ಫೆ 22 ರಂದು ಸಂತ ಶ್ರೀ ಸೇವಾಲಾಲ ಮಹಾರಾಜರ 284ನೇ ಜಯಂತಿ ಆಚರಣೆ

ಕಲಬುರಗಿ.ಫೆ.20: ಪ್ರತಿವರ್ಷದಂತೆ ಈ ವರ್ಷವೂ ಕೂಡಾ ಬಂಜಾರಾ ಸಮಾಜದ ದೈವಗುರು ಸಂತ ಶ್ರೀ ಸೇವಾಲಾಲ ಮಹಾರಾಜರ 284ನೇ ಜಯಂತಿ ಉತ್ಸವವನ್ನು ಬಂಜಾರಾ ಸಮಾಜದ ವತಿಯಿಂದ ಫೆಬ್ರವರಿ 22. ಬುಧುವಾರ ರಂದು ನಗರದ ಐವಾನ-ಶಾಹಿ ಹತ್ತಿರವಿರುವ ಬಂಜಾರಾ ಭವನದಲ್ಲಿ ಆಚರಿಸಲು ಸಮಾಜದ ಎಲ್ಲಾ ಮುಖಂಡರು ಹಾಗೂ ಎಲ್ಲಾ ಭಕ್ತದಿಗಳು ಆಗಮಿಸಬೇಕೆಂದು ಸಮಾಜದ ಅಧ್ಯಕ್ಷ ಶ್ಯಾಮರಾವ ಪವಾರ ತಿಳಿಸಿದ್ದಾರೆ.
ಈ ಕಾರ್ಯಕ್ರಮಕ್ಕೆ ಬಂಜಾರಾ ಸಮಾಜದ ಕಾಶಿಯೆಂದು ಕರೆಯಲ್ಪಡುವ ಪೌರಾದೇವಿ ಶಕ್ತಿಪೀಠದ ಪೀಠಾಧಿಪತಿ ಶ್ರೀ ಶ್ರೀ ಬಾಬುಸಿಂಗ ಮಹಾರಾಜರು, ಸಂಸದ ಡಾ.ಉಮೇಶ ಜಾಧವ, ಬಂಜಾರ ಸಮಾಜದ ಮುಖಂಡ ಸೈನಿಕ ರಾಠೋಡ, ಪಾಲಿಕೆ ಸದಸ್ಯ ಕೃಷ್ಣಾ ನಾಯಕ, ಸೇವಾಲಾಲ ಆರ್ಮಿ ಈಶ್ವರ ರಾಠೋಡ, ಬಂಜಾರ ಮುಖಂಡರಾದ ಮಹೇಶ ಚವ್ಹಾಣ, ಶಿವು ರಾಠೋಡ, ಸೇವಾಲಾಲ ಸಮಿತಿಯ ಪ್ರ.ಕಾರ್ಯದರ್ಶಿ ವಿನೋದ ಚವ್ಹಾಣ ಹಾಗೂ ಸಮಾಜದ ಎಲ್ಲಾ ಸಂತರು ಎಲ್ಲಾ ತಾಂಡಾದ ನಾಯಕ ಕಾರಭಾರಿ ಡಾವ್, ರಾಜಕೀಯ ಧುರಿಣರು ಹಾಗೂ ಎಲ್ಲಾ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉದ್ಯೋಗಪತಿಗಳು ಎಲ್ಲಾ ಯುವಕರು, ಸೇರಿ ನಗರದ ನಗರೇಶ್ವರ ಶಾಲೆಯಿಂದ ಸಮಾಜದ ಭಜನೆ ನೃತ್ಯ, ಬ್ಯಾಂಜೊ, ಡೀಜೆ ಮುಖಾಂತರ ಭವ್ಯ ಶೋಭ ಯಾತ್ರೆಯು ನಗರದ ಮುಖ್ಯ ರಸ್ತೆಯಿಂದ ಸಾಗುವದು. (ಕಿರಾಣಾ ಬಜಾರ, ಸುಪರ ಮಾರ್ಕೇಟ್, ಜಗತ್ ಸರ್ಕಲ್, ಲಾಹೋಟಿ ಪೆಟ್ರೋಲ್ ಪಂಪ್) ದಿಂದ ಬಂಜಾರಾ ಭವನಕ್ಕೆ ತೆರಳಿ ಧಾರ್ಮಿಕ ಕಾರ್ಯಕ್ರಮಗಳು ಜರುಗುವುದು, ಮಧ್ಯಾಹ್ನ 3.15. ಕ್ಕೆ ಸಂತ ಸೇವಾಲಾಲಾ ಮಹಾರಾಜರ (ಭೋಗ) ಪೂಜೆ ನೆರವೇರುವುದು. ಕಾರಣ ಈ ಕಾರ್ಯಕ್ರಮಕ್ಕೆ ಬಂಜಾರಾ ಸಮಾಜದ ಜಿಲ್ಲೆಯ ಎಲ್ಲಾ ತಾಂಡಾದಿಂದ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪ್ರಸಾದವನ್ನು ಸ್ವೀಕರಿಸಿ ಪುನಿತರಾಗಬೇಕೆಂದು ತಿಳಿಸಿದ್ದಾರೆ.