ಫೆ.18 ರಂದು ದಲಿತ ವಿದ್ಯಾರ್ಥಿ ಪರಿಷತ್ ರಾಜ್ಯ ಸಮ್ಮೇಳನ

ಕಲಬುರಗಿ: ಫೆ.14:ಬೆಂಗಳೂರಿನ ರಾಜ್ಯ ಸರ್ಕಾರದ ಸಚಿವಾಲಯ ಕ್ಲಬ್, ಕಬ್ಬನ್ ಪರ್ಕ್ ಆವರಣದಲ್ಲಿ ಫೆ.18 ರಂದು ದಲಿತ ವಿದ್ಯರ್ಥಿ ಪರಿಷತ್ ರಾಜ್ಯ ಸಮ್ಮೇಳನ ಹಾಗೂ ರಾಜ್ಯ ಮಟ್ಟದ ಡಾ. ಬಿ. ಆರ್. ಅಂಬೇಡ್ಕರ್ ರವರ ಸ್ಪರ್ಧಾತ್ಮಕ ಪರೀಕ್ಷೆಯ ವಿಜೇತರಿಗೆ ಬಹುಮಾನ ವಿತರಣಾ ಸಮಾರಭವನ್ನೂ ಹಮ್ಮಿಕೊಂಡಿದೆ ಎಂದು ದಲಿತ ವಿದ್ಯರ್ಥಿ ಪರಿಷತ್ ಜಿಲ್ಲಾ ಅಧ್ಯಕ್ಷ ಜಗದೇವ ಎಸ್ ಕುಂಬಾರ ತಿಳಿಸಿದ್ದಾರೆ.

ಪಟ್ಟಣದ ಕಾರ್ಯನಿರತ ಪತ್ರಕರ್ತರ ಸಂಘದ ಕಛೇರಿಯ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ವಿದ್ಯಾರ್ಥಿ,ಯುವಜನರ ಹಕ್ಕುಗಳಿಗಾಗಿ ಮತ್ತು ಅವರ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿರುವ ದಲಿತ ವಿದ್ಯರ್ಥಿ ಪರಿಷತ್ ರಾಜ್ಯ ಮಟ್ಟದ ಸಮ್ಮೇಳನ ಹಾಗೂ ಡಾ ಬಿ ಆರ್ ಅಂಬೇಡ್ಕರ್ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಸಮಾರಂಭ ಫೆಬ್ರವರಿ 18ರಂದು ನಡೆಯಲಿದೆ. ಈ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಮತ್ತು ಐಟಿಬಿಟಿ ಸಚಿವರು ಹಾಗೂ ಕರಬುರಗಿ ಜಿಲ್ಲಾ ಸಚಿವರಾದ ಪ್ರೀಯಾಂಕ್ ಖರ್ಗೆಜೀ, ದಲಿತ ವಿದ್ಯಾರ್ಥಿ ಪರಿಷತ್ ರಾಜ್ಯ ಅಧ್ಯಕ್ಷ ಶ್ರೀನಾಥ ಪೂಜಾರಿ, ಬಾಲಾಜಿ ಕಾಂಬಳೆ, ಹಾಗೂ ನಾಡಿನ ಹೆಸರಾಂತ ಘನ್ಯ ವ್ಯಕ್ತಿಗಳು ಸಾಹಿತಿಗಳು ಲೇಖಕರು ಚಿಂತಕರು ಭಾಗಿಯಾಗಲಿದ್ದಾರೆ.

ದಲಿತ ವಿದ್ಯಾರ್ಥಿ ಪರಿಷತ್ ಪ್ರತಿ ವರ್ಷ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ಅವರ ಕುರಿತು ರಾಜ್ಯ ಮಟ್ಟದಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಏರ್ಪಡಿಸುತ್ತ ಬಂದಿದೆ. ಕಳೆದ ವರ್ಷವೂ ಪರೀಕ್ಷೆ ನಡೆಸಲಾಗಿದೆ. ರಾಜ್ಯದ ಎಲ್ಲ ಜಿಲ್ಲೆಯ ವಿದ್ಯಾರ್ಥಿಗಳು ಭಾಗವಹಿಸಿದ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದವರಿಗೆ ಪ್ರಥಮ ಬಹುಮಾನ 5ಲಕ್ಷ, ದ್ವಿತೀಯ ಬಹುಮಾನ 3ಲಕ್ಷ, ತೃತೀಯ ಬಹುಮಾನ 1ಲಕ್ಷ, ಮತ್ತು ಪ್ರತಿ ಜಿಲ್ಲಾ ಮಟ್ಟದಲ್ಲಿ ಪ್ರಥಮ ಬಂದವರಿಗೆ 15ಸಾವಿರ, ದ್ವಿತೀಯ 10ಸಾವಿರ, ತೃತೀಯ 5ಸಾವಿರ ರೂಪಾಯಿ ಬಹುಮಾನವನ್ನು ಪರಿಷತ್ತಿನಿಂದ ಕೊಡಲಾಗುತ್ತಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ದಲಿತ ವಿದ್ಯಾರ್ಥಿ ಪರಿಷತ್ ರಾಜ್ಯ ಸಂಚಾಲಕರ ಸುರೇಶ್ ಕಟ್ಟಿಮನಿ, ಜಿಲ್ಲಾ ಕಾರ್ಯದರ್ಶಿ ಮೈಲಾರಿ ದೊಡ್ಡಮನಿ, ಜಿಲ್ಲಾ ನಗರ ಅಧ್ಯಕ್ಷ ಸಚಿನ್ ಪ್ರಸಾದ್, ಚಿತ್ತಾಪೂರ ಅಧ್ಯಕ್ಷ ಪೃಥ್ವಿರಾಜ್ ಸಾಗರ, ಸೇರಿದಂತೆ ಇತರರು ಇದ್ದರು.