್ಧೆಯಲ್ಲಿ ಕರ್ನಾಟಕ, ತೆಲಂಗಾಣ, ಛತ್ತೀಸ್‍ಗಡದ ವಿವಿಗಳ ಸುಮಾರು 1250 ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ನಮ್ಮ ದೇಶದ ಸಂಸ್ಕೃತಿಯನ್ನು ಯುವ ಸಮುದಾಯಕ್ಕೆ ಪರಿಚಯಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಕುಲಪತಿ ಪೆÇ್ರ.ಎ.ಎನ್.ಸಂತೋಷ್‍ಕುಮಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಾರ್ಯಕ್ರಮದ ಉದ್ಘಾಟನೆ ಅಂದು ಬೆಳಗ್ಗೆ 11 ಗಂಟೆಗೆ ವಿವಿಯ ಫುಟ್‍ಬಾಲ್ ಅಂಗಳದಲ್ಲಿ ನಡೆಯಲಿದ್ದು, ಗಾಯಕ ವಿಜಯಪ್ರಕಾಶ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಜೆಎಸ್‍ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜೆ.ಬೆಟಸೂರ ಮಠ ಅಧ್ಯಕ್ಷತೆ ವಹಿಸುವರು. ಭಾರತೀಯ ವಿವಿಗಳ ಅಸೋಸಿಯೇಶನ್ (ಎಐಯು) ಜಂಟಿ ಕಾರ್ಯದರ್ಶಿ ಡಾ.ಬಲ್ಜಿತ್ ಸಿಂಗ್ ಸೆಕ್ಹಾನ್, ಪೆÇ್ರ.ಚಾನ್ಸಲರ್ ಡಾ.ಸುರೇಶ್ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಅದೇ ದಿನ ಸಂಜೆ 3 ಗಂಟೆಗೆ ವಿವಿಧ ಕಲೆ, ಪ್ರಾದೇಶಿಕ ನೃತ್ಯ, ಸಂಗೀತವನ್ನೊಳಗೊಂಡ ಮಿನಿ ದಸರಾ ಮಾದರಿಯ ವಿಶೇಷ ಸಾಂಸ್ಕೃತಿಕ ಜಾಥಾ ಹಮ್ಮಿಕೊಳ್ಳಲಾಗಿದೆ. 26ರಂದು ಬೆಳಗ್ಗೆ 10.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಗುವುದು ಎಂದು ತಿಳಿಸಿದರು.
ನ್ಯಾನೊ ಉಪಗ್ರಹ ಉಡಾವಣೆ
ಸೂಕ್ಷ್ಮ ಗುರುತ್ವಾಕರ್ಷಣ ವಲಯದಲ್ಲಿ ಔಷಧಿಗಳ ಪರಿಣಾಮ ಕುರಿತು ಅಧ್ಯಯನ ಮಾಡುವ ಸಲುವಾಗಿ ಇಸ್ರೋ ಸಹಯೋಗದಲ್ಲಿ ಜೆಎಸ್‍ಎಸ್ ನ್ಯಾನೋ ಉಪಗ್ರಹ ಉಡಾವಣೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ನಮ್ಮ ವಿವಿಯ ಸುಮಾರು 60 ವಿದ್ಯಾರ್ಥಿಗಳು, ಬೋಧಕರು ಈ ಕಾರ್ಯದಲ್ಲಿ ನಿರತರಾಗಿದ್ದಾರೆ. ಉಪಗ್ರಹ ಸುಮಾರು 1.5 ಕೆಜಿ ತೂಕ ಇರಲಿದ್ದು, ಸುಮಾರು 1.25 ಕೋಟಿ ವೆಚ್ಚವಾಗಲಿದೆ. ಏಪ್ರಿಲ್‍ನಲ್ಲಿ ಉಡಾವಣೆ ಮಾಡುವ ನಿರೀಕ್ಷೆಯಿದ್ದು, ವಿವಿಯಿಂದಲೇ ಮಾನಿಟರಿಂಗ್ ಮಾಡಲಾಗುತ್ತದೆ. ಕರ್ನಾಟಕದಲ್ಲಿ ಉಪಗ್ರಹ ಉಡಾವಣೆ ಮಾಡುತ್ತಿರುವ ಮೊದಲ ವಿವಿ ನಮ್ಮದು ಎಂದು ಕುಲಪತಿ ಪೆÇ್ರ.ಎ.ಎನ್.ಸಂತೋಷ್‍ಕುಮಾರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕುಲಸಚಿವ ಎಸ್.ಎ.ಧನರಾಜ್, ಪರೀಕ್ಷಾ ನಿಯಂತ್ರಣಾಧಿಕಾರಿ ಪೆÇ್ರ.ಪಿ.ನಂಜುಂಡಸ್ವಾಮಿ, ಅಧ್ಯಾಪಕರಾದ ನಟರಾಜ್, ನಾಗೇಂದ್ರಪ್ರಸಾದ್ ಇದ್ದರು.